ಮಥುರಾ(ಉತ್ತರ ಪ್ರದೇಶ) : ವಿವಾಹಿತೆ ಒಬ್ಬಳು ತಾನು ಸಲಿಂಗಕಾಮಿಯೊಡನೆ ಇನ್ನೊಂದು ಮದುವೆ ಆಗುವುದಾಗಿ ಹೇಳಿದ್ದಕ್ಕೆ ಮನೆಯವರು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪೊಲೀಸರು ನಡುವೆ ಪ್ರವೇಶಿಸಿ ಮನೆಯವರ ಮನವೊಲಿಸಿದ್ದಾರೆ. ಈ ಪ್ರಕರಣ ಮಥುರಾ ಜಿಲ್ಲೆಯ ಕೋಸಿಕಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಪ್ರಕರಣ? :ಕೋಸಿಕಲಾದ ವಿವಾಹಿತೆ ಒಬ್ಬಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಗೋರಖ್‌ಪುರದ ಹುಡುಗಿಯೊಂದಿಗೆ ಸ್ನೇಹ ಆಗಿದೆ. ಮೂರು ತಿಂಗಳ ಹಿಂದೆ ಮಥುರಾದ ಮಹಿಳೆ ಗೋರಖ್‌ಪುರಕ್ಕೆ ಓಡಿ ಹೋಗಿದ್ದರು. ಓಡಿ ಹೋಗಿದ್ದವರು ನಾಲ್ಕು ದಿನಗಳ ಹಿಂದೆ ಮರಳಿ ವಕೀಲರೊಂದಿಗೆ ಮಥುರಾಕ್ಕೆ ಬಂದಿದ್ದಾರೆ. ವಕೀಲರ ಮೂಲಕ ಕುಟುಂಬದಿಂದ ಬಿಡುಗಡೆ ಕೊಡುವಂತೆ ಕೇಳಿಕೊಂಡಿದ್ದಾರೆ ಮತ್ತು ಗೋರಖ್‌ಪುರದ ಹುಡುಗಿಯನ್ನು ಮದುವೆಯಾಗುವುದಾಗಿ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.