ಕರ್ನಾಟಕ

karnataka

ETV Bharat / bharat

Medical Student Suicide: ಪಾಟ್ನಾ ಏಮ್ಸ್ ಪಿಜಿ ವೈದ್ಯ ಆತ್ಮಹತ್ಯೆ.. - ಎಂಬಿಬಿಎಸ್ ಅಧ್ಯಯನ

Medical student commits suicide at Bihar Patna AIIMS: ಬಿಹಾರದ ರಾಜಧಾನಿ ಪಾಟ್ನಾ ಏಮ್ಸ್​ನಲ್ಲಿ ಪಿಜಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆ ವೈದ್ಯ ಹರಿಯಾಣ ನಿವಾಸಿ ನೀಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

Medical Student Suicide
ಪಾಟ್ನಾ ಏಮ್ಸ್ ಪಿಜಿ ವೈದ್ಯ ಆತ್ಮಹತ್ಯೆ

By ETV Bharat Karnataka Team

Published : Sep 2, 2023, 1:13 PM IST

Updated : Sep 2, 2023, 2:45 PM IST

ಪಾಟ್ನಾ (ಬಿಹಾರ):ಪಾಟ್ನಾ ಏಮ್ಸ್‌ನಲ್ಲಿ ಪಿಜಿ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೈದ್ಯ ಅರಿವಳಿಕೆ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ಹರಿಯಾಣ ನಿವಾಸಿ ನೀಲೇಶ್ ಕುಮಾರ್ ಎಂದು ಗುರುತಿಸಲಾಗಿದೆ. ವೈದ್ಯ ನೀಲೇಶ್​ ಅರಿವಳಿಕೆ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಏಮ್ಸ್​ನ ಪ್ರಾಧ್ಯಾಪಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಮಾಹಿತಿ ಪಡೆದ ಫುಲ್ವಾರಿ ಶರೀಫ್ ಠಾಣೆ ಪೊಲೀಸರು ಏಮ್ಸ್ ಆಸ್ಪತ್ರೆಯ ಹಾಸ್ಟೆಲ್‌ಗೆ ಭೇಟಿ ಕೊಟ್ಟು, ಕೊಠಡಿಯ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿ ವೈದ್ಯ ನೀಲೇಶ್ ಹಾಸಿಗೆ ಮೇಲೆ ಶವವಾಗಿ ಮಲಗಿದ್ದರು. ಪೊಲೀಸರು ನೀಲೇಶ್ ಕೋಣೆಯನ್ನು ಸೀಲ್ ಮಾಡಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಾಹಿತಿಯ ಪ್ರಕಾರ, ನಿಲೇಶ್ ಅವರು 2016 ರಿಂದ 2021 ರ ಬ್ಯಾಚ್ ವರೆಗೆ ಪಾಟ್ನಾ ಏಮ್ಸ್‌ನಲ್ಲಿ ತಮ್ಮ ಎಂಬಿಬಿಎಸ್ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಅಲ್ಲಿಯೇ ಅಭ್ಯಾಸ ಪ್ರಾರಂಭಿಸಿದರು. ನವೆಂಬರ್ 2022 ರಲ್ಲಿ, ಅವರು ಪಾಟ್ನಾ ಏಮ್ಸ್‌ನಲ್ಲಿಯೇ ಪಿಜಿಗೆ ಪ್ರವೇಶ ಪಡೆದರು. ವ್ಯಾಸಂಗದ ಜೊತೆಗೆ ಆಸ್ಪತ್ರೆಯಲ್ಲಿ ಅಭ್ಯಾಸವನ್ನೂ ಮಾಡುತ್ತಿದ್ದರು.

ವೈದ್ಯನ ಕೊಠಡಿಯ ಬಾಗಿಲಿಗೆ ಒಳಗಿನಿಂದ ಬೀಗ: ಫುಲ್ವಾರಿ ಶರೀಫ್ ಠಾಣೆ ಅಧಿಕಾರಿ ಸಫೀರ್ ಅಹಮದ್ ಅವರ ಪ್ರಕಾರ, ಶುಕ್ರವಾರ ರಾತ್ರಿ ಡ್ಯೂಟಿ ಮುಗಿಸಿದ ನೀಲೇಶ್ ಹಾಸ್ಟೆಲ್ ಕೊಠಡಿಗೆ ತೆರಳಿ ಕೊಠಡಿಗೆ ಒಳಗಿನಿಂದ ಬೀಗ ಹಾಕಿದ್ದರು. ಇದಾದ ನಂತರ ಸಂಜೆಯವರೆಗೂ ನೀಲೇಶ್ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಆತನ ಸ್ನೇಹಿತರು ಆತನಿಗೆ ಕರೆ ಮಾಡಿದರೂ ಫೋನ್ ತೆಗೆಯಲಿಲ್ಲ. ಪ್ರೊಫೆಸರ್ ಅವರನ್ನೂ ಸಂಪರ್ಕಿಸಿದರೂ ಅವರು ಸ್ಪಂದಿಸಲಿಲ್ಲ. ಇದಾದ ಬಳಿಕ ನೀಲೇಶ್‌ನ ಸ್ನೇಹಿತರು ಮತ್ತು ಪ್ರಾಧ್ಯಾಪಕರು ಆತನ ಕೊಠಡಿಯತ್ತ ಬಂದಿದ್ದಾರೆ. ಆಗ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೀಲೇಶ್‌ನ ಸಹಪಾಠಿಗಳು ಕೊಠಡಿಯೊಳಗೆ ಇಣುಕಿ ನೋಡಿದಾಗ ಆತ ಕೋಣೆಯೊಳಗೆ ಬಿದ್ದಿರುವುದನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರೇಮ ಪ್ರಕರಣದ ಹಿನ್ನೆಲೆ ಆತ್ಮಹತ್ಯೆ ಶಂಕೆ:''ಪ್ರೇಮ ಪ್ರಕರಣದಿಂದ ನೀಲೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಕೊಠಡಿಯಲ್ಲಿ ನಾಲ್ಕು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಗೆಳತಿಯ ಹೆಸರು ತಿಳಿದುಬಂದಿಲ್ಲ. ಸದ್ಯ ಪೊಲೀಸರು ಕಾಯುತ್ತಿದ್ದಾರೆ. ಮೃತರ ಸಂಬಂಧಿಕರು ಆಗಮಿಸುತ್ತಾರೆ. ಇದರ ನಂತರವೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ" ಫುಲ್ವಾರಿಶರೀಫ್ ಪೊಲೀಸ್ ಠಾಣೆಯ ಅಧಿಕಾರಿ ಎಸ್.ಫೀರ್ ಅಹಮದ್ ತಿಳಿಸಿದ್ದಾರೆ.

ಐಐಟಿ ವಿದ್ಯಾರ್ಥಿ ಆತ್ಮಹತ್ಯೆ:ದೆಹಲಿಯ ಐಐಟಿಯ ವಿಂಧ್ಯಾಚಲ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಕಿಶನ್‌ಗಢ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ವಿದ್ಯಾರ್ಥಿ ಅನಿಲ್, ಮೂಲತಃ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಅನಿಲ್ ಅವರು, ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಬಿಟೆಕ್ ಓದುತ್ತಿದ್ದರು. ಮೃತರಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ.

ಇದನ್ನೂ ಓದಿ:ಪ್ರೀತಿ ಹೆಸರಲ್ಲಿ ವಂಚನೆ, ಮದುವೆ ಹೆಸರಲ್ಲಿ 3 ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ.. ಆರೋಪಿಗಳನ್ನು ಬಂಧಿಸಿದ ಪೊಲೀಸರು

Last Updated : Sep 2, 2023, 2:45 PM IST

ABOUT THE AUTHOR

...view details