ವಿಕಾರಾಬಾದ್ (ತೆಲಂಗಾಣ) : ಡ್ರೋಣ್ಗಳ ಮೂಲಕ ವಿವಿಧ ಪ್ರದೇಶಗಳಿಗೆ ಔಷಧಿ ಸಾಗಾಣಿಕೆ ಮಾಡುವ ಯೋಜನೆಗೆ ತೆಲಂಗಾಣ ಸರ್ಕಾರ ಚಾಲನೆ ನೀಡಿದೆ. ವಿನೂತನ ಪ್ರಯೋಗಕ್ಕೆ ಇಲ್ಲಿನ ಐಟಿ ಸಚಿವ ಕೆಟಿಆರ್ ಹಾಗೂ ಶಿಕ್ಷಣ ಸಚಿವ ಸಬಿತಾ ಚಾಲನೆ ನೀಡಿದರು.
ದೂರದ ಪ್ರದೇಶಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಔಷಧಿ ಸಾಗಿಸುವ ಯೋಜನೆ ಇದಾಗಿದೆ. ತುರ್ತು ಸಂದರ್ಭಗಳಲ್ಲಿ ಔಷಧಿ ಹಾಗೂ ಲಸಿಕೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಡ್ರೋಣ್ ಮೂಲಕ ಔಷಧಿ ಸಾಗಾಣಿಕೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಡ್ರೋಣ್ ಮೂಲಕ ಸುಮಾರು 40 ಕಿಲೋಮೀಟರ್ ದೂರದವರೆಗೆ 15 ಬಗೆಯ ಔಷಧಿ ಹಾಗೂ ಲಸಿಕೆ ಸಾಗಾಣಿಕೆ ಮಾಡಬಹುದಾಗಿದೆ. ಡ್ರೋಣ್ನಲ್ಲಿ ನಾಲ್ಕು ಬಾಕ್ಸ್ಗಳಿದ್ದು, ಅದರಲ್ಲಿ ಔಷಧಿಗಳನ್ನ ಇಡುವ ವ್ಯವಸ್ಥೆ ಮಾಡಲಾಗಿದೆ.
ತೆಲಂಗಾಣ ಸರ್ಕಾರ ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಡ್ರೋಣ್ ಬಳಿಕೆ ಮಾಡಲು ಪ್ರಯೋಗ ನಡೆಸುತ್ತಿದೆ. ತಂತ್ರಜ್ಞಾನ ಸಾಮಾನ್ಯ ಜನರಿಗೆ ಸಹಕಾರಿಯಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು. ತೆಲಂಗಾಣ ಸರ್ಕಾರ ಮಹಿಳೆಯರ ರಕ್ಷಣೆಗೋಸ್ಕರ ಡ್ರೋಣ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿರಿ: ಅತ್ಯಾಚಾರಕ್ಕೆ ವಿರೋಧ: 15ರ ಬಾಲೆ ಮೇಲೆ ಮಾರಣಾಂತಿಕ ಹಲ್ಲೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಪ್ರಧಾನಿ ಮೋದಿ ಕನಸು :ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜ್ಯೋತಿರಾಧಿತ್ಯ ಸಿಧಿಯಾ ಮಾತನಾಡಿ, ಏರೋಸ್ಪೇಸ್ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ಕೆಲಸ ಮಾಡುತ್ತಿದೆ. ಆಕಾಶದ ಮೂಲಕ ವಿವಿಧ ಪ್ರದೇಶಗಳಿಗೆ ಔಷಧಿ ವಿತರಣೆ ಮಾಡುವ ಬಗ್ಗೆ ಪ್ರಧಾನಿ ಮೋದಿ ಕನಸು ಕಂಡಿದ್ದರು. ಇದೀಗ ಅದು ನನಸಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಭಾಗಿಯಾಗಿದ್ದರು.
ಕರ್ನಾಟಕದಲ್ಲಿ ದೇಶದ ಮೊಟ್ಟ ಮೊದಲ ಪ್ರಯೋಗ :ಡ್ರೋಣ್ ಮೂಲಕ ಔಷಧಗಳನ್ನ ಪೂರೈಕೆ ಮಾಡುವ ಮೊಟ್ಟ ಮೊದಲ ಪ್ರಯೋಗಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಅದರಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಟಿಎಎಸ್ ಸಂಸ್ಥೆ ಹಾಗೂ ನಾರಾಯಣ ಆರೋಗ್ಯ ಸಂಸ್ಥೆ ಸಹಭಾಗಿತ್ವದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.