ಕರ್ನಾಟಕ

karnataka

ETV Bharat / bharat

ಆಘ್ಘನ್​ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವಂತೆ ಪ್ರಧಾನಿ MEA ಯನ್ನು ಕೇಳಿದ್ದಾರೆ: ಎಸ್ ಜೈಶಂಕರ್ - ವಿದೇಶಾಂಗ ಇಲಾಖೆ

ಆಘ್ಘನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ವಿದೇಶಾಂಗ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳ ನಾಯಕರಿಗೆ ಮಾಹಿತಿ ನೀಡಿ ಎಂದು ಪ್ರಧಾನಿ ಮೋದಿ ಅವರು ಎಂಇಎಯನ್ನು ಕೋರಿದ್ದಾರೆ.

Jaishankar
Jaishankar

By

Published : Aug 23, 2021, 3:06 PM IST

ನವದೆಹಲಿ: ಅಫ್ಘಾನಿಸ್ತಾನದಲ್ಲಿನ ಅರಾಜಕತೆ ಕುರಿತು ರಾಜಕೀಯ ಪಕ್ಷಗಳ ನಾಯಕರಿಗೆ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ವಿದೇಶಾಂಗ ಸಚಿವಾಲಯವನ್ನು ಕೇಳಿದ್ದಾರೆ ಎಂದು ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ಅವರು, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಭಾರತವು ಸ್ಥಳಾಂತರಿಸುತ್ತಿದೆ. ಕಾಬೂಲ್‌ನಿಂದ ದಿನಕ್ಕೆ ಎರಡು ವಿಮಾನಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಹಿಂದೂಗಳು ಮತ್ತು ಸಿಖ್ಖರಿಗೆ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ. ಜೊತೆಗೆ ಸಹಾಯದ ಅಗತ್ಯವಿರುವ ಅಫ್ಘಾನಿಸ್ತಾನದಲ್ಲಿರುವ ತನ್ನ ಸ್ನೇಹಿತರಿಗೂ ಸಹಾಯ ಮಾಡುತ್ತದೆ.

ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೀಡಲಿದ್ದಾರೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ರಿಟ್ವೀಟ್

ಇದಕ್ಕೆ ರಿಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಯವರು ಪ್ರತಿಪಕ್ಷದ ನಾಯಕರಿಗೆ ಮಾಹಿತಿ ನೀಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಭಾನುವಾರ C -17 ವಿಮಾನವು 108 ಭಾರತೀಯರನ್ನು ಒಳಗೊಂಡಂತೆ 168 ಪ್ರಯಾಣಿಕರನ್ನು ಕಾಬೂಲ್​ನಿಂದ ಕರೆತಂದಿದೆ. ಅವರಲ್ಲಿ ಇಬ್ಬರು ಆಘ್ಘನ್ ಸಂಸದರೂ ಇದ್ದಾರೆ.

ಇದನ್ನೂ ಓದಿ: ಪಾಶ್ಚಿಮಾತ್ಯ ಪಡೆಗಳು-ಅಪರಿಚಿತರಿಂದ ಕಾಬೂಲ್ ಏರ್​ಪೋರ್ಟ್​ನಲ್ಲಿ ಗುಂಡಿನ ಚಕಮಕಿ: ಓರ್ವ ಸಾವು

ಆಗಸ್ಟ್ 17 ರಂದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತೆಯ ಕ್ಯಾಬಿನೆಟ್ ಸಮಿತಿ ಸಭೆ ನಡೆಯಿತು. ಈ ಸಂದರ್ಭ ಆಫ್ಘನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ABOUT THE AUTHOR

...view details