ಕರ್ನಾಟಕ

karnataka

By

Published : Feb 25, 2023, 7:28 AM IST

ETV Bharat / bharat

ದೆಹಲಿ ಪೊಲೀಸರಿಗೆ ಪಾಲಿಕೆಯಲ್ಲಿ ಆದ ಗದ್ದಲದ ಬಗ್ಗೆ ದೂರು ನೀಡಿದ ಮೇಯರ್​​ ಶೈಲಿ ಒಬೆರಾಯ್​​

ಶುಕ್ರವಾರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ ಗದ್ದಲ ಮತ್ತು ಪ್ರತಿಭಟನೆ ಬಗ್ಗೆ ಮೇಯರ್ ಶೈಲಿ ಒಬೆರಾಯ್ , ಪಕ್ಷದ ನಾಯಕರೊಂದಿಗೆ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಗೆ ಆಗಮಿಸಿ, ಬಿಜೆಪಿ ಕೌನ್ಸಿಲರ್​ಗಳ ವಿರುದ್ಧ ದೂರು ನೀಡಿದ್ದಾರೆ.

Etv Bharatದೆಹಲಿ ಪೊಲೀಸರಿಗೆ ಪಾಲಿಕೆಯಲ್ಲಿ ಆದ ಗದ್ದಲದ ಬಗ್ಗೆ ದೂರು ನೀಡಿದ ಮೇಯರ್​​ ಶೈಲಿ ಒಬೆರಾಯ್​​
Etv Bharatದೆಹಲಿ ಪೊಲೀಸರಿಗೆ ಪಾಲಿಕೆಯಲ್ಲಿ ಆದ ಗದ್ದಲದ ಬಗ್ಗೆ ದೂರು ನೀಡಿದ ಮೇಯರ್​​ ಶೈಲಿ ಒಬೆರಾಯ್​​

ನವದೆಹಲಿ:ಶುಕ್ರವಾರ ದಿಲ್ಲಿ ಮಹಾನಗರ ಪಾಲಿಕೆ ಸಭೆಯಲ್ಲಿ ನಡೆದ ಗಲಾಟೆ ಮತ್ತು ಗದ್ದಲದ ಬಗ್ಗೆ ಮೇಯರ್ ಶೆಲ್ಲಿ ಒಬೆರಾಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೇಯರ್ ಕೌನ್ಸಿಲರ್‌ಗಳು ಮತ್ತು ಮುಖಂಡರೊಂದಿಗೆ ಕಮಲಾ ಮಾರ್ಕೆಟ್ ಪೊಲೀಸ್​ ಠಾಣೆಗೆ ಆಗಮಿಸಿ, ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳ ವಿರುದ್ಧ ಹಲ್ಲೆ, ಹಲ್ಲೆ, ಅನುಚಿತ ವರ್ತನೆ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ.

ದೆಹಲಿ ಪೊಲೀಸರಿಂದ ಭದ್ರತೆ ಕೋರಿದ ಮೇಯರ್:ಬಿಜೆಪಿ ಕೌನ್ಸಿಲರ್‌ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮೇಯರ್ ಶೈಲಿ ಒಬೆರಾಯ್ ಆಗ್ರಹಿಸಿದ್ದಾರೆ. ತಮಗೆ ಈಗ ಸುರಕ್ಷತೆ ಇಲ್ಲ, ಹಾಗಾಗಿ ದೆಹಲಿ ಪೊಲೀಸರಿಂದ ರಕ್ಷಣೆ ಕೋರಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಇವತ್ತು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರ ಭೇಟಿಗೆ ಸಮಯ ಕೂಡಾ ಕೋರಿದ್ದಾರೆ, ಅವರು ತಮ್ಮ ದೂರುಗಳನ್ನು ಅವರಿಗೆ ಮತ್ತೊಮ್ಮೆ ನೀಡಲಿದ್ದು, ತಮಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನು ಓದಿ:ಸ್ಥಾಯಿ ಸಮಿತಿ ಚುನಾವಣೆ: ದೆಹಲಿ ಎಂಸಿಡಿ ಹೌಸ್‌ನಲ್ಲಿ ಬಿಜೆಪಿ ಕೌನ್ಸಿಲರ್‌ಗಳಿಂದ ಘೋಷಣೆ

ಮೇಯರ್ ಪೀಠದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು: ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೈಲಿ ಒಬೆರಾಯ್, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಮತದಾನದ ನಂತರ ಮತ ಎಣಿಕೆ ವೇಳೆ ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳು ಅಂದುಕೊಂಡಂತೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಹೀಗಾಗಿ ಅವರು ಗಲಾಟೆ ಮಾಡಲು ಪ್ರಾರಂಭಿಸಿದರು.

ಸ್ಥಾಯಿ ಸಮಿತಿ ಚುನಾವಣಾ ಫಲಿತಾಂಶವನ್ನು ಘೋಷಿಸಲು ಪ್ರಾರಂಭಿಸಿದಾಗ, ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳ ಗುಂಪೊಂದು ಪಾಲಿಕೆ ಹೌಸ್​​ನಲ್ಲಿದ್ದ ಕುರ್ಚಿಗಳನ್ನು ಹಿಡಿದು ತೂರಾಟ ನಡೆಸಲು ಮುಂದಾದರು. ತಮ್ಮ ಮೇಲೆ ಹಲ್ಲೆಗೂ ಮುಂದಾದರು, ತಾವು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಅಷ್ಟರಲ್ಲಿ ಬಿಜೆಪಿ ಕಾರ್ಪೊರೇಟರ್ ತಮ್ಮನ್ನು ತಳ್ಳಿದ್ದಾರೆ ಎಂದು ಶೆಲ್ಲಿ ಆರೋಪಿಸಿದ್ದಾರೆ. ಇದಲ್ಲದೇ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್‌ಗಳ ಮೇಲೂ ಬಿಜೆಪಿ ಕೌನ್ಸಿಲರ್​ಗಳು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಮೇಯರ್​ ದೂರಿದ್ದಾರೆ.

ಇದನ್ನು ಓದಿ:ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ

ಮಹಿಳಾ ಸುರಕ್ಷತೆ ಬಗ್ಗೆ ಮೇಯರ್ ಪ್ರಶ್ನೆ: ದೆಹಲಿಯಲ್ಲಿ ಅಲ್ಲಿನ ಮೇಯರ್ ಸುರಕ್ಷಿತವಾಗಿಲ್ಲ ಎಂದಾದರೆ, ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಸ್ಥಿತಿ ಏನಾಗಬಹುದು ಎಂಬುದನ್ನು ನೀವೇ ಊಹಿಸಬಹುದು ಶೆಲ್ಲಿ ಒಬೆರಾಯ್ ಕಳವಳ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋತಿದೆ, ತನ್ನ ಸೋಲನ್ನು ಭಾರತೀಯ ಜನತಾ ಪಕ್ಷ ಒಪ್ಪಿಕೊಳ್ಳಬೇಕು ಎಂದು ಶೆಲ್ಲಿ ಒತ್ತಾಯಿಸಿದರು.

ಇದನ್ನು ಓದಿ:ಕೆನ್ನೆಗೆ ಏಟು, ಕಾಲಿನಿಂದ ಒದ್ರು, ಸಲಕರಣೆ ಧ್ವಂಸ: ದೆಹಲಿ ಪಾಲಿಕೆಯಲ್ಲಿ ಬಿಜೆಪಿ-ಆಪ್‌ ಸದಸ್ಯರ ಆಟಾಟೋಪ
ಇನ್ನಷ್ಟು ಓದಿ:ಯುವತಿಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದ ಆರೋಪ: ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರೇಮಿ

ABOUT THE AUTHOR

...view details