ಕರ್ನಾಟಕ

karnataka

By

Published : Feb 23, 2023, 10:59 AM IST

Updated : Feb 23, 2023, 5:17 PM IST

ETV Bharat / bharat

ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆ; ಇಡೀ ರಾತ್ರಿ ಕೋಲಾಹಲ, ಬಿಜೆಪಿ ವಿರುದ್ಧ ಮತಪೆಟ್ಟಿಗೆ ಕಳವು ಆರೋಪ

ದೆಹಲಿಯ ಮುನ್ಸಿಪಲ್​ ಕಾರ್ಪೊರೇಷನ್​ನ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಪರಿಸ್ಥಿತಿ ಅಕ್ಷರಶಃ ರಣಕಣವಾಗಿತ್ತು. ಬಿಜೆಪಿ ಮತ್ತು ಎಎಪಿ ಸದಸ್ಯರು ಪರಸ್ಪರ ಬಾಟಲ್​ಗಳ ಎರಚಾಟ ನಡೆಸಿದ್ದು, ಘೋಷಣೆಗಳನ್ನು ಕೂಗಿದ್ದಾರೆ.

ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆ; ಬಿಜೆಪಿಯಿಂದ ಮತಪೆಟ್ಟಿಗೆ ಕಳವು ಆರೋಪ ಮಾಡಿದ ಎಎಪಿ
MCD Standing Committee Election; AAP accuses BJP of stealing ballot box

ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆ

ನವದೆಹಲಿ:ಎಂಸಿಡಿಯ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಬಿಜೆಪಿ ಕೌನ್ಸಿಲರ್, ಮತ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ. ಎಂಸಿಡಿಯ ನೂತನ ಮೇಯರ್​ ಎಎಪಿಯ ಶೆಲ್ಲಿ ಒಬೆರಾಯ್​ ಅಧ್ಯಕ್ಷತೆಯಲ್ಲಿ ನಡೆದ ಸದನದಲ್ಲಿ ಇಡೀ ರಾತ್ರಿ ಗದ್ದಲ ನಡೆದಿದೆ. ಬಿಜೆಪಿ ಕೌನ್ಸಿಲರ್ ಮತಪೆಟ್ಟಿಗೆಯನ್ನು ತೆಗೆದುಕೊಂಡು ತಮ್ಮ ಪಕ್ಷದವರ ಮೇಲೆ ಎಸೆದು ಸದನದ ಬಾವಿಗಿಳಿದು ಪ್ರತಿಭಟಿಸಿರುವ ವಿಡಿಯೋವನ್ನು ಎಎಪಿ ಹಂಚಿಕೊಂಡಿದೆ.

ಬಿಜೆಪಿಯ ಗೂಂಡಾಗಿರಿ ವರ್ತನೆ: ಕಳೆದ 17 ವರ್ಷದಿಂದ ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ ಅಧಿಕಾರದ ಹಿಡಿತ ಸಾಧಿಸಿದ್ದ ಬಿಜೆಪಿಯನ್ನು ಜನರು ಸೋಲಿಸಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರ ಚುನಾವಣಾ ಮತಪೆಟ್ಟಿಗೆಯನ್ನು ಅವರು ಕಳವು ಮಾಡುತ್ತಿದ್ದಾರೆ. ಬಿಜೆಪಿ ಸದಸ್ಯರು ಗೂಂಡಾಗಿರಿ ವರ್ತನೆ ತೋರುತ್ತಿದ್ದಾರ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಷ್​ ಸಿಸೋಡಿಯಾ ಟ್ವೀಟ್​ ಮಾಡಿದ್ದಾರೆ.

ಬಿಜೆಪಿ ಚುನಾವಣೆ ಅಂದರೆ ಏಕೆ ಹೆದರುತ್ತದೆ: ಬಿಜೆಪಿ ಕೌನ್ಸಿಲರ್​ ಚುನಾವಣೆ ಮತಪೆಟ್ಟಿಗೆಯನ್ನು ಕಿತ್ತುಕೊಂಡಿದ್ದಾರೆ. ಬಿಜೆಪಿ ಚುನಾವಣೆ ಎಂದರೆ ಏಕೆ ಹೆದುರುತ್ತದೆ ಎಂದು ಎಎಪಿ ನಾಯಕ, ಶಾಸಕರಾಗಿರುವ ಅತಿಶ್​ ಸಿಂಗ್​​ ಸದನದ ವಿಡಿಯೋವನ್ನು ಹಂಚಿಕೊಂಡು ಪ್ರಶ್ನಿಸಿದ್ದಾರೆ. ಬಿಜೆಪಿ ಮೇಯರ್​ ಅಭ್ಯರ್ಥಿ ರೇಖಾ ಗುಪ್ತಾ ಜೊತೆ ಕೆಲವು ಮಹಿಳಾ ಕೌನ್ಸಿಲರ್​ಗಳು ಮೇಯರ್​ ಮೈಕ್​ ಕಿತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ. ಸದನದೊಳಗೆ ಬಿಜೆಪಿ ನಡೆಯನ್ನು ಅನೇಕ ಮಂದಿ ಟ್ವೀಟ್​ ಮೂಲಕ ಖಂಡಿಸಿದ್ದಾರೆ.

ಅರಾಜಕತೆಯ ಎಎಪಿ: ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಟ್ವಿಟರ್​, ಎಎಪಿ ಕೌನ್ಸಿಲರ್​ಗಳು ಬಿಜೆಪಿ ಸದಸ್ಯರ ಮೇಲೆ ನಡೆಸಿರುವ ದಾಳಿ, ಜಗಳ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದ್ಮಿ ಪಕ್ಷವು ಅರಾಜಕತಾವಾದಿಯಾಗಿದೆ. ಗೂಂಡಾಗಿರಿ ಮಾಡುವ ಮೂಲಕ ಎಂಸಿಡಿ ಚುನಾವಣೆಗೆ ಅಡ್ಡಿಪಡಿಸಿ, ನಂತರ ಇದಕ್ಕೆ ಬಿಜೆಪಿಯನ್ನು ದೂಷಿಸಿದ್ದರು. ಮೇಯರ್ ಚುನಾವಣೆಯಲ್ಲೂ ಗೂಂಡಾಗಿರಿ ನಡೆಸಿದ ಅವರು ಇದೀಗ ಸ್ಥಾಯಿ ಸಮಿತಿ ಚುನಾವಣೆಗೆ ಅಡ್ಡಿಪಡಿಸಿದರು ಎಂದು ಆರೋಪಿಸಿದೆ.

ಸ್ಥಾಯಿ ಸಮಿತಿ ಸದಸ್ಯರ ಗೌಪ್ಯ ಮತದಾನ ನಡೆಯುತ್ತಿತ್ತು. ಈ ವೇಳೆ ನಿಯಮವನ್ನು ಉಲ್ಲಂಘಿಸಿ, ಮೊಬೈಲ್​ ಫೋನ್​ನಲ್ಲಿ ಸೆರೆಹಿಡಿಯಲು ಮುಂದಾಗಿದ್ದಾರೆ. ಎಎಪಿ ನಾಚಿಕೇಡಿನ ಮೂಲಕ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಬಯಸುತ್ತದೆ. ಎಎಪಿಯ ಮೇಯರ್ ಮತದಾನದ ಪ್ರಕ್ರಿಯೆಯಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಹ ಅನುಮತಿಸಿದರು ಎಂದು ಬಿಜೆಪಿ ಎಂಎಲ್​ಎ ವಿಜೇಂದ್ರ ಗುಪ್ತಾ ಟ್ವೀಟ್​ ಮಾಡಿದ್ದಾರೆ.

ಕಳೆದ ರಾತ್ರಿ ಸದನದಲ್ಲಿ ಬಿಜೆಪಿ ಮತ್ತು ಎಎಪಿ ನಾಯಕರು ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಜೊತೆಗೆ ಬಾಟೆಲ್​ ಹಾಗೂ ಅರ್ಥ ತಿಂದು ಉಳಿದಿದ್ದ ಹಣ್ಣುಗಳನ್ನು ಪರಸ್ಪರ ಎರಚಾಡಿಕೊಂಡಿದ್ದಾರೆ. ಎರಡು ಕಡೆಯವರು ಪರಸ್ಪರನ್ನು ದೂಷಿಸುವ ಕೆಲಸ ಮಾಡಿದರು. ಇದರಿಂದ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು. ಘಟನೆ ಕುರಿತು ಮಾತನಾಡಿರುವ ಮೇಯರ್​, ಸ್ಥಾಯಿ ಸಮಿತಿ ಆರು ಜನ ಸದಸ್ಯರ ಚುನಾವಣೆ ಸಂದರ್ಭದಲ್ಲಿ ಕೆಲವು ಬಿಜೆಪಿ ಕೌನ್ಸಿಲರ್​ಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ರ‍್ಯಾಗಿಂಗ್​​ಗೆ ಬೇಸತ್ತು ಮೆಡಿಕಲ್​ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

Last Updated : Feb 23, 2023, 5:17 PM IST

ABOUT THE AUTHOR

...view details