ಕಠ್ಮಂಡು:ನೇಪಾಳದ ನೈಟ್‌ಕ್ಲಬ್‌ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ದೃಶ್ಯಗಳು ನಿನ್ನೆ ಲಭ್ಯವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟ್ವೀಟಾಟಿಕೆ ಮುಂದುವರಿದಿದೆ. 'ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ನಾಯಕ ನೈಟ್‌ಕ್ಲಬ್‌ಗಳಲ್ಲಿ ತಿರುಗುತ್ತಿದ್ದಾರೆ' ಎಂಬ ಟೀಕೆಯನ್ನು ಬಿಜೆಪಿ ಮಾಡುತ್ತಿದ್ರೆ, ಕಾಂಗ್ರೆಸ್ 'ಅದೊಂದು ವೈಯಕ್ತಿಕ ಭೇಟಿಯಾಗಿದೆ' ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ಮದುವೆಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ.
ಸುಮ್ನಿಮಾ ಉದಾಸ್ ಒಬ್ಬರು ಪತ್ರಕರ್ತೆ. ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಯಾದ CNN ಇಂಟರ್‌ನ್ಯಾಶನಲ್‌ಗೆ ದೆಹಲಿ ವರದಿಗಾರರಾಗಿದ್ದಾರೆ. ಇವರು ಭಾರತದ ಪ್ರಮುಖ ರಾಜಕೀಯ ಬೆಳವಣಿಗೆಗಳ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಅನೇಕ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ದೇಶದಲ್ಲಿ ಸಂಚಲನ ಮೂಡಿಸಿದ ದೆಹಲಿ ಗ್ಯಾಂಗ್ರೇಪ್ ಪ್ರಕರಣ, ಮಲೇಷ್ಯಾ ವಿಮಾನ ಅಪಘಾತ ಮತ್ತು ಕಾಮನ್‌ವೆಲ್ತ್ ಭ್ರಷ್ಟಾಚಾರ ಹಗರಣದ ಬಗೆಗೂ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಸುಮ್ನಿಮಾ 2001 ರಿಂದ 2017 ರವರೆಗೆ ಸಿಎನ್‌ಎನ್‌ಗಾಗಿ ಕೆಲಸ ಮಾಡಿದ್ದಾರೆ ಮತ್ತು 2018 ರಿಂದ ಲುಂಬಿನಿ ಮ್ಯೂಸಿಯಂನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕರೂ ಹೌದು.