ಕರ್ನಾಟಕ

karnataka

ETV Bharat / bharat

ಕೇರಳ ವಿಧಾನಸಭೆಯಲ್ಲಿ 'ಮಹಿಳಾ ಶಕ್ತಿ'..ಶಾಸಕಿಯರಾಗಿ ಇಷ್ಟೊಂದು ಮಹಿಳೆಯರ ಆಯ್ಕೆ - ಕೇರಳ ವಿಧಾನಸಭಾ ಚುನಾವಣೆ ಸುದ್ದಿ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಹಿಳಾ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು, 2001ರ ಬಳಿಕ ಇಷ್ಟೊಂದು ಶಾಸಕಿಯರು ಇಲ್ಲಿನ ವಿಧಾನಸಭೆಗೆ ಪ್ರವೇಶ ಪಡೆದುಕೊಳ್ಳಲಿದ್ದಾರೆ.

women legislators of Kerala's 15th Assembly
women legislators of Kerala's 15th Assembly

By

Published : May 6, 2021, 7:05 PM IST

ತಿರುವನಂತಪುರಂ: ಕೇರಳ ವಿಧಾನಸಭೆ ಫಲಿತಾಂಶ ಈಗಾಗಲೇ ಬಹಿರಂಗಗೊಂಡಿದ್ದು, 140 ಕ್ಷೇತ್ರಗಳ ಪೈಕಿ 91 ಸ್ಥಾನಗಳಲ್ಲಿ ಎಲ್​ಡಿಎಫ್​ ಗೆಲುವು ದಾಖಲು ಮಾಡಿ, ಸರ್ಕಾರ ರಚನೆ ಮಾಡಲು ಮುಂದಾಗಿದೆ.

ಆದರೆ, ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಹಿಳೆಯರು ಆಯ್ಕೆಯಾಗಿರುವುದು ವಿಶೇಷವಾಗಿದೆ. 2016ರ ವಿಧಾನಸಭೆ ಚುನಾವಣೆಯಲ್ಲಿ 8 ಮಹಿಳೆಯರು ಆಯ್ಕೆಯಾಗಿದ್ದರು. ಆದರೆ, ಈ ಸಲ 11 ಮಹಿಳೆಯರು ವಿಧಾನಸಭೆ ಪ್ರವೇಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಫಸ್ಟ್​ ಮಿಲ್ಕ್​ ಟ್ರೈನ್​: 45,000 ಲೀಟರ್ ಹಾಲು ಹೊತ್ತು ನಾಗ್ಪುರದಿಂದ ದೆಹಲಿಯತ್ತ ಪ್ರಯಾಣ

2001ರ ಬಳಿಕ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. 10 ಮಹಿಳೆಯರು ಎಲ್​ಡಿಎಫ್​ ಹಾಗೂ ಒಬ್ಬರು ಯುಡಿಎಫ್​​ನಿಂದ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ 103 ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಆರ್​ಎಂಪಿ ನಾಯಕಿ ಕೆ.ಕೆ ರಮಾ ಯುಡಿಎಫ್​ನಿಂದ ಗೆದ್ದಿರುವ ಏಕೈಕ ಮಹಿಳಾ ಶಾಸಕಿಯರಾಗಿದ್ದಾರೆ. ಆರೋಗ್ಯ ಸಚಿವೆ ಕೆ.ಕೆ ಶೈಲಜಾ ದಾಖಲೆಯ 60 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ.

ಪ್ರಮುಖವಾಗಿ ವೀಣಾ ಜಾರ್ಜ್​, ಸಿ.ಕೆ ಆಶಾ ಮತ್ತು ಯು. ಪ್ರತಿಭಾ ಎರಡನೇ ಅವಧಿಗೆ ಶಾಸಕಿಯರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್​ನ ಪಿ.ಕೆ ಜಯಲಕ್ಷ್ಮೀ, ಉಸ್ಮಾನ್​, ಬಿಂದು ಕೃಷ್ಣಾ ಹಾಗೂ ಬಿಜೆಪಿಯ ಶೋಭಾ ಸುರೇಂದ್ರನ್​ ಸೋಲು ಕಂಡಿದ್ದಾರೆ.

ABOUT THE AUTHOR

...view details