ಕರ್ನಾಟಕ

karnataka

ETV Bharat / bharat

ಕೋವಿಡ್​ ಸಂಕಷ್ಟದಲ್ಲಿ ರಾಜ್ಯಗಳ ನೆರವಿಗೆ ನಿಂತ ಕೇಂದ್ರ ಸರ್ಕಾರ - ಜಿಎಸ್​ಟಿ ಅದಾಯ

30 ಡಿಸೆಂಬರ್, 2020ರ ಹೊತ್ತಿಗೆ 10 ರಾಜ್ಯಗಳು ಒನ್ ನೇಶನ್ ಒನ್ ರೇಶನ್ ಕಾರ್ಡ್​ ನೀತಿಯನ್ನು ಜಾರಿಗೊಳಿಸಿವೆ. 7 ರಾಜ್ಯಗಳು ಉದ್ಯಮ ಸರಳೀಕರಣ ನೀತಿಗಳನ್ನು ಅಳವಡಿಸಿಕೊಂಡಿವೆ. 2 ರಾಜ್ಯಗಳು ಸ್ಥಳೀಯಾಡಳಿತ ಸಂಸ್ಥೆಗಳ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿವೆ. ಇಲ್ಲಿಯವರೆಗೆ ರಾಜ್ಯಗಳಿಗೆ ಒಟ್ಟು 51,682 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಎತ್ತುವ ಅವಕಾಶ ನೀಡಲಾಗಿದೆ.

Measures taken by the central government to support states
ಕೋವಿಡ್​ ಸಂಕಷ್ಟದಲ್ಲಿ ರಾಜ್ಯಗಳ ನೆರವಿಗೆ ನಿಂತ ಕೇಂದ್ರ ಸರ್ಕಾರ

By

Published : Feb 1, 2021, 3:42 PM IST

ಕೋವಿಡ್​-19 ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಬೆಂಬಲಕ್ಕೆ ನಿಂತಿದ್ದು, ಇದಕ್ಕಾಗಿ ಹಲವಾರು ಪೂರಕ ಕ್ರಮಗಳನ್ನು ಕೈಗೊಂಡಿದೆ. ರಾಜ್ಯಗಳ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಆತ್ಮನಿರ್ಭರ ಭಾರತ್ ಯೋಜನೆಯಡಿ ಹೆಚ್ಚುವರಿ ಸಾಲ ಪಡೆಯುವ ಅವಕಾಶ

ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ ರಾಜ್ಯಗಳು ತಮ್ಮ ಜಿಡಿಪಿಯ ಶೇ 2ರಷ್ಟು ಹೆಚ್ಚುವರಿ ಸಾಲ ಎತ್ತುವ ಅವಕಾಶ ಕಲ್ಪಿಸಲಾಗಿದೆ. ಈ ಮೊತ್ತ 4.27 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ.

ಈ ಶೇ 2ರಷ್ಟು ಹೆಚ್ಚುವರಿ ಸಾಲ ಎತ್ತುವಳಿಯಲ್ಲಿ ಮೊದಲ ಶೇ 0.5 ರಷ್ಟು ಸಾಲವನ್ನು ಎಲ್ಲ ರಾಜ್ಯಗಳಿಗೂ ಸಮಾನಾಂತರವಾಗಿ ಹಂಚಲಾಗಿದೆ.

ಎರಡನೇ ಕಂತಿನ ರಾಜ್ಯ ಜಿಡಿಪಿಯ ಶೇ 1 ರಷ್ಟು ಹೆಚ್ಚುವರಿ ಸಾಲ ಪಡೆಯಲು ರಾಜ್ಯಮಟ್ಟದ 4 ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜಾರಿಯಾಗುವ ಪ್ರತಿಯೊಂದು ಸುಧಾರಣಾ ಕ್ರಮಕ್ಕೂ ಶೇ 0.25 ಅಂಕ ನೀಡಲಾಗಿದ್ದು, ಜಾರಿಗೊಳಿಸಬೇಕಾದ ಸುಧಾರಣಾ ಕ್ರಮಗಳು ಇಂತಿವೆ:

  • ಒನ್ ನೇಶನ್ ಒನ್ ರೇಶನ್ ಕಾರ್ಡ್​ ವ್ಯವಸ್ಥೆ
  • ಉದ್ಯಮ ನೀತಿ ಸರಳೀಕರಣ
  • ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ವ್ಯವಸ್ಥೆ ಸುಧಾರಣೆ
  • ಇಂಧನ ಕ್ಷೇತ್ರದಲ್ಲಿ ಸುಧಾರಣೆ ಕ್ರಮಗಳನ್ನು ಜಾರಿ ಮಾಡುವುದು

ಇನ್ನು ಕೊನೆಯ ಕಂತಿನ ಶೇ 0.5ರಷ್ಟು ಹೆಚ್ಚುವರಿ ಸಾಲ ಪಡೆಯಲು ಮೇಲೆ ತಿಳಿಸಲಾದ 4 ಸುಧಾರಣಾ ಕ್ರಮಗಳ ಪೈಕಿ ಕನಿಷ್ಠ ಮೂರನ್ನಾದರೂ ಜಾರಿಗೊಳಿಸುವುದು.

30 ಡಿಸೆಂಬರ್, 2020ರ ಹೊತ್ತಿಗೆ 10 ರಾಜ್ಯಗಳು ಒನ್ ನೇಶನ್ ಒನ್ ರೇಶನ್ ಕಾರ್ಡ್​ ನೀತಿಯನ್ನು ಜಾರಿಗೊಳಿಸಿವೆ. 7 ರಾಜ್ಯಗಳು ಉದ್ಯಮ ಸರಳೀಕರಣ ನೀತಿಗಳನ್ನು ಅಳವಡಿಸಿಕೊಂಡಿವೆ. 2 ರಾಜ್ಯಗಳು ಸ್ಥಳೀಯಾಡಳಿತ ಸಂಸ್ಥೆಗಳ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿವೆ. ಇಲ್ಲಿಯವರೆಗೆ ರಾಜ್ಯಗಳಿಗೆ ಒಟ್ಟು 51,682 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಎತ್ತುವ ಅವಕಾಶ ನೀಡಲಾಗಿದೆ.

ಜಿಎಸ್​ಟಿ ಅದಾಯದಲ್ಲಿ ರಾಜ್ಯಗಳಿಗೆ ಪರಿಹಾರ

ಹಣಕಾಸು ವರ್ಷ 2020-21ರಲ್ಲಿ ರಾಜ್ಯಗಳು ಅನುಭವಿಸುವ ಜಿಎಸ್​ಟಿ ಆದಾಯ ಹಾನಿಯನ್ನು ತುಂಬಿಸಲು ರಾಜ್ಯಗಳು ಡೆಬ್ಟ್​ ಜಾರಿ ಮಾಡಬಹುದು ಅಥವಾ ಸಂಪೂರ್ಣ ಹಾನಿಯನ್ನು ಒಂದೇ ಬಾರಿ ತುಂಬಿಕೊಳ್ಳಲು ಮಾರ್ಕೆಟ್​ ಡೆಬ್ಟ್​ ಜಾರಿ ಮಾಡುವ ಅವಕಾಶ ನೀಡಲಾಗಿದೆ.

ರಾಜ್ಯಗಳ ಯೋಜನಾ ವೆಚ್ಚಗಳಿಗೆ ವಿಶೇಷ ಧನಸಹಾಯ

ಕೋವಿಡ್ ಬಿಕ್ಕಟ್ಟಿನಿಂದಾಗಿ ತೆರಿಗೆ ಸಂಗ್ರಹಣೆ ಕಡಿಮೆಯಾಗಿ ಆದಾಯ ಖೋತಾ ಎದುರಿಸುವ ರಾಜ್ಯಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯೋಜನಾ ವೆಚ್ಚಕ್ಕಾಗಿ ವಿಶೇಷ ಧನಸಹಾಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ 12 ಸಾವಿರ ಕೋಟಿ ರೂಪಾಯಿಗಳಿಗೆ ಮೀರದಂತೆ 50 ವರ್ಷ ಅವಧಿಯ ಬಡ್ಡಿ ರಹಿತ ಸಾಲವನ್ನು ರಾಜ್ಯಗಳಿಗೆ ನೀಡಲಾಗುವುದು.

ABOUT THE AUTHOR

...view details