ಕರ್ನಾಟಕ

karnataka

ETV Bharat / bharat

AIMIM ಜೊತೆ ಮೈತ್ರಿ ಇಲ್ಲ : BSP ಮುಖ್ಯಸ್ಥೆ ಮಾಯಾವತಿ ಸ್ಪಷ್ಟನೆ - ಮಾಯಾವತಿ ಟ್ವೀಟ್​

ಪಂಜಾಬ್ ಅನ್ನು ಹೊರತುಪಡಿಸಿ, ಬಿಎಸ್​​ಪಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್​​ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಎಸ್​​ಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಜೊತೆ ಮೈತ್ರಿ ಮಾಡಿಕೊಂಡಿದೆ..

mayavathi
mayavathi

By

Published : Jun 27, 2021, 4:33 PM IST

ಲಖನೌ: ಉತ್ತರಪ್ರದೇಶ ಮತ್ತು ಉತ್ತರಾಖಂಡ್​ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿರುವ ಮಾಯಾವತಿ, ಉತ್ತರಪ್ರದೇಶ ಚುನಾವಣೆಗೆ ಅಸಾದುದ್ದೀನ್ ಒವೈಸಿ ಅವರ AIMIM ಪಕ್ಷದ ಜೊತೆ ಬಿಎಸ್​ಪಿ ಕೈಜೋಡಿಸಲಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದಾರೆ.

ಯುಪಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ AIMIM ಮತ್ತು BSP ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಸುಳ್ಳು, ಇದು ಜನರನ್ನು ದಾರಿತಪ್ಪಿಸುವ ವರದಿ. ಮತ್ತು ಆಧಾರರಹಿತವಾಗಿದೆ. ಇದರಲ್ಲಿ ಯಾವುದೂ ಸತ್ಯವಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಪಂಜಾಬ್ ಅನ್ನು ಹೊರತುಪಡಿಸಿ, ಬಿಎಸ್​​ಪಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್​​ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಎಸ್​​ಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಜೊತೆ ಮೈತ್ರಿ ಮಾಡಿಕೊಂಡಿದೆ.

ಇದನ್ನೂ ಓದಿ:ಮೇನಕಾ ಗಾಂಧಿ ನಮ್ಮ ಪಕ್ಷದವರು ಎನ್ನುವುದಕ್ಕೆ ನನಗೆ ನಾಚಿಕೆ ಆಗುತ್ತದೆ : ಅಜಯ್​ ವಿಷ್ಣೋಯಿ

ABOUT THE AUTHOR

...view details