ಕರ್ನಾಟಕ

karnataka

ETV Bharat / bharat

G20 ಶೃಂಗಸಭೆ ಬಳಿಕ ವಾರಾಣಸಿಗೆ ಭೇಟಿ ನೀಡಿದ ಮಾರಿಷಸ್​ ಪ್ರಧಾನಿ; ಎರಡು ದಿನ ಕಾಶಿ ಪ್ರವಾಸ - ಅದ್ದೂರಿ ಸ್ವಾಗತ ನೀಡಲಾಗಿದೆ

ಮಾರಿಷಸ್​ ಪ್ರಧಾನಿ ಪ್ರವಿಂದ್​ ಜುಗ್ನಾಥ್​ ಅವರಿಗೆ ವಾರಾಣಸಿಯೊಂದಿಗೆ ವಿಶೇಷ ನಂಟಿದೆ. ಇದೇ ಕಾರಣಕ್ಕೆ ಅವರು ಭಾರತಕ್ಕೆ ಭೇಟಿ ನೀಡಿದಾಗ ತಪ್ಪದೇ ಇಲ್ಲಿಗೆ ಆಗಮಿಸುತ್ತಾರೆ

mauritius-prime-minister-pravind-jugnauth-participated-in-ganga-aarti-darshan-of-baba-vishwanath-of-varanasi
mauritius-prime-minister-pravind-jugnauth-participated-in-ganga-aarti-darshan-of-baba-vishwanath-of-varanasi

By ETV Bharat Karnataka Team

Published : Sep 11, 2023, 4:36 PM IST

ವಾರಾಣಸಿ: ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಬಳಿಕ ಮಾರಿಷಸ್​ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ನೇರವಾಗಿ ವಾರಾಣಸಿಗೆ ಭೇಟಿ ನೀಡಿದ್ದಾರೆ. ಸೋಮವಾರ ವಾರಾಣಸಿಗೆ ಬಂದಿಳಿದ ಇವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಲಾಲ್​ ಬಹದ್ದೂರು ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್​ ಅನುಸಾರ ಅವರಿಗೆ ಸ್ವಾಗತ ನೀಡಲಾಗಿದ್ದು, ಮಂಗಳವಾರ ಮಧ್ಯಾಹ್ನ ಅವರು ಮಾರಿಷಸ್​ ಮರಳಲಿದ್ದಾರೆ

ಪೊಲೀಸ್​ ಭದ್ರತೆ

ವಾರಾಣಸಿ ಆಡಳಿತದ ಪರವಾಗಿ ವಾರಾಣಸಿ ವಿಭಾಗದ ಕೌಶಲ್​ ರಾಜ್​ ಶರ್ಮಾ ಮಾರಿಷಿಯಸ್​ ಪ್ರಧಾನಿ ಅವರನ್ನು ಹೊಟೇಲ್​ ತಾಜ್​ನಲ್ಲಿ ಹೂ ಗುಚ್ಛ ನೀಡುವ ಮೂಲಕ ಬರ ಮಾಡಿಕೊಂಡರು. ಕೆಲ ಹೊತ್ತಿನ ವಿಶ್ರಾಂತಿ ಬಳಿಕ ಪ್ರಧಾನಿ ಅವರು ದಶಾ ಸುಮೇದ್​ ಘಾಟ್​​ಗೆ ಭೇಟಿ ನೀಡಿದರು. ಇಲ್ಲಿ ಇದೆ ವೇಳೆ ಅವರ ಮಾವನ ಅವರ ಚಿತಾ ಭಸ್ಮಾವನ್ನು ಗಂಗೆಯಲ್ಲಿ ಬಿಟ್ಟರು. ಮಾರಿಷಸ್​​ ಪ್ರಧಾನಿ ಆಗಮನದ ಹಿನ್ನಲೆ ಸುತ್ತಮುತ್ತ ಪ್ರದೇಶದಲ್ಲಿ ರಕ್ಷಣೆಯನ್ನು ಬಿಗಿ ಮಾಡಲಾಗಿತ್ತು. ವಾರಾಣಸಿಯಲ್ಲಿ ಎರಡು ದಿನಗಳ ಕಾಲ ಪ್ರವಾಸ ನಡೆಸಲಿರುವ ಹಿನ್ನೆಲೆ ನಗರದಲ್ಲಿ ಅನೇಕ ಬಿಗಿ ಬಂದೋಬಸ್ತ್​​ ನಡೆಸಿದ್ದು, ಪ್ರಮುಖ ಮಾರ್ಗದಲ್ಲಿ ಸಂಚಾರ ಬದಲಾಯಿಸಲಾಗಿತ್ತು.

ಮಾರಿಷಸ್​​ ಪ್ರಧಾನ ಮಂತ್ರಿ ಈ ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು. ಇಲ್ಲಿ ವಿಶೇಷ ಪೂಜೆ ನೆರವೇರಿಸಿದ ಅವರು, ಬಳಿಕ ನೇರವಾಗಿ ದಶಶ್ವಮೇಧ ಘಾಟ್​​ಗೆ ತೆರಳಿ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ಅವರ ಕುಟುಂಬ ಸದಸ್ಯರ ಉಪಸ್ಥಿತಿ ಇರಲಿದೆ. ಈಗಾಗಲೇ ದಶಶ್ವಮೇಧ ಘಾಟ್​ನಲ್ಲಿ ಭದ್ರತೆ ವ್ಯವಸ್ಥೆಯನ್ನು ನಡೆಸಲಾಗಿದೆ.

ವಾರಾಣಸಿಯೊಂದಿಗೆ ಇದೆ ವಿಶೇಷ ಸಂಬಂಧ:ಮಾರಿಷಿಯಸ್​ ಪ್ರಧಾನಿ ಪ್ರವಿಂದ್​ ಜುಗ್ನಾಥ್​ ಅವರಿಗೆ ವಾರಾಣಸಿಯೊಂದಿಗೆ ವಿಶೇಷ ಬಾಂಧವ್ಯ ಇದೆ. ಅವರು ವಾರಾಣಸಿಯ ಸಮೀಪದ ಬಲ್ಲಿಯ ನಿವಾಸಿಗಳಂತೆ ಅವರ ಪೂರ್ವಿಕರು ಇಲ್ಲಿಯೇ ನೆಲೆಸಿದ್ದರು. ಈ ಹಿನ್ನೆಲೆ ಈ ನೆಲದೊಂದಿಗೆ ಅವರ ನಂಟು ಹೆಚ್ಚಿದೆ. 2019ರಲ್ಲೂ ಕೂಡ ಅವರು ವಾರಾಣಸಿಗೆ ಭೇಟಿ ನೀಡಿ, ಕಾಶಿಯಲ್ಲಿನ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ 2021ರಲ್ಲಿ ಮತ್ತೆ ಅವರು ಆಗಮಿಸಿದ್ದರು. ಈ ವೇಳೆ ಕೂಡ ಅವರು ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಭಾರತಕ್ಕೆ ಅವರು ಯಾವಾಗಲೇ ಆಗಮಿಸಿದರೂ, ಅವರು ವಾರಾಣಸಿಗೆ ತಪ್ಪದೇ ಭೇಟಿ ನೀಡುವ ಅಭ್ಯಾಸ ನಡೆಸಿದ್ದಾರೆ.

ಇದನ್ನೂ ಓದಿ: ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ

ABOUT THE AUTHOR

...view details