ಕರ್ನಾಟಕ

karnataka

ETV Bharat / bharat

ಮುಸ್ಲಿಮರ ಬಗ್ಗೆ ಬಿಜೆಪಿ ಧೋರಣೆ ಬದಲಾಗುತ್ತಾ? ಮಾಯಾವತಿ ಪ್ರಶ್ನೆ - ಮುಸ್ಲಿಮರ ಬಗ್ಗೆ ಬಿಜೆಪಿ ಧೋರಣೆ ಬದಲಾಗುತ್ತಾ

ಬಿಜೆಪಿ ಹಾಗೂ ಇವರ ಸರ್ಕಾರಗಳು ಮುಸ್ಲಿಂ ಸಮಾಜ ಹಾಗೂ ಮಸೀದಿ, ಮದರಸಾಗಳ ಬಗೆಗಿನ ತಮ್ಮ ನಕಾರಾತ್ಮಕ ವರ್ತನೆಯನ್ನು ಬದಲಾಯಿಸಲಿವೆಯಾ ಎಂದು ಮಾಯಾವತಿ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

ಮುಸ್ಲಿಮರ ಬಗ್ಗೆ ಬಿಜೆಪಿಯ ಧೋರಣೆ ಬದಲಾಗುತ್ತಾ? ಮಾಯಾವತಿ ಪ್ರಶ್ನೆ
mayawati-tweet-about-rss-chief-mohan-bhagwat-visit-to-madrassa

By

Published : Sep 24, 2022, 3:32 PM IST

ಲಖನೌ: ಮಸೀದಿ ಹಾಗೂ ಮದರಸಾಗಳಿಗೆ ಭೇಟಿ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಈ ಕ್ರಮವನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಮಾಯಾವತಿ, ಭಾಗವತ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಿನ್ನೆ ದೆಹಲಿಯಲ್ಲಿರುವ ಮಸೀದಿ, ಮದರಸಾಗಳಿಗೆ ಹೋಗಿ ಉಲೇಮಾಗಳನ್ನು ಭೇಟಿ ಮಾಡಿದ್ದಾರೆ ಮತ್ತು ಅವರಿಂದ ತಮ್ಮನ್ನು ತಾವು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಎಂದು ಕರೆಸಿಕೊಂಡಿದ್ದಾರೆ. ಅಂದರೆ ಇದರ ನಂತರ ಬಿಜೆಪಿ ಹಾಗೂ ಇವರ ಸರ್ಕಾರಗಳು ಮುಸ್ಲಿಂ ಸಮಾಜ ಹಾಗೂ ಮಸೀದಿ, ಮದರಸಾಗಳ ಬಗೆಗಿನ ತಮ್ಮ ನಕಾರಾತ್ಮಕ ಧೋರಣೆಯನ್ನು ಬದಲಾಯಿಸಲಿವೆಯಾ ಎಂದು ಮಾಯಾವತಿ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

ಮಾಯಾವತಿ ಟ್ವೀಟ್

ಖಾಲಿ ಜಾಗದಲ್ಲಿ ಕೆಲ ನಿಮಿಷಗಳವರೆಗೆ ಅನಿವಾರ್ಯವಾಗಿ ನಮಾಜ್ ಸಲ್ಲಿಸುವುದನ್ನು ಕೂಡ ಉತ್ತರ ಪ್ರದೇಶಕ್ಕೆ ಸಹಿಸಲಾಗುತ್ತಿಲ್ಲ. ಅಲ್ಲದೆ ಸರ್ಕಾರಿ ಮದರಸಾಗಳನ್ನು ನಿರ್ಲಕ್ಷಿಸಿ ಖಾಸಗಿ ಮದರಸಾಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆದರೆ, ಈ ಕುರಿತು ಆರೆಸ್ಸೆಸ್ ಮುಖ್ಯಸ್ಥರ ಆಳವಾದ ಮೌನದ ಅರ್ಥವೇನು ಎಂಬುದನ್ನು ಕೂಡ ಅವರು ತಿಳಿದುಕೊಳ್ಳಲಿ ಎಂದು ಮಾಯಾವತಿ ಹೇಳಿದ್ದಾರೆ.

ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಜಧಾನಿ ದೆಹಲಿಯ ಕೆಜಿ ಮಾರ್ಗದಲ್ಲಿರುವ ಮಸೀದಿಗೆ ಭೇಟಿ ಮಾಡಿದ್ದರು. ಪ್ರಬಲ ಹಿಂದುತ್ವ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಮುಖ್ಯಸ್ಥರೊಬ್ಬರು ಮಸೀದಿಗೆ ಭೇಟಿ ನೀಡಿದ್ದು ಇದೇ ಮೊದಲು. ಮಸೀದಿಯನ್ನು ತಲುಪಿದ ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಮೋಹನ್ ಭಾಗವತ್ ಮದರಸಾದಲ್ಲಿರುವ ವಿದ್ಯಾರ್ಥಿಗಳನ್ನು ಕೂಡ ಭೇಟಿಯಾಗಿದ್ದರು.

ಇದನ್ನು ಓದಿ:ಲಖನೌದಲ್ಲಿ ಆರು ಪಿಎಫ್​ಐ ಕಾರ್ಯಕರ್ತರ ಬಂಧನ.. ಎನ್​ಐಎ ಕೇರಳ ಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲೇನಿದೆ?

ABOUT THE AUTHOR

...view details