ಮಥುರಾ (ಉತ್ತರ ಪ್ರದೇಶ):ಜಿಲ್ಲೆಯ ವಿಶೇಷ ಪೋಕ್ಸೊ ಕಾಯಿದೆ ನ್ಯಾಯಾಲಯವು ಕೇವಲ 15 ದಿನಗಳಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸುವ ಮೂಲಕ ಸೋಮವಾರ ಇತಿಹಾಸ ಸೃಷ್ಟಿಸಿದೆ. ಪೊಲೀಸರ ಚುರುಕುತನ ಮತ್ತು ಎಲ್ಲ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪರಾಧಿಗೆ 15 ದಿನಗಳಲ್ಲಿಯೇ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಹೌದು, ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ವಿಧಿಸಿದೆ.
ಏಪ್ರಿಲ್ 8ಕ್ಕೆ ಕಾಣೆಯಾಗಿದ್ದ ಬಾಲಕ: ಸದರ್ ಬಜಾರ್ ಪೊಲೀಸ್ ಠಾಣೆಯ ಔರಂಗಾಬಾದ್ ಪ್ರದೇಶದ 9 ವರ್ಷದ ಬಾಲಕ ಏಪ್ರಿಲ್ 8 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದನು. ಬಾಲಕನ ತಂದೆ ಏಪ್ರಿಲ್ 9 ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಸೈಫ್ ಎಂಬ ವ್ಯಕ್ತಿ ಕಿಡ್ನಾಪ್ ಮಾಡಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
ಬಳಿಕ ಪೊಲೀಸರು ಬಾಲಕನ ಪತ್ತೆಗಾಗಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಇದರೊಂದಿಗೆ ತಂಡ ರಚಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಈ ನಡುವೆ ಪೊಲೀಸರು ಔರಂಗಾಬಾದ್ ಪ್ರದೇಶದಲ್ಲಿ ಸೈಫ್‌ನನ್ನು ಬಂಧಿಸಿ, ವಿಚಾರಿಸಿದರು. ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ, ಸೈಫ್ ಇಡೀ ಘಟನೆ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ. ಆರೋಪಿ ನೀಡಿರುವ ಸುಳಿವಿನ ಆಧರಿಸಿ, ಔರಂಗಾಬಾದ್ ಪ್ರದೇಶದಲ್ಲಿ ಬಾಲಕನ ಮೃತ ದೇಹವನ್ನು ಪತ್ತೆ ಹಚ್ಚಲಾಯಿತು.
ಕತ್ತು ಹಿಸುಕಿ ಕೊಲೆ:ಬಂಧಿತ ಸೈಫ್, ಅಪರಾಧ ಮಾಡಿದ ನಂತರ, ತನ್ನ ಗುರುತು ಬಹಿರಂಗಗೊಳ್ಳುವ ಭಯದಲ್ಲಿದ್ದ. ಇದರಿಂದಾಗಿ ಬಾಲಕನ ಕತ್ತು ಹಿಸುಕಿ ಕೊಂದಿದ್ದಾನೆ. ಹಂತಕ ಸೈಫ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 363, 302, 201, 377 ಹಾಗೂ ಸೆಕ್ಷನ್-6ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಸೈಫ್ ಮೂಲತಃ ಕೆಡಿಎ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಜಜ್ಮೌ ಕಾನ್ಪುರ ನಿವಾಸಿಯಾಗಿದ್ದು, ಔರಂಗಾಬಾದ್‌ನಲ್ಲಿ ವಾಸಿಸುತ್ತಿದ್ದ.
15 ದಿನಗಳಲ್ಲಿ ಸಾಬೀತಾಗಿದ ಅಪರಾಧ:ಸರ್ಕಾರಿ ವಕೀಲ ಅಲ್ಕಾ ಉಪಮನ್ಯು ಮಾತನಾಡಿ, 2023ರ ಏಪ್ರಿಲ್ 8ರಂದು ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ 30 ವರ್ಷದ ಸೈಫ್ 9 ವರ್ಷದ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದರು. ಇದಾದ ಬಳಿಕ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವ ಎಸೆದಿದ್ದಾರೆ. ಏಪ್ರಿಲ್ 28ರಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2 ಮೇ 2023 ರಂದು ನ್ಯಾಯಾಲಯದಲ್ಲಿ ಆರೋಪಿಯ ಮೇಲೆ ಎಲ್ಲಾ ಆರೋಪಗಳು ಸಾಬೀತಾಗಿವೆ.