ಕರ್ನಾಟಕ

karnataka

ETV Bharat / bharat

ನಾಳೆಯಿಂದ 8 ದಿನಗಳ ಕಾಲ ಮಾರಿಷಸ್ ಪ್ರಧಾನಿಯ ಭಾರತ ಪ್ರವಾಸ - ಭಾರತ-ಮಾರಿಷಸ್ ದ್ವಿಪಕ್ಷೀಯ ಸಹಕಾರ

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮಾರಿಷಸ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದು, ಬುಧವಾರ ಗಾಂಧಿನಗರದಲ್ಲಿ ನಡೆಯುವ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಪ್ರವಿಂದ್ ಕುಮಾರ್ ಜುಗ್ನಾಥ್ ಭಾಗವಹಿಸಲಿದ್ದಾರೆ. ನಂತರ ನವದೆಹಲಿಗೆ ತೆರಳಲಿದ್ದು, ಆನಂತರ ವಾರಣಾಸಿಗೆ ಭೇಟಿ ನೀಡಲಿದ್ದಾರೆ..

Mauritius PM Pravind Jugnauth on India visit from tomorrow
ನಾಳೆಯಿಂದ 8 ದಿನಗಳ ಕಾಲ ಮಾರಿಷಸ್ ಪ್ರಧಾನಿಯ ಎಂಟು ದಿನಗಳ ಭಾರತ ಪ್ರವಾಸ

By

Published : Apr 16, 2022, 7:34 PM IST

Updated : Apr 17, 2022, 9:20 AM IST

ನವದೆಹಲಿ: ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ತಮ್ಮ ಪತ್ನಿ ಕೊಬಿತಾ ಜುಗ್ನಾಥ್ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಸುಮಾರು 8 ದಿನಗಳ ಪ್ರವಾಸ ಇದಾಗಿದ್ದು, ಮುಂದಿನ ಮಂಗಳವಾರ ಗುಜರಾತ್​ನ ಜಾಮ್‌ನಗರದಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಸಂಘಟನೆಯ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮಾರಿಷಸ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದು, ಬುಧವಾರ ಗಾಂಧಿನಗರದಲ್ಲಿ ನಡೆಯುವ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಪ್ರವಿಂದ್ ಕುಮಾರ್ ಜುಗ್ನಾಥ್ ಭಾಗವಹಿಸಲಿದ್ದಾರೆ. ನಂತರ ನವದೆಹಲಿಗೆ ತೆರಳಲಿದ್ದು, ಆನಂತರ ವಾರಣಾಸಿಗೆ ಭೇಟಿ ನೀಡಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ಭಾರತ ಮತ್ತು ಮಾರಿಷಸ್ ನಡುವೆ ವಿಶಿಷ್ಟವಾದ ಮತ್ತು ನಿಕಟ ಸಂಬಂಧಗಳಿವೆ. ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯಿಂದ ಎರಡೂ ರಾಷ್ಟ್ರಗಳು ಬೆಸೆಯಲ್ಪಟ್ಟಿವೆ. ಮಾರಿಷಸ್ ಪ್ರಧಾನಿಯ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಕಳೆದ ವಾರವಷ್ಟೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ನವದೆಹಲಿಯಲ್ಲಿ ಮಾರಿಷಸ್ ಕ್ಯಾಬಿನೆಟ್ ಕಾರ್ಯದರ್ಶಿ ಎನ್‌ಕೆ ಬಲ್ಲಾಹ್ ಅವರನ್ನು ಭೇಟಿ ಮಾಡಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವು ಮತ್ತಷ್ಟು ಬಲಗೊಳ್ಳುತ್ತಿವೆ ಎಂದಿದ್ದರು. ಜನವರಿಯಲ್ಲಿ ಪ್ರಧಾನಿ ಮೋದಿ ಮತ್ತು ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಅವರು ಭಾರತದ ನೆರವಿನಿಂದ ಮಾರಿಷಸ್​​ ನಿರ್ಮಾಣ ಮಾಡಿದ್ದ ಕೆಲವು ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ಇದರ ಜೊತೆಗೆ ಭಾರತದ ಬೆಂಬಲದೊಂದಿಗೆ ನಿರ್ಮಾಣ ಮಾಡಲಾದ ಸಿವಿಲ್ ಸರ್ವಿಸ್ ಕಾಲೇಜು ಮತ್ತು 8 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಫಾರ್ಮ್ ಅನ್ನು ಅನಾವರಣಗೊಳಿಸಲಾಯಿತು.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ವಿದ್ಯುತ್ ಕೊರತೆ : ದಿನಕ್ಕೆ 10 ಗಂಟೆ ಕರೆಂಟ್ ಕಟ್​

Last Updated : Apr 17, 2022, 9:20 AM IST

ABOUT THE AUTHOR

...view details