ನಿಜಾಮಾಬಾದ್(ತೆಲಂಗಾಣ):ಮುಖವಾಡ ಧರಿಸಿ ಬ್ಯಾಂಕ್ನೊಳಗೆ ನುಗ್ಗಿರುವ ಕಳ್ಳರು, ಗ್ಯಾಸ್ ಕಟರ್ನಿಂದ ಲಾಕರ್ ಮುರಿದು ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ತೆಲಂಗಾಣದ ನಿಜಾಮಾಬಾದ್ನಲ್ಲಿ ಈ ಘಟನೆ ನಡೆದಿದೆ. ಕಳ್ಳತನದ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟುಕೊಡದ ಚಾಲಾಕಿಗಳು ಸಿಸಿಟಿವಿ ರೆಕಾರ್ಡರ್ ತೆಗೆದುಕೊಂಡು ಹೋಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 44ರ ಮೆಂಡೋರಾ ಮಂಡಲದ ಬುಸ್ಸಾಪುರದ ತೆಲಂಗಾಣ ಗ್ರಾಮೀಣ ಬ್ಯಾಂಕ್ನಲ್ಲಿ ಈ ದರೋಡೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗ್ರಾಮಾಭಿವೃದ್ಧಿ ಸಮಿತಿ ಕಟ್ಟಡದ ಮಹಡಿ ಬೀಗ ತೆಗೆದು ಬ್ಯಾಂಕ್ನೊಳಗೆ ನುಗ್ಗಿದ್ದಾರೆ. ಗ್ಯಾಸ್ ಸಿಲಿಂಡರ್ ಕಟರ್ ಬಳಸಿ ಸ್ಟ್ರಾಂಗ್ ರೂಮ್ನ ಬೀಗ ಮುರಿದಿದ್ದಾರೆ.
ಬ್ಯಾಂಕ್ ಲಾಕರ್ ಓಪನ್ ಮಾಡಲು ಗ್ಯಾಸ್ ಕಟರ್ ಬಳಕೆ ಮಾಡಿರುವ ಕಾರಣ, ಕೆಲ ಹಣ ಹಾಗೂ ದಾಖಲೆ ಸುಟ್ಟು ಕರಕಲಾಗಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 7.30 ಲಕ್ಷ ರೂ. ನಗದು ಹಾಗೂ 8.3 ಕೆಜಿ ಚಿನ್ನಾಭರಣ ಜೊತೆಗೆ ಕೆಲವೊಂದು ದಾಖಲೆ ತೆಗೆದುಕೊಂಡು ಪರಾರಿಯಾಗಿದ್ದಾರೆ.
ತೆಲಂಗಾಣ ಗ್ರಾಮೀಣ ಬ್ಯಾಂಕ್ನಲ್ಲಿ ದರೋಡೆ ಇದನ್ನೂ ಓದಿರಿ:'ಕ್ರಿಮಿನಲ್ಗಳು ರಾಜಕೀಯಕ್ಕೆ ಬರದಂತೆ ತಡೆಯುವುದು ಸಂಸತ್ತಿನ ಸಾಮೂಹಿಕ ಜವಾಬ್ದಾರಿ'
ಕಳ್ಳತನ ಮಾಡಿರುವ ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿದ್ದು, ವಿಡಿಯೋ ರೆಕಾರ್ಡ್ ಆಗಿರುವ ಡಿವಿಆರ್ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಕರಡಿ ಆಕಾರದ ಮುಖವಾಡ ಧರಿಸಿ, ಬ್ಯಾಂಕ್ನೊಳಗೆ ಬಂದಿದ್ದ ಅವರು, ಒಂದು ಮುಖವಾಡ ಬ್ಯಾಂಕ್ನೊಳಗೆ ಬಿಟ್ಟು ಹೋಗಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್ಗೆ ಬಂದಾಗ ಮಾಹಿತಿ ಗೊತ್ತಾಗಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.