ಕರ್ನಾಟಕ

karnataka

ETV Bharat / bharat

ಅಗ್ನಿಪಥ್ ಯೋಜನೆ ಗ್ರಾಮೀಣ ಯುವಜನತೆಗೆ ಮಾರಕ ಎಂದ ಮಾಯಾವತಿ: ಯೋಜನೆ ಹಿಂಪಡೆಯಲು ಆಗ್ರಹ - ಅಗ್ನಿಪಥ್ ಯೋಜನೆ ಖಂಡಿಸಿ ಪ್ರತಿಭಟನೆ

ದೇಶದ ಜನತೆ ಈಗಾಗಲೇ ಬಡತನ ಹಾಗೂ ಬೆಲೆಯೇರಿಕೆಗಳಿಂದ ಬಳಲುತ್ತಿದ್ದು, ಅವರ ನೋವನ್ನು ಇದರಿಂದ ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ. ಕೇಂದ್ರ ಸರ್ಕಾರವು ತಕ್ಷಣವೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮರುಪರಿಶೀಲಿಸಬೇಕು ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಬಲವಾಗಿ ಆಗ್ರಹಿಸಿದ್ದಾರೆ.

mayawati-asks-govt-to-reconsider-agneepath-scheme-calls-it-unfair
mayawati-asks-govt-to-reconsider-agneepath-scheme-calls-it-unfair

By

Published : Jun 16, 2022, 12:58 PM IST

ಲಖನೌ( ಉತ್ತರಪ್ರದೇಶ):ಸೇನಾಪಡೆಗಳಲ್ಲಿನ ನೇಮಕಾತಿಗಾಗಿ ಕೇಂದ್ರ ಸರ್ಕಾರ ಮೊನ್ನೆ ಘೋಷಿಸಿರುವ ಅಗ್ನಿಪಥ ಯೋಜನೆಯು ಗ್ರಾಮೀಣ ಯುವ ಸಮುದಾಯದ ವಿರೋಧಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಜರಿದಿದ್ದಾರೆ.

ಆರ್ಮಿ ನೇಮಕಾತಿಗಳನ್ನು ದೀರ್ಘಾವಧಿಯಿಂದ ಬಾಕಿ ಇಟ್ಟು, ಈಗ ಕೇಂದ್ರ ಸರ್ಕಾರವು 4 ವರ್ಷ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳುವ ಅಗ್ನಿವೀರ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಿಸಿದರೂ ಇದರ ಬಗ್ಗೆ ದೇಶದ ಯುವಕರು ಆಕ್ರೋಶಗೊಂಡಿದ್ದಾರೆ. ಆರ್ಮಿ ನೇಮಕಾತಿ ಕ್ರಮದ ಬದಲಾವಣೆಯನ್ನು ಯುವಕರು ಬಹಿರಂಗವಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸರ್ಕಾರವು ಸೈನಿಕರ ಸೇವಾ ಅವಧಿಯನ್ನು ಉದ್ದೇಶಪೂರ್ವಕವಾಗಿ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುತ್ತಿದೆ. ಈ ಮೂಲಕ ಸೈನಿಕರಿಗೆ ನೀಡಲಾಗುವ ಪಿಂಚಣಿ ಸೌಲಭ್ಯ ನಿರಾಕರಿಸಲಾಗುತ್ತದೆ. ಇದು ಸಂಪೂರ್ಣ ಅನ್ಯಾಯದಿಂದ ಕೂಡಿದ್ದು, ಭವಿಷ್ಯದಲ್ಲಿ ದೇಶದ ಯುವಕರು ಹಾಗೂ ಅವರ ಕುಟುಂಬದವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಮಾಯಾವತಿ ಟ್ವೀಟ್​ಗಳ ಸರಣಿಯಲ್ಲಿ ಆರೋಪಿಸಿದ್ದಾರೆ.

ದೇಶದ ಜನತೆ ಈಗಾಗಲೇ ಬಡತನ ಹಾಗೂ ಬೆಲೆಯೇರಿಕೆಗಳಿಂದ ಬಳಲುತ್ತಿದ್ದು, ಅವರ ನೋವನ್ನು ಇದರಿಂದ ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ. ಕೇಂದ್ರ ಸರ್ಕಾರವು ತಕ್ಷಣವೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮರುಪರಿಶೀಲಿಸಬೇಕು ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಬಲವಾಗಿ ಆಗ್ರಹಿಸಿದ್ದಾರೆ.

ಅಗ್ನಿವೀರ್ ವಿರೋಧಿಸಿ ಪ್ರತಿಭಟನೆ:ಅಗ್ನಿವೀರ್ ಯೋಜನೆ ಘೋಷಣೆಯ ನಂತರ ಸೇನಾಪಡೆ ಸೇರಬೇಕೆಂಬ ಆಕಾಂಕ್ಷಿಗಳು ದೇಶದ ಕೆಲವೆಡೆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರದಂದು ಬಿಹಾರ ರಾಜ್ಯದ ಬಕ್ಸಾರ್​ನಲ್ಲಿ ನೂರಾರು ಯುವಕರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ರಾಜಸ್ಥಾನದ ಕೆಲವೆಡೆ ಸಹ ಅಗ್ನಿವೀರ್ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ.

ABOUT THE AUTHOR

...view details