ನವದೆಹಲಿ: ಎಂಡಿಹೆಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜ್ಜ ಇನ್ನಿಲ್ಲ.. ಎಂಡಿಹೆಚ್ ಸಂಸ್ಥೆಯ ಮಾಲೀಕ 'ಮಹಾಶಯ್' ಧರ್ಮಪಾಲ್ ಗುಲಾಟಿ ಅವರ ಭಾವಚಿತ್ರ ಮಸಾಲ ಪ್ಯಾಕೆಟ್ಗಳ ಮೇಲೆ ಭಾವಚಿತ್ರ ರಾರಾಜಿಸುತ್ತದೆ. 97ವರ್ಷ ವಯಸ್ಸಿನ ಧರ್ಮಪಾಲ್ ಅವರು ಬೆಳಗ್ಗೆ 6 ಗಂಟೆಗೆ ಮಾತಾ ಚಂದನ್ ದೇವಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಂಡಿಹೆಚ್ ಮಸಾಲ ಸಂಸ್ಥೆಯ ಮಾಲೀಕ 'ಮಹಾಶಯ್' ಧರ್ಮಪಾಲ್ ಗುಲಾಟಿ ವಿಧಿವಶ - ಎಂಡಿಎಚ್ ಸಂಸ್ಥೆಯ ಮಾಲೀಕ ಧರ್ಮಪಾಲ್ ಗುಲಾಟಿ ಸಾವು ಸುದ್ದಿ,
07:46 December 03
ದೇಶದ ಎರಡನೇ ಅತಿದೊಡ್ಡ ಮಸಾಲ ಉತ್ಪನ್ನಗಳ ಮಾರಾಟ ಸಂಸ್ಥೆ ಎಂಡಿಹೆಚ್ ಮಸಾಲದ ಮಾಲೀಕ ಧರ್ಮಪಾಲ್ ಗುಲಾಟಿ ಅವರು ಇಂದು ವಿಧಿವಶರಾಗಿದ್ದಾರೆ.
ಪಾಕಿಸ್ತಾನದ ಸಿಯೋಲ್ ಕೋಟ್ ಮೂಲದ ಗುಲಾಟಿ ಕುಟುಂಬದ ಚುನ್ನಿಲಾಲ್ ಅವರು 1919ರಲ್ಲಿ ಸ್ಥಾಪಿಸಿದ ಮಹಾಶಿಯನ್ ಡಿ ಹಟ್ಟಿ(ಎಂಡಿಹೆಚ್) ಮಸಾಲ ಪುಡಿ ಉತ್ಪಾದನಾ ಸಂಸ್ಥೆಗೆ 1959ರಿಂದ ಮಹಾಶಯ್ ಧರ್ಮ್ ಪಾಲ್ ಗುಲಾಟಿ ಅವರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.
FMCG ಕ್ಷೇತ್ರದಲ್ಲಿ ಧರ್ಮಪಾಲ್ ಅವರು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಸಿಇಒ ಆಗಿದ್ದರು. ಸಾವಿರಾರು ಕೋಟಿ ರೂಪಾಯಿ ವಹಿವಾಟು Fast Moving consumer goods (FMCG) ಕ್ಷೇತ್ರ ಸೇರಿರುವ ರೆಡಿಮೇಡ್ ಮಸಾಲ ಪುಡಿ ಉತ್ಪಾದನಾ ಸಂಸ್ಥೆಯನ್ನು ಮುನ್ನಡೆಸಿದ ಧರ್ಮಪಾಲ್ ಅವರು 5ನೇ ತರಗತಿ ತನಕ ಮಾತ್ರ ಓದಿದ್ದವರು. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಎಂಡಿಹೆಚ್ ಇಂದು ಸುಮಾರು 62ಕ್ಕೂ ಅಧಿಕ ಉತ್ಪನ್ನಗಳನ್ನು 150ಕ್ಕೂ ಅಧಿಕ ವಿವಿಧ ಶ್ರೇಣಿಗಳಲ್ಲಿ ಮಾರಾಟ ಮಾಡುತ್ತಿದೆ.
2019ರಲ್ಲಿ ಭಾರತೀಯ ಆಹಾರ ಉದ್ಯಮದ ಐಕಾನ್, ಎಂಡಿಹೆಚ್ ಮಸಾಲ ಕಂಪನಿಯ ಮುಖ್ಯಸ್ಥ ಮಹಾಶಯ್ ಧರ್ಮಪಾಲ್ ಗುಲಾಟಿ ಅವರು ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು.