ಗುವಾಹಟಿ (ಅಸ್ಸೋಂ): ಜಡಿಮಳೆಯಿಂದ ಮೇಘಾಲಯದಲ್ಲೂ ಭೂಕುಸಿತ ಉಂಟಾಗಿ ಬರಾಕ್ ಕಣಿವೆಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಸೋನಾಪುರ ಮತ್ತು ಲುಮ್ಸುಲಂನಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ರಸ್ತೆ ಎರಡು ಭಾಗವಾಗಿದ್ದು ವಾಹನಗಳು ಜಖಂಗೊಂಡಿವೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಅಸ್ಸಾಂನಲ್ಲಿ ಭಾರಿ ಮಳೆಗೆ ಎರಡು ಭಾಗವಾದ ಹೆದ್ದಾರಿ, ವಾಹನಗಳು ಜಖಂ - Landslides have started in Meghalaya as in Assam due to heavy rains
ರಾಷ್ಟ್ರೀಯ ಹೆದ್ದಾರಿ 6 ರ ಸೋನಾಪುರ ಮತ್ತು ಲುಮ್ಸುಲಂನಲ್ಲಿ ರಾತ್ರಿ ಭೂಕುಸಿತ ಸಂಭವಿಸಿದೆ ಎಂದು ಮೇಘಾಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಭೂಕುಸಿತದಲ್ಲಿ ರಸ್ತೆಯೇ ದೊಡ್ಡ ಭಾಗವಾಗಿದ್ದು, ವಾಹನಗಳು ಜಖಂಗೊಂಡಿವೆ.
ಭಾರೀ ಮಳೆಗೆ ಎರಡು ಭಾಗವಾದಂತೆ ಕುಸಿದ ಹೆದ್ದಾರಿ: ವಾಹನಗಳು ಜಖಂ
ಹಲವೆಡೆ ಭೂಕುಸಿತಗಳು ನಿರಂತರವಾಗಿದ್ದು ವಾಹನ ಸಂಚಾರವನ್ನು ಅನಿರ್ದಿಷ್ಟಾವಧಿಗೆ ತಡೆಯಲಾಗಿದೆ. ಇದರಿಂದಾಗಿ ಬರಾಕ್, ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದಿಂದ ಅಸ್ಸೋಂ ಹಾಗೂ ಇತರೆಡೆ ರಸ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ವಿಡಿಯೋ: ಪೊಲೀಸ್ ಅಧಿಕಾರಿಯ ಕಾಲರ್‌ಪಟ್ಟಿ ಹಿಡಿದು ಕಾಂಗ್ರೆಸ್‌ನ ರೇಣುಕಾ ಚೌಧರಿ ಆಕ್ರೋಶ