ಕರ್ನಾಟಕ

karnataka

ETV Bharat / bharat

ಮಥುರಾ: ಇಂದು ಸಂಜೆ ವಿಶ್ವಪ್ರಸಿದ್ಧ ಲಾಥ್ಮಾರ್​ ಹೋಳಿ ಆಚರಣೆ - ಮಥುರಾ ಹೋಳಿ ಸುದ್ದಿ

ಮಥುರಾದ ಬರ್ಸನಾ ಗ್ರಾಮದಲ್ಲಿ ಲಾಥ್ಮಾರ್​ ಹೋಳಿ ಆಚರಣೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಈ ವಿಶ್ವ ಪ್ರಸಿದ್ಧ ಹೋಳಿ ಆಚರಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ

-lathmaar-holi
ಲಾಥ್ಮಾರ್​ ಹೋಳಿ

By

Published : Mar 23, 2021, 10:02 AM IST

Updated : Mar 23, 2021, 11:36 AM IST

ಮಥುರಾ: ಇಲ್ಲಿನ ಪ್ರಸಿದ್ಧ ಬರ್ಸನಾ ಲಾಥ್ಮಾರ್​ ಹೋಳಿ ಆಚರಣೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಇದು ಮಥುರಾದ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಸ್ಥಳಕ್ಕೆ ಹೋಳಿ ಆಚರಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ. ಇನ್ನು ಈ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದಾರೆ.

ಲಾಥ್ಮಾರ್​ ಹೋಳಿ ಆಚರಣೆ

ನಂದಗಾಂವ್‌ನ ಹುರಿಯಾರಿನ್ ಲಾಥ್ಮಾರ್ ಮತ್ತು ಬುರ್ಸಾನಾ ಗ್ರಾಮಸ್ಥರು ಈ ಹೋಳಿ ಆಡಲಿದ್ದಾರೆ. ಈ ಸ್ಥಳ ರಾಧೆ - ಕೃಷ್ಣನ ಸಮ್ಮಿಲನದ ಬಗ್ಗೆ ತಿಳಿಸುತ್ತದೆ. ಈ ಹೋಳಿ ಆಚರಣೆ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬರ್ಸನಾದ ವೇದಿಕೆಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ಗೋಡೆಗಳ ಮೇಲೆ ರಾಧಾ ಕೃಷ್ಣ ವರ್ಣಚಿತ್ರಗಳನ್ನು ಮಾಡಲಾಗಿದೆ.

ಇದನ್ನು ಓದಿ: ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ

ಬರ್ಸಾನದಲ್ಲಿನ ಲಾಥ್ಮಾರ್ ಹೋಳಿ ಹಬ್ಬಕ್ಕೆ ಜಿಲ್ಲಾಡಳಿತ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. ಬರ್ಸಾನಾ ಪ್ರದೇಶವನ್ನು 12 ವಲಯಗಳಾಗಿ ವಿಂಗಡಿಸಲಾಗಿದೆ. 150 ಸಿಸಿಟಿವಿ ಕ್ಯಾಮೆರಾಗಳು, 10 ವಾಚ್ ಟವರ್‌ಗಳು, 4 ಡ್ರೋನ್ ಕ್ಯಾಮೆರಾಗಳನ್ನು ಸಹ ಆವರಣದಲ್ಲಿ ನಿಯೋಜಿಸಲಾಗಿದೆ. ಐದು ಎಎಸ್‌ಪಿಗಳು, ಹನ್ನೆರಡು ಸಿಒಗಳು, ಹನ್ನೆರಡು ಪೊಲೀಸ್ ಠಾಣೆ ಉಸ್ತುವಾರಿ, ಐವತ್ತು ಸಬ್ ಇನ್ಸ್‌ಪೆಕ್ಟರ್‌ಗಳು, ಏಳು ಮಹಿಳಾ ಸಬ್​ಇನ್ಸ್‌ಪೆಕ್ಟರ್‌ಗಳು, 650 ಕಾನ್‌ಸ್ಟೆಬಲ್‌ಗಳು, ಐವತ್ತು ಮಹಿಳಾ ಕಾನ್‌ಸ್ಟೆಬಲ್‌ಗಳು, ನಾಲ್ಕು ಪಿಎಸಿ ಕಂಪನಿ ಮತ್ತು ನಾಲ್ಕು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ.

Last Updated : Mar 23, 2021, 11:36 AM IST

ABOUT THE AUTHOR

...view details