ಮಥುರಾ( ಉತ್ತರಪ್ರದೇಶ):ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಥುರಾದ ಹಿರಿಯ ವಿಭಾಗೀಯ ನ್ಯಾಯಾಧೀಶರ ಆದೇಶದ ಬಳಿಕ ಇಂದಿನಿಂದ ಈದ್ಗಾ ಸಮಗ್ರ ವರದಿ ಪ್ರಕ್ರಿಯೆ ಆರಂಭವಾಗುತ್ತಿದೆ. ಶಾಹಿ ಈದ್ಗಾದ ಅಮೀನ್ ನೀಡಿರುವ ವರದಿಯಲ್ಲಿ ಎಲ್ಲ 13.37 ಎಕರೆ ಜಮೀನು ಮತ್ತು ನಕ್ಷೆಯ ಸಮೀಕ್ಷೆ (ಶಾಹಿ ಮಸೀದಿ ಸಮೀಕ್ಷೆ) ಒಳಗೊಂಡಿದೆ ಎಂದಿದೆ. ಇದೀಗ ಅಮೀನ್ ಅವರು ಜನವರಿ 20ರ ಮೊದಲು ನ್ಯಾಯಾಲಯಕ್ಕೆ ತಮ್ಮ ವರದಿ ಸಲ್ಲಿಸಬೇಕು ಮತ್ತು ಜನವರಿ 20 ರಂದು ಹಿರಿಯ ಸಿವಿಲ್ ನ್ಯಾಯಾಧೀಶರ ವಿಭಾಗೀಯ ನ್ಯಾಯಾಧೀಶರಾದ ಸೋನಿಕಾ ವರ್ಮಾ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದ ಬಳಿ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯ ವಿವಾದದ ಕುರಿತು ಇಂದಿನಿಂದ ಶಾಹಿ ಈದ್ಗಾ ಸಮೀಕ್ಷೆ ಆರಂಭವಾಗಲಿದೆ. ಮಥುರಾದ ಹಿರಿಯ ವಿಭಾಗೀಯ ನ್ಯಾಯಾಧೀಶರ ಆದೇಶದ ಬಳಿಕ ಈದ್ಗಾ ಸಮಗ್ರ ವರದಿ ಪ್ರಕ್ರಿಯೆ ಶುರುವಾಗಿದೆ. ಶಾಹಿ ಈದ್ಗಾದ ಅಮೀನ್ ಅವರ ವರದಿಯು ಎಲ್ಲಾ 13.37 ಎಕರೆ ಜಮೀನಿನ ಸರ್ವೆ ಮತ್ತು ಅಲ್ಲಿನ ನಕ್ಷೆಯ ಸಮೀಕ್ಷೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಜನವರಿ 20 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ: ಜನವರಿ 20ರೊಳಗೆ ಅಮೀನ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದ್ದು, ಜನವರಿ 20ರಂದು ಹಿರಿಯ ಸಿವಿಲ್ ನ್ಯಾಯಾಧೀಶರ ವಿಭಾಗದ ನ್ಯಾಯಾಧೀಶೆ ಸೋನಿಕಾ ವರ್ಮಾ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಹಿಂದೂಗಳ ಮನವಿ ಮೇರೆಗೆ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ನ್ಯಾಯಾಲಯವು ಶಾಹಿ ಈದ್ಗಾದ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶದ ನಂತರ ಹಿಂದೂ ಸಮುದಾಯ ಕೋರ್ಟ್ ತೀರ್ಪನ್ನು ಸ್ವಾಗತಿಸಿತ್ತು. ಆದರೆ, ಅನ್ಯಧರ್ಮದವರು ಈ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು.
ಇದೀಗ ನ್ಯಾಯಾಲಯದ ಆದೇಶದಂತೆ ಜನವರಿ 2 ರಿಂದ ಶಾಹಿ ಈದ್ಗಾ ಸರ್ವೆ ಆರಂಭವಾಗಲಿದ್ದು, ಜನವರಿ 20ರೊಳಗೆ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಈ ಸಂಬಂಧ ಎಲ್ಲ ಕಕ್ಷಿದಾರರಿಗೂ ಸಿವಿಲ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 13.37 ಎಕರೆ ಜಮೀನನ್ನು ಹಿಂದೂಗಳಿಗೆ ನೀಡುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಗುಪ್ತಾ ಅವರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅಮೀನ್ ಅವರಿಂದ ಈ ಬಗ್ಗೆ ವರದಿಯನ್ನು ಕೇಳಿದೆ.
ಹಿಂದೂಗಳ ಒತ್ತಾಯವೇನು: ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದಂತೆ ಆ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದು, ಮಸೀದಿಯೊಳಗೆ ಹಲವು ದೇವಾಲಯಗಳಿರುವ ಬಗ್ಗೆ ಸಂಕೇತಗಳಿವೆ. ಅಲ್ಲದೆ, ಮಸೀದಿಯ ಕೆಳಗೆ ದೇವತೆಯ ಗರ್ಭಗುಡಿ ಮತ್ತು ಹಿಂದೂ ವಾಸ್ತುಶಿಲ್ಪದ ಪುರಾವೆಗಳು ಇಲ್ಲಿ ಇವೆ ಎಂಬ ವಾದವನ್ನು ಮುಂದಿಟ್ಟಿದೆ. ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಹಿಂದೂ ಸಮುದಾಯದ ಕೆಲವರು ಬಯಸಿದ್ದು, ಇದಕ್ಕಾಗಿ ಒಂದು ವರ್ಷದ ಹಿಂದೆಯೇ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಈದ್ಗಾ ಮಸೀದಿಯ ಕುರಿತು ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸೇನೆ ಒತ್ತಾಯಿಸಿತ್ತು.