ಕರ್ನಾಟಕ

karnataka

ETV Bharat / bharat

ಒಂದೇ ಗ್ರಾಮದ ಯುವಕ - ಯುವತಿ ಮದ್ವೆ ನಿಷಿದ್ಧ: ಪ್ರೇಮಿ ಜೋಡಿಗಳ ಬೇರ್ಪಡೆಗೆ ಫರ್ಮಾನು

ಮದುವೆಯಾದ ಯುವಕ ಹಾಗೂ ಯುವತಿ ಒಂದೇ ಗೋತ್ರ ಹಾಗೂ ಗ್ರಾಮದವರಾದ ಕಾರಣ ಬಿಜೆಪಿ ಮುಖಂಡ ಸಂಗೀತ್ ಸಿಂಗ್ ಸೋಮ್ ಹಾಗೂ ಸ್ಥಳೀಯರು ಅದೇ ಗ್ರಾಮದ ಪ್ರೇಮಿಗಳ ವಿವಾಹ ಅಕ್ರಮ ಎಂದು ಪಂಚಾಯಿತಿಯಲ್ಲಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಮದುವೆ ರದ್ದುಗೊಳಿಸಬೇಕು ಎಂದು ಮಹಾ ಪಂಚಾಯತ್‌ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, ತನು ಈಗ ಮುಂದಿನ ಐದು ದಿನಗಳಲ್ಲಿ ಶಿವಂನಿಂದ ದೂರವಾಗಬೇಕಿದೆ.

ಒಂದೇ ಗ್ರಾಮದ ಯುವಕ-ಯುವತಿಯ ಮದ್ವೆ ನಿಷಿದ್ಧ: ಪ್ರೇಮಿಜೋಡಿಗಳ ಬೇರ್ಪಡೆಗೆ ಫರ್ಮಾನು
meerut-panchayat-decision-for-married-couple-panchayat-tughlaqi-decree

By

Published : Oct 4, 2022, 5:35 PM IST

ಮೀರತ್: ಪ್ರೇಮಿಗಳ ಜೋಡಿಯೊಂದು ದೇವಸ್ಥಾನದಲ್ಲಿ ವಿವಾಹವಾದ ವಿಷಯ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸದ್ಯ ಈ ಇಬ್ಬರೂ ಬೇರ್ಪಡಬೇಕೆಂದು ಫರ್ಮಾನು ಹೊರಡಿಸಲಾಗಿದೆ. ಇದರಿಂದ ಕಂಗಾಲಾದ ಪ್ರೇಮಿ ಜೋಡಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದೆ.

ವಿವಾಹವಾದ ಜೋಡಿ

ಏನಿದು ಪ್ರಕರಣ?: ಮದುವೆ ಮಾಡಿಕೊಂಡ ಯುವಕ - ಯುವತಿ ಒಂದೇ ಗ್ರಾಮದವರು. ಒಂದೇ ಊರಿನವರಾದ ಕಾರಣ ಇಬ್ಬರೂ ಅಣ್ಣ-ತಂಗಿಯಂತೆ ಎಂಬುದು ಪಂಚಾಯಿತಿಯ ವಾದವಾಗಿದೆ. ಯುವಕ ಮತ್ತು ಯುವತಿಯ ಕುಟುಂಬಸ್ಥರು ಕೂಡ ಇಬ್ಬರ ಜೊತೆ ಬೆಂಬಲಕ್ಕೆ ನಿಲ್ಲುತ್ತಿಲ್ಲ.

ಯುವಕ ಶಿವಂ ಮತ್ತು ಯುವತಿ ತನು ಸರ್ದಾನದ ಡಿಗ್ರಿ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು. ಇಬ್ಬರೂ ಸ್ನೇಹಿತರಾಗಿದ್ದು, ನಂತರ ಪ್ರೀತಿಸುತ್ತಿದ್ದರು. ಆ ನಂತರ ಇಬ್ಬರೂ ಮದುವೆಯಾದರು. ಮದುವೆಯಾದ ಯುವಕ ಮತ್ತು ಯುವತಿ ಇಬ್ಬರೂ ಒಂದೇ ಗ್ರಾಮದ ನಿವಾಸಿಗಳು. ಇಬ್ಬರ ಮದುವೆ ವಿಚಾರ ತಿಳಿದ ತಕ್ಷಣ ಎರಡೂ ಮನೆಯವರು ಒಂದೇ ಊರಿನ ಹುಡುಗ - ಹುಡುಗಿಯರು ಅಣ್ಣ-ತಂಗಿ, ಅಕ್ಕ-ತಮ್ಮ ಇದ್ದಂತೆ. ಇವರಿಬ್ಬರೂ ಮಾಡಿರುವುದು ಅಪರಾಧ. ಹೀಗಾಗಿ ಈ ಮದುವೆಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದುಬಿಟ್ಟರು.

ಮಹಾಪಂಚಾಯ್ತಿಯಲ್ಲಿ ತೀರ್ಪು:ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದನ್ನು ವಿರೋಧಿಸಿ ಸಮಾಜದ ಮಹಾಪಂಚಾಯತ್ ಭಾನುವಾರ (ಅಕ್ಟೋಬರ್ 2) ನಡೆದಿದೆ. ಈ ವೇಳೆ ಪೊಲೀಸರೂ ಸ್ಥಳದಲ್ಲಿ ಹಾಜರಿದ್ದರು. ಬಿಜೆಪಿ ಮುಖಂಡ ಸಂಗೀತ್ ಸಿಂಗ್ ಸೋಮ್ ಕೂಡ ಪಂಚಾಯ್ತಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಮದುವೆಯಾದ ಯುವಕ ಹಾಗೂ ಯುವತಿ ಒಂದೇ ಗೋತ್ರ ಹಾಗೂ ಗ್ರಾಮದವರಾದ ಕಾರಣ ಬಿಜೆಪಿ ಮುಖಂಡ ಸಂಗೀತ್ ಸಿಂಗ್ ಸೋಮ್ ಹಾಗೂ ಸ್ಥಳೀಯರು ಅದೇ ಗ್ರಾಮದ ಪ್ರೇಮಿಗಳ ವಿವಾಹ ಅಕ್ರಮ ಎಂದು ಪಂಚಾಯಿತಿಯಲ್ಲಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಹಾಗಾಗಿ ಈ ಮದುವೆಯನ್ನು ರದ್ದುಗೊಳಿಸಬೇಕು ಎಂದು ಮಹಾಪಂಚಾಯತ್‌ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, ತನು ಈಗ ಮುಂದಿನ ಐದು ದಿನಗಳಲ್ಲಿ ಶಿವಂನಿಂದ ದೂರವಾಗಬೇಕಿದೆ.

ತೀರ್ಪಿನಂತೆ ನಡೆಯದಿದ್ದರೆ ಬಹಿಷ್ಕಾರದ ಎಚ್ಚರಿಕೆ:ಈ ಇಡೀ ವಿಚಾರದಲ್ಲಿ ತನುವನ್ನು ಸಮಾಜಕ್ಕೆ ಒಪ್ಪಿಸುವ ಜವಾಬ್ದಾರಿಯನ್ನು ಶಿವಂ ನ ತಂದೆಗೆ ನೀಡಲಾಗಿದೆ. ಶಿವಂ ನ ತಂದೆ ಈ ತೀರ್ಪಿನಂತೆ ನಡೆಯದಿದ್ದರೆ, ಅವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಲಾಗಿದೆ. ಈ ಮಧ್ಯೆ ಯುವಕ ಮತ್ತು ಯುವತಿ ಸಹಾಯ ಕೋರಿ ಏಳು ದಿನಗಳ ಹಿಂದೆ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ಅವರನ್ನು ಭೇಟಿ ಮಾಡಿದ್ದರು.

ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸಮಗ್ರ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.

ಯುವಕ -ಯುವತಿ ಮೇಲೆ ಸಾಮಾಜಿಕ ಒತ್ತಡ:ಒಂದೇ ಗ್ರಾಮದ ಪ್ರೇಮಿಗಳಿಬ್ಬರು ಮದುವೆ ಮಾಡಿಕೊಂಡಿರುವುದರಿಂದ ಈಗ ಎರಡೂ ಕುಟುಂಬಗಳ ಮೇಲೆ ಸಾಮಾಜಿಕ ಒತ್ತಡ ಜಾಸ್ತಿಯಾಗತೊಡಗಿದೆ. ಯುವತಿಯ ಮನೆಯವರು ತಾವು ಬಡವರು ಎಂದು ಹೇಳಿಕೊಂಡಿದ್ದಾರೆ. ಅದೇ ಯುವಕನ ಮನೆತನ ಬಲಿಷ್ಠವಾಗಿದೆ ಎಂದು ಹೇಳಲಾಗಿದೆ.

ತಮ್ಮ ಮಗಳನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಯೋಜನೆ ಮಾಡಿದ್ದೆವು. ಆದರೆ ಮಗಳು ಇಂಥ ಕೆಲಸ ಮಾಡುತ್ತಾಳೆ ಅನಿಸಿರಲಿಲ್ಲ. ಒಂದು ವೇಳೆ ಮಗಳು ಮರಳಿ ಬಂದರೆ ಆಕೆಗೆ ಬೇರೆ ಮದುವೆ ಮಾಡುತ್ತೇವೆ. ಒಂದು ವೇಳೆ ಬರದಿದ್ದರೆ ಕುಟುಂಬ ಸಮೇತ ಊರು ಬಿಟ್ಟು ಹೋಗುವುದಾಗಿ ಯುವತಿ ಮನೆಯವರು ಹೇಳಿದ್ದಾರೆ.

ಇದನ್ನು ಓದಿ: ಪ್ರೀತಿ ಹೆಸರಲ್ಲಿ ಬಾಲಕಿಯ ಅತ್ಯಾಚಾರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ABOUT THE AUTHOR

...view details