ಹೈದರಾಬಾದ್: "ಈ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ಮತ್ತು ಹಣವನ್ನು ಪಡೆಯಿರಿ.. ನೀವು ಏನನ್ನೂ ಮಾಡದೆ ದೊಡ್ಡ ಮೊತ್ತದ ಹಣವನ್ನು ಗಳಿಸಬೇಕು ಎಂದರೆ ಈ ವಿಡಿಯೋಗಳನ್ನು ನೋಡಿ ಎಂದು ಜಾಹೀರಾತು ನೀಡಿ ಯಾಮಾರಿಸುವ ಹೊಸ ರೀತಿಯ ಸೈಬರ್ ಕ್ರೈಂ ಅಧಿಕಾರಿಗಳ ನಿದ್ದೆಗೆಡಿಸಿದೆ.
ವ್ಯಕ್ತಿ ಮೋಸ ಹೋಗಿದ್ದು ಹೀಗೆ :ಮುಂಬೈ ಮೂಲದ ವ್ಯಕ್ತಿ ಹೈದರಾಬಾದ್ನ ಗಚಿಬೌಲಿಯಲ್ಲಿರುವ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 2 ರಂದು ಅವರು ಸ್ನೇಹಿತರ ಮೂಲಕ ಆ್ಯಪ್ (ezoic ads)) ಬಗ್ಗೆ ತಿಳಿದುಕೊಂಡರು. ಅವರ ಸ್ನೇಹಿತರು ಅವರು ಆ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ನೋಡಿದರೆ ಅವರು ಸುಲಭವಾಗಿ ಹಣ ಗಳಿಸಬಹುದು ಎಂದು ಹೇಳಿದರು.
ಈ ವ್ಯಕ್ತಿ ತನ್ನ ಸ್ನೇಹಿತನ ಮಾತುಗಳನ್ನು ನಂಬಿ ವೆಬ್‌ಸೈಟ್‌ನ ಸದಸ್ಯತ್ವಕ್ಕಾಗಿ 1000 ರೂ. ನೀಡಿದ್ದಾರೆ. ಕಂಪನಿಯ ಆಯೋಜಕರು ಈ ವ್ಯಕ್ತಿಗೆ ವೆಬ್‌ಸೈಟ್ ಲಿಂಕ್ ಕಳುಹಿಸಿದ್ದಾರೆ. ಅವರು ಆಗಾಗ ಕೆಲವು ಎಗ್ಗಿಲ್ಲದೇ ಒಂದರ ಹಿಂದೆ ಒಂದು ಹೆಚ್ಚೆಚ್ಚು ವಿಡಿಯೋಗಳನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುತ್ತಾರೆ.
ಆ ಪ್ರತಿ ವಿಡಿಯೋಗಳನ್ನು ನೀವು ಕನಿಷ್ಠ 3 ನಿಮಿಷಗಳ ಕಾಲ ನೋಡಬೇಕು. ನಂತರ ಕಂಪನಿಯಿಂದ ಗ್ರಾಹಕರ ಖಾತೆಗೆ 40 ರೂ.ಗಳನ್ನು ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಕೆಲವು ದಿನ ವಿಡಿಯೋ ವೀಕ್ಷಿಸಿದ ಬಳಿಕ ಹಣವನ್ನು ಜಮಾ ಮಾಡಲಾಗಿದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.
ಈ ನಡುವೆ ಒಂದು ದಿನ ವಿಲ್ಸನ್ ಎಂಬ ವ್ಯಕ್ತಿ ಕರೆ ಮಾಡಿ ನಿಮ್ಮ ಪರ್ಫಾಮೆನ್ಸ್ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಉತ್ತಮ ಪ್ರದರ್ಶನ ನೀಡುವವರಿಗಾಗಿ ವಿಶೇಷ ಯೋಜನೆ ಇದೆ ಎಂದು ಹೇಳಿದ್ದಾರೆ. ಕೇವಲ 2 ಲಕ್ಷ ರೂಪಾಯಿಗೆ ಇದೇ ತರಹದ 200 ವೆಬ್‌ಸೈಟ್ ಮಾರುವುದಾಗಿ ಹೇಳಿದ್ದಾರೆ. ನಂತರ 1.9 ಲಕ್ಷ ರೂಪಾಯಿ ಮರು ಪಾವತಿಯನ್ನೂ ನೀಡುವುದಾಗಿ ಹೇಳಿದ್ದಾರೆ.
ವಿಲ್ಸನ್ ಮಾತನ್ನು ನಂಬಿದ ಸಂತ್ರಸ್ತ 6 ಲಕ್ಷ ರೂ. ಹಣ ಪಾವತಿಸಿ 600 ವೆಬ್‌ಸೈಟ್‌ಗಳನ್ನು ಖರೀದಿಸಿದ್ದಾರೆ. ನಂತರ ಮರು ಪಾವತಿ ಪಡೆಯಲು ವಿಐಪಿ ಸದಸ್ಯತ್ವ ಪಡೆಯಲು ವಿಲ್ಸನ್ ಅವರಿಗೆ ಹೇಳಿದ್ದಾನೆ. ಅವನ ಮಾತಿನಂತೆ ಸಂತ್ರಸ್ತ ಪುನಃ 20 ಸಾವಿರ ಪಾವತಿ ಮಾಡಿ ವಿಐಪಿ ಸದಸ್ಯತ್ವ ಪಡೆದಿದ್ದಾರೆ.
ಆದರೆ, ಹಣವನ್ನು ಜಮಾ ಮಾಡಲಾಗಿಲ್ಲ. ಈ ಬಗ್ಗೆ ವಿಚಾರಿಸಿದ್ದಕ್ಕೆ ವಿಲ್ಸನ್ ನೀವು ಪದೇಪದೆ ವಿಡಿಯೋಗಳನ್ನು ನೋಡುತ್ತಿರಲಿಲ್ಲ ಆದ್ದರಿಂದ ಅವರು ಹಣ ನೀಡಲಿಲ್ಲ ಎಂದು ಸಮಜಾಯಿಷಿ ಹೇಳಿದ್ದಾನೆ.
ಅಲ್ಲದೇ 'ನಿಮ್ಮ ಖಾತೆಯು ಆರ್‌ಬಿಐ ಕಣ್ಗಾವಲಿನಲ್ಲಿದೆ. ಹಾಗಾಗಿ, ನಾವು ದೊಡ್ಡ ಮೊತ್ತದ ಹಣವನ್ನು ಜಮಾ ಮಾಡಿದರೆ ನಿಮಗೆ ಡೇಂಜರ್ ಎಂದು ವಿಲ್ಸನ್ ಹೇಳಿದ್ದಾನೆ. ಡೆಬಿಟ್ ಕಾರ್ಡ್ ಅಪಾಯದಲ್ಲಿದೆ ಎಂದು ಹೇಳಿದ್ದಕ್ಕೆ ಅವರು, ಈ ಸಮಸ್ಯೆಯನ್ನು ಪರಿಹರಿಸಲು ಕಾನೂನು ಮತ್ತು ಇತರ ವೆಚ್ಚಗಳಿಗಾಗಿ ಹಲವು ಕಂತುಗಳಲ್ಲಿ ಇನ್ನೂ 10,000 ರೂ. ಕೂಡ ಪಾವತಿಸಿದ್ದಾರೆ.
ಮತ್ತೆ ವಿಲ್ಸನ್ ಹೆಚ್ಚಿನ ಹಣವನ್ನು ಕೇಳಿದನಂತೆ. ಇದರಿಂದ ಅನುಮಾನಗೊಂಡ ಸಂತ್ರಸ್ತ ಎಲ್ಲಾ ವೆಬ್‌ಸೈಟ್‌ಗಳನ್ನು ಪರಿಶೀಲಿಸಿದ್ದಾರೆ. ನಂತರ ಆ ವೆಬ್‌ಸೈಟ್‌ಗಳು ನಕಲಿ ಎಂದು ತಿಳಿದು ಬಂದಿದ್ದು, ತಾನು ಮೋಸ ಹೋಗಿದ್ದೇನೆ ಎಂದು ಅರಿವಾಗಿದೆ. ಆ ಬಳಿಕ ಮೋಸ ಹೋಗಿರುವ ಆ ವ್ಯಕ್ತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.