ಪುಣೆ (ಮಹಾರಾಷ್ಟ್ರ):ಪ್ರಿಯತಮೆಗೆ ಗಿಫ್ಟ್ ನೀಡಲು ಪ್ರೇಮಿ ಕಳ್ಳತನಕ್ಕಿಳಿದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಪ್ರಿಯತಮೆಗೆ ನೀಡಲೆಂದು ಎರಡು ಚಿನ್ನದಂಗಡಿಯಲ್ಲಿ ಚಿನ್ನದ ಉಂಗುರು ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪುಣೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿರುವ ಹನುಮಂತ್ ರೋಖಡೆ ಮತ್ತು ಆತನ ಸ್ನೇಹಿತ ವೈಭವ್ ಸಂಜಯ್ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಪ್ರೇಯಸಿಗೆ ಗಿಫ್ಟ್ ನೀಡಲು ಚಿನ್ನ ಕಳ್ಳತನಕ್ಕಿಳಿದ ಪ್ರೇಮಿ ಏನಿದು ಪ್ರಕರಣ:ಪುಣೆಯ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಪ್ರಿಯತಮೆಗೆ ಐಷಾರಾಮಿ ಗಿಫ್ಟ್ ನೀಡಲು ಮುಂದಾಗಿದ್ದಾನೆ. ಆದರೆ, ಹಣವಿಲ್ಲದೆ ಕಳ್ಳತನದ ದಾರಿ ಹಿಡಿದಿದ್ದಾನೆ. ಹೀಗಾಗಿ ಒಂದೇ ದಿನ ಹಡಪ್ಸರ್ ಮತ್ತು ಕೊತ್ರುಡ್‌ನಲ್ಲಿರುವ ಬಂಗಾರದಂಗಡಿಗೆ ಆಗಮಿಸಿ ಉಂಗುರ ತೋರಿಸುವಂತೆ ಕೇಳಿಕೊಂಡಿದ್ದಾನೆ.
ಅಂಗಡಿಯಾತ ಉಂಗುರಗಳ ಆತನ ಮುಂದಿಟ್ಟಿದ್ದು, ಕೆಲ ಆಭರಣ ಹಾಕಿಕೊಂಡು ಬೆಲೆಗಳ ಬಗ್ಗೆ ವಿಚಾರಿಸಿದ್ದಾನೆ. ಬಳಿಕ ಹೊರಗೆ ಆತನ ಸ್ನೇಹಿತ ಬೈಕ್ನಲ್ಲಿ ಆಗಮಿಸಿ ಕರೆ ಮಾಡಿ ತಿಳಿಸಿದ್ದಾನೆ. ಕರೆ ಬಂದ ತಕ್ಷಣವೇ ಅಂಗಡಿಯೊಳಗಿದ್ದ ಖದೀಮ ಮುಂದಿದ್ದ ಎರಡು ಉಂಗುರ ದೋಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದೆಲ್ಲವೂ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಳಿಕ ಅಂಗಡಿ ಮಾಲೀಕರು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿ ಆರೋಪಿಗಳ ಬಂಧಿಸಿದ್ದಾರೆ. ಬಂಧಿತರಿಂದ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಉಂಗುರ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಚಾಲಾಕಿ ಸ್ನೇಹಿತೆ.. ಗೆಳತಿಗೆ ಮದುವೆ ಕಾರ್ಡ್ ಕೊಡಲು ಬಂದು ಮನೆಯಲ್ಲಿದ್ದ ಚಿನ್ನಾಭರಣ ಕದ್ದಳು!