ಕರ್ನಾಟಕ

karnataka

ETV Bharat / bharat

ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣ: ಆರೋಪಿಗೆ 14 ದಿನ ರಿಮಾಂಡ್​, ಪೊಲೀಸರು ಹೇಳಿದ್ದೇನು? - ತಂದೆ ನರೇಂದ್ರ ಆರೋಪ

ತೆಲಂಗಾಣದಲ್ಲಿ ವಾರಂಗಲ್​ ವೈದ್ಯಕೀಯ ವಿದ್ಯಾರ್ಥಿನಿಯ ಆತ್ಮಹತ್ಯೆ ಯತ್ನ ಪ್ರಕರಣ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಒಂದೆಡೆ ಕೆಎಂಸಿ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನದ ಕುರಿತು ಸಮಿತಿ ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯ ಪ್ರಮುಖ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

Medical student Preethi suicide attempt case  CP Ranganath revealed after the investigation  Preethi suicide attempt case news  ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣ  ಆರೋಪಿಗೆ 14 ದಿನ ರಿಮಾಂಡ್  ವಾರಂಗಲ್​ ವೈದ್ಯಕೀಯ ವಿದ್ಯಾರ್ಥಿನಿಯ ಆತ್ಮಹತ್ಯೆ ಯತ್ನ  ಆತ್ಮಹತ್ಯೆಗೆ ಯತ್ನಿಸಿದ ಪಿಜಿ ವಿದ್ಯಾರ್ಥಿನಿ  ಪಿಜಿ ವಿದ್ಯಾರ್ಥಿನಿ ನಿಮ್ಸ್​ನಲ್ಲಿ ಚಿಕಿತ್ಸೆ  ತಂದೆ ನರೇಂದ್ರ ಆರೋಪ  ರಾಜ್ಯಪಾಲರ ಭೇಟಿಯನ್ನು ಅನಗತ್ಯವಾಗಿ ಟೀಕಿಸಬೇಡಿ
ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣ

By

Published : Feb 25, 2023, 12:54 PM IST

ವರಂಗಲ್, ಹೈದರಾಬಾದ್: ಜಿಲ್ಲೆಯ ಎಂಜಿಎಂನಲ್ಲಿ ಹಿರಿಯರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ ಪಿಜಿ ವಿದ್ಯಾರ್ಥಿನಿ ನಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ವೈದ್ಯಕೀಯ ವಿದ್ಯಾರ್ಥಿನಿ ಎಕ್ಮೋದಲ್ಲಿದ್ದಾರೆ.. ಡಯಾಲಿಸಿಸ್ ಪ್ರಕ್ರಿಯೆ ಮುಂದುವರಿಯಲಿದೆ ಎಂದು ನಿಮ್ಸ್ ಅಧೀಕ್ಷಕರು ವಿವರಿಸಿದರು.

ಏನಿದು ಪ್ರಕರಣ: ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಹಿರಿಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದು, ಈಗ ಅವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಪ್ರೀತಿ ನವೆಂಬರ್‌ನಲ್ಲಿ ಕೆಎನ್‌ಸಿಯಲ್ಲಿ ಪಿಜಿಗೆ ಸೇರಿದ್ದು, ಕಾಜಿಪೇಟೆಯ ಹಿರಿಯ ವೈದ್ಯಕೀಯ ವಿದ್ಯಾರ್ಥಿ ಸೈಫ್ ಡಿಸೆಂಬರ್‌ನಿಂದ ಕಿರುಕುಳ ನೀಡುತ್ತಿದ್ದ ಎಂಬುದಕ್ಕೆ ಪೊಲೀಸರಿಗೆ ಸಾಕ್ಷಿಗಳು ದೊರೆತ್ತಿದ್ದು, ಆರೋಪಿಯ ಕುರಿತು ಕೆಲವೊಂದು ಮಾಹಿತಿಗಳನ್ನು ಮಾಧ್ಯಮಕ್ಕೆ ವರಂಗಲ್ ಸಿಪಿ ಎವಿ ರಂಗನಾಥ್ ಹೇಳಿದ್ದಾರೆ.

ಇದೇ ತಿಂಗಳ 18ರಂದು ಹನುಮಕೊಂಡದ ಹೆರಿಗೆ ಆಸ್ಪತ್ರೆಯಲ್ಲಿ ಪ್ರೀತಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಸೈಫ್ ರೋಗಿಯ ಕೇಸ್ ಶೀಟ್ ಅನ್ನು ಮತ್ತೊಬ್ಬ ಹೌಸ್ ಸರ್ಜನ್ ವಿದ್ಯಾರ್ಥಿ ಬರೆದಿದ್ದಾರೆ ಎಂದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಪೋಸ್ಟ್ ಮಾಡಿ ಪ್ರೀತಿಯನ್ನು ಅವಮಾನಿಸಿದ್ದರು. ಪ್ರೀತಿ ಸೈಫ್‌ಗೆ ವೈಯಕ್ತಿಕ ವಾಟ್ಸ್‌ಆ್ಯಪ್ ಸಂದೇಶವನ್ನು ಕಳುಹಿಸಿ, ಗ್ರೂಪ್‌ನಲ್ಲಿ ಈ ರೀತಿ ಅವಹೇಳನಕಾರಿಯಾಗಿ ಏಕೆ ಪೋಸ್ಟ್ ಮಾಡಿದ್ದಾರೆ ಎಂದು ಕೇಳಿದ್ದರು. ನನ್ನಿಂದ ಏನಾದರೂ ತಪ್ಪಾಗಿದ್ದರೆ ಎಚ್‌ಒಡಿಗೆ ಮಾತ್ರ ತಿಳಿಸಬೇಕು ಎಂದು ಬರೆದಿದ್ದರು. ಸೈಫ್ ಇತರ ವೈದ್ಯರಿಗೆ ಪ್ರೀತಿಯ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ನಾವು ಪ್ರೀತಿ ಮತ್ತು ಸೈಫ್​ ನಡುವಿನ ಸಂಭಾಷಣೆಯ ಚಾಟ್‌ಗಳನ್ನು ಸಂಗ್ರಹಿಸಿದ್ದೇವೆ ಎಂದು ಸಿಪಿ ವಿವರಿಸಿದರು.

ಇದನ್ನೆಲ್ಲ ಸಹಿಸಲಾಗದ ಪ್ರೀತಿ ತನ್ನ ತಂದೆ ನರೇಂದರ್ ಅವರಿಗೆ ಮಾಹಿತಿ ನೀಡಿದ್ದು, ಅವರು ವಾರಂಗಲ್ ಎಸಿಪಿ ಬೋನಾಳ ಕಿಶನ್ ಹಾಗೂ ಮತ್ತೇವಾಡ ಎಸ್​ಐ ಶಂಕರನಾಯ್ಕ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಪೊಲೀಸರು ಕೆಎಂಸಿ ಪ್ರಾಂಶುಪಾಲರು ಹಾಗೂ ಎಚ್‌ಒಡಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಪ್ರಾಂಶುಪಾಲರು ಸೈಫ್‌ಗೆ ಛೀಮಾರಿ ಹಾಕಿದಾಗ ಪ್ರೀತಿಗೆ ವೃತ್ತಿಯ ವಿಷಯದಲ್ಲಿ ಸೂಚನೆಗಳನ್ನು ನೀಡಿದ್ದೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಸೈಫ್ ವಿವರಿಸಿದ್ದಾರೆ ಎಂದು ಸಿಪಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯವಂತ ವ್ಯಕ್ತಿ ಸ್ಯಾಕ್ಸಲಿನ್ ಕೋಲಿನ್ ಎಂಬ ಚುಚ್ಚುಮದ್ದನ್ನು ತೆಗೆದುಕೊಂಡರೆ ಏನಾಗುತ್ತದೆ ಎಂದು ಪ್ರೀತಿ ಗೂಗಲ್​ನಲ್ಲಿ ಸರ್ಚ್ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ನಂತರ ಆಕೆಯ ಬಳಿ ಇದ್ದ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳನ್ನು ಕಿರಿಯರು ಸರ್ ಎಂದು ಕರೆಯುವ ಸಂಸ್ಕೃತಿ ಕೆಎಂಸಿಯಲ್ಲಿದೆ. ಇದನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯ ವಾತಾವರಣ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸಚಿವೆ ಸತ್ಯವತಿ ರಾಥೋಡ್ ಹೇಳಿದ್ದು ಹೀಗೆ: ಈ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಮುಖ್ಯಮಂತ್ರಿ ಕೆಸಿಆರ್ ಹಾಗೂ ಆರೋಗ್ಯ ಸಚಿವ ಹರೀಶ್ ರಾವ್ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಕಾಲಕಾಲಕ್ಕೆ ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡುತ್ತಿದ್ದೇನೆ. ಪ್ರೀತಿ ಆರೋಗ್ಯ ಸುಧಾರಿಸುತ್ತಿದೆ. ಕೆಲವೊಮ್ಮೆ ಪ್ರೀತಿ ಕಣ್ಣು ತೆರೆದು ನೋಡುತ್ತಾಳೆ. ತಂದೆ-ತಾಯಿ ಮಾತನಾಡಿಸಿದ್ದಾರೆ.. ಅವರ ಮಾತಿಗೆ ಸ್ಪಂದಿಸುತ್ತಿದ್ದಾಳೆ. ಪ್ರೀತಿ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯಿಂದಲೂ ನೆರವು ನೀಡಲಿದೆ. ವೈದ್ಯಕೀಯ ಕಾಲೇಜುಗಳಲ್ಲಿ ರ‍್ಯಾಗಿಂಗ್ ಬಗ್ಗೆ ಸರ್ಕಾರ ವಿಶೇಷ ಸಮಿತಿ ರಚಿಸಿದೆ ಎಂದು ಹೇಳಿದರು.

ತಂದೆ ನರೇಂದ್ರ ಆರೋಪವೇನು?: ಪ್ರೀತಿ ಅವರ ಆರೋಗ್ಯ ಸುಧಾರಿಸುತ್ತಿದೆ ಎಂಬ ಸಚಿವೆ ಸತ್ಯವತಿ ರಾಥೋಡ್​ ಅವರ ಮಾತಿನಲ್ಲಿ ಸತ್ಯಾಂಶವಿಲ್ಲ. ಎಕ್ಮೋ ಯಂತ್ರದ ಪ್ರಭಾವದಿಂದ ದೇಹ ಚಲಿಸುತ್ತಿದೆ. ಇದಲ್ಲದೇ, ಕಣ್ಣುಗಳು ತೆರೆದಿಲ್ಲ.. ನಮ್ಮ ಬಳಿ ಮಾತನಾಡುತ್ತಿಲ್ಲ.. ನಾನು ಕೊನೆಯ ಮಾತುಗಳನ್ನು ಕೇಳಿದ್ದು ಮಂಗಳವಾರ (ಈ ತಿಂಗಳ 21). ಹಿರಿಯ ವಿದ್ಯಾರ್ಥಿಗೆ ಸೈಫ್ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದಾಗ ಮಾತ್ರ ಆಡಳಿತ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದರೆ ಈಗ ಈ ರೀತಿ ಆಗುತ್ತಿರಲಿಲ್ಲ ಎಂದು ಆರೋಪಿಸಿದರು.

ಪ್ರೀತಿಯ ಆರೋಗ್ಯ ಇನ್ನೂ ಹದಗೆಟ್ಟಿದೆ!: ವರಂಗಲ್ ಎಂಜಿಎಂ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನಸ್ತೇಶಿಯಾ ಪಿಜಿ ವಿದ್ಯಾರ್ಥಿನಿ ಧರಾವತ್ ಪ್ರೀತಿ (26) ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ನಿಮ್ಸ್ ವೈದ್ಯರು ಬಹಿರಂಗಪಡಿಸಿದ್ದಾರೆ. ಮೂರು ದಿನಗಳ ಕಾಲ ಆಕೆಗೆ ಎಕ್ಮೋ ಮತ್ತು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ಸಿಪಿಆರ್ ಮಾಡಲಾಗಿದ್ದು, ಹೃದಯದ ಕಾರ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಗ್ಗೆ ಅನಗತ್ಯ ಟೀಕೆ ಬೇಡ : ನಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಅವರ ಆರೋಗ್ಯ ತಪಾಸಣೆಗೆ ತೆರಳಿದ್ದ ರಾಜ್ಯಪಾಲ ತಮಿಳಿಸೈ ಅವರ ಬಗ್ಗೆ ಕೆಲವರು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯಪಾಲರ ಕಚೇರಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ನಿಮ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯಪಾಲರ ಕಾರಿನಲ್ಲಿ ಮಾಲೆ ಇದೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಕಚೇರಿ ತಿಳಿಸಿದೆ.

ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ: ವರಂಗಲ್ ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನದ ಹಿಂದೆ ಹಿರಿಯ ಪಿಜಿ ವೈದ್ಯಕೀಯ ವಿದ್ಯಾರ್ಥಿ ಡಾ.ಸೈಫ್ ಆಧಾರ ರಹಿತ ಆರೋಪಗಳು ಮಾಡುತ್ತಿದ್ದಾರೆ ಎಂದು ಎಂಜಿಎಂನಲ್ಲಿರುವ ಗಾಂಧಿ ಪ್ರತಿಮೆ ಬಳಿ ವಿದ್ಯಾರ್ಥಿಗಳು ಧರಣಿ ನಡೆಸಿದರು. ಪೊಲೀಸ್​ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಓದಿ:ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು

ABOUT THE AUTHOR

...view details