ಕರ್ನಾಟಕ

karnataka

ETV Bharat / bharat

ಮಾಧ್ಯಮಗಳು ಸಮಾಜಕ್ಕೆ ಕನ್ನಡಿಯಂತಿರಬೇಕು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು - ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

ಮಾಧ್ಯಮಗಳು ಸಮಾಜಕ್ಕೆ ಕನ್ನಡಿಯಂತಿರಬೇಕು ಮತ್ತು ಸಕಾರಾತ್ಮಕ ಬದಲಾವಣೆಗೆ ಮಾಧ್ಯಮಗಳು ಶ್ರಮಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ. ನೆಲ್ಲೂರು ಜಿಲ್ಲೆಯಲ್ಲಿನ ಏರ್ ಎಫ್​ಎಂ ರೇಡಿಯೋ ಕೇಂದ್ರ ಟವರ್ ಉದ್ಘಾಟಿಸಿ ಅವರು ಮಾತನಾಡಿದರು.

media-should-hold-a-mirror-to-society-stay-closer-to-truth-vp-venkaiah-naidu
ಮಾಧ್ಯಮಗಳು ಸಮಾಜಕ್ಕೆ ಕನ್ನಡಿಯಂತಿರಬೇಕು,ಸಕಾರಾತ್ಮಕ ಬದಲಾವಣೆಗೆ ಶ್ರಮಿಸಬೇಕು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

By

Published : Apr 28, 2022, 12:29 PM IST

ನೆಲ್ಲೂರು (ಆಂಧ್ರಪ್ರದೇಶ): ಮಾಧ್ಯಮಗಳು ಸಮಾಜಕ್ಕೆ ಕನ್ನಡಿಯಂತಿರಬೇಕು ಮತ್ತು ಸಕಾರಾತ್ಮಕ ಬದಲಾವಣೆಗೆ ಮಾಧ್ಯಮಗಳು ಶ್ರಮಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ. ಜಿಲ್ಲೆಯ 10 Kw ಏರ್ ಎಫ್​ಎಂ ರೇಡಿಯೋ ಕೇಂದ್ರದ ನೂತನ 100 ಮೀಟರ್ ಟವರ್ ಅನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಪತ್ರಿಕೋದ್ಯಮವು ನೈತಿಕತೆಯ ತಳಹದಿಯ ಮೇಲೆ ನಡೆಯಬೇಕು ಎಂದರು.

ಮಾಧ್ಯಮಗಳು ಸತ್ಯಕ್ಕೆ ಹತ್ತಿರವಾದಾಗ ಮತ್ತು ಸಂವೇದನಾಶೀಲತೆಯಿಂದ ದೂರವಿದ್ದಾಗ ಮಾತ್ರ ಜನರು ಅದನ್ನು ಮೆಚ್ಚುತ್ತಾರೆ. ಇಲ್ಲದಿದ್ದಲ್ಲಿ ಮಾಧ್ಯಮಗಳು ಎಲ್ಲರಲ್ಲಿ ಆತಂಕವನ್ನುಂಟು ಮಾಡಲು ಕಾರಣವಾಗುತ್ತದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.

ಮಾಧ್ಯಮಗಳು ಸಮಾಜಕ್ಕೆ ಕನ್ನಡಿಯಂತಿರಬೇಕು,ಸಕಾರಾತ್ಮಕ ಬದಲಾವಣೆಗೆ ಶ್ರಮಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿದೆ ಮತ್ತು ಅದು ಮುಂದುವರಿಯಬೇಕು. ಮಾಧ್ಯಮ ಸ್ವಾತಂತ್ರ್ಯದಿಂದ ಮಾತ್ರ ಸಮಾಜ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬಹುದು. ಆದರೆ, ಯಾರಾದರೂ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು" ಎಂದು ನಾಯ್ಡು ಹೇಳಿದರು. ಈ ವೇಳೆ, ರೇಡಿಯೋದ ಜನಪ್ರಿಯತೆಯನ್ನು ಸ್ಮರಿಸಿದ ನಾಯ್ಡು,ಇದು ಹಲವು ಕಲಾವಿದರಿಗೆ ಖ್ಯಾತಿಯನ್ನು ತಂದುಕೊಡುವುದರ ಜೊತೆಗೆ ಸಮಾಜದ ವಿವಿಧ ವರ್ಗಗಳಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದಾಗ ಶಂಕುಸ್ಥಾಪನೆ ಮಾಡಿದ್ದ ಎಫ್‌ಎಂ ಕೇಂದ್ರವನ್ನು ಉದ್ಘಾಟಿಸಿದ್ದು ಸಂತೋಷವಾಗಿದೆ ಎಂದು ಇದೇ ವೇಳೆ ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಸಚಿವ ಕೆ.ಗೋವರ್ಧನರೆಡ್ಡಿ, ಪ್ರಸಾರ ಭಾರತಿ ಸಿಇಒ ಶಶಿಶೇಖರ್ ವೆಂಪತಿ, ಆಕಾಶವಾಣಿ ಮಹಾನಿರ್ದೇಶಕ ಎನ್.ವೇಣುಧರ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ :ದೇಶದಲ್ಲಿ ಬಹು ದಿನಗಳ ಬಳಿಕ ಮೂರು ಸಾವಿರ ಗಡಿ ದಾಟಿದ ಕೋವಿಡ್​ ಕೇಸ್​ಗಳು!

ABOUT THE AUTHOR

...view details