ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಬಂಡಿಪೋರಾದ ಈ ಪೋರಿಯ ಸಾಧನೆ ಆಕಾಶದೆತ್ತರ! - ಸ್ನೋ ಸ್ಕೀಯಿಂಗ್

ಮಾರ್ಷಲ್ ಆರ್ಟ್ಸ್ ಕಲೆ ಕರಗತಮಾಡಿಕೊಂಡ ಆಕೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ತಂತ್ರಗಳನ್ನು ಕಲಿಯುವುದು ಬಹಳ ಮುಖ್ಯ ಎಂದಿದ್ದಾಳೆ. ತನ್ನ ಹೆಸರಿನಲ್ಲಿ 4 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಹೊಂದಿದ್ದಾಳೆ.

bandipora
ಕಾಶ್ಮೀರ

By

Published : Jan 5, 2021, 7:20 AM IST

ಕಾಶ್ಮೀರ:ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಷಾ ಪರಿಹಾನ್ ಪೀರ್ಜಾಡಾಗೆ ವಯಸ್ಸು ಕೇವಲ 17 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಯೋಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿದ್ದಾಳೆ. ಸಮರ ಕಲೆಗಳಲ್ಲಿಯೂ ಈಕೆ ತನ್ನ ಹೆಸರಿನಲ್ಲಿ 4 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಹೊಂದಿದ್ದಾಳೆ.

ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಷಾ ಪರಿಹಾನ್ ಪೀರ್ಜಾಡಾ

ಪರಿಹಾನ್ ತನ್ನ ವೃತ್ತಿಜೀವನವನ್ನು ಕೇವಲ 6 ವರ್ಷದವಳಿದ್ದಾಗ ಪ್ರಾರಂಭಿಸಿದಳು.

ಸ್ನೋ ಸ್ಕೀಯಿಂಗ್‌ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಆಕೆ, ಅದರೊಂದಿಗೆ ಸಮರ ಕಲೆಗಳು ಹಾಗೂ ಯೋಗ ಸೇರಿದಂತೆ ಇತರ ಕ್ರೀಡೆಗಳಲ್ಲಿ ತರಬೇತಿ ಪಡೆದಿದ್ದಾಳೆ. ಅಷ್ಟೇ ಅಲ್ಲದೇ ಪರಿಹಾನ್ ಉತ್ತಮ ಗಾಯಕಿಯೂ ಹೌದು. ತನ್ನ ಆಲೋಚನೆಗಳನ್ನು ಕ್ಯಾನ್ವಾಸ್‌ನಲ್ಲಿ ಚಿತ್ರಿಸುವ ಹವ್ಯಾಸ ಹೊಂದಿದ್ದಾಳೆ.

ತಾನು 6 ವರ್ಷದವಳಿದ್ದಾಗಲೇ ತನ್ನ ಕ್ರೀಡಾ ವೃತ್ತಿಜೀವನ ಪ್ರಾರಂಭಿಸಿದೆ. ತಾನು ಮೊದಲು ಆಡಿದ ಆಟ ಸ್ನೋ ಸ್ಕೀಯಿಂಗ್ ಎಂದು ಪರಿಹಾನ್ ಹೇಳಿದ್ದಾರೆ.

ಇದನ್ನೂ ಓದಿ:ಡಿಡಿಸಿ ಚುನಾವಣೆ: ಕಾಶ್ಮೀರ ಬಿಜೆಪಿಯ ಮೊದಲ ಮಹಿಳಾ ವಿಜೇತೆ ಮಿನ್ಹಾ ಲತೀಫ್

ಇನ್ನು ಮಾರ್ಷಲ್ ಆರ್ಟ್ಸ್ ಕಲೆ ಕರಗತಮಾಡಿಕೊಂಡ ಆಕೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ತಂತ್ರಗಳನ್ನು ಕಲಿಯುವುದು ಬಹಳ ಮುಖ್ಯ ಎಂದಿದ್ದಾಳೆ. ನಾನು ಆಯ್ಕೆ ಮಾಡಿದ ಮತ್ತು ಆಡಿದ ಮೂರನೇ ಕ್ರೀಡೆ ಯೋಗ, ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ, ಎನ್ನುತ್ತಾಳೆ ಪರಿಹಾನ್.

ಸ್ನೋ ಸ್ಕೀಯಿಂಗ್ ಆಡಲು ಪ್ರಾರಂಭಿಸಿದಾಗ ನಾನು ಇನ್ನೂ ಚಿಕ್ಕವಳಾಗಿದ್ದೆ. ಈ ವಿಭಾಗದಲ್ಲಿ ನನಗೆ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಒಲಿಂಪಿಯನ್ ಗುಲ್ ಮುಸ್ತಫಾ ದೇವ್ ತರಬೇತಿ ನೀಡಿದರು. ಅವರು ನನ್ನ ಸ್ಫೂರ್ತಿ ಹಾಗೂ ಅವರು ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ, ಎಂದು ಪರಿಹಾನ್ ಹೇಳುತ್ತಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮಹಿಳಾ ಯೋಗ ಬೋಧಕರಾಗಿ ಜಿಲ್ಲಾಡಳಿತ ಅವರನ್ನು ಆಹ್ವಾನಿಸಿತ್ತು. ಇದಲ್ಲದೇ, ತಾನು ಉತ್ತಮ ಗಾಯಕಿ. ಬಂಡಿಪೋರಾದ ಸ್ಥಳೀಯ ಜಿಮ್ ಕೇಂದ್ರದಲ್ಲಿ ಮಹಿಳಾ ಬೋಧಕಿಯಾಗಿದ್ದೇನೆ ಎಂದು ಪರಿಹಾನ್ ಹೇಳುತ್ತಾರೆ.

ABOUT THE AUTHOR

...view details