ರತ್ಲಂ(ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಂ ಪ್ರದೇಶದಲ್ಲಿರುವ ಪೈಪ್ ಫ್ಯಾಕ್ಟರಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮಿನಲ್ಲಿನ ಪೈಪ್ ಸೇರಿದಂತೆ ಅನೇಕ ವಸ್ತು ಧಗಧಗನೇ ಹೊತ್ತಿ ಉರಿದಿವೆ.
ಮೋಹನ್ ನಗರದ ಗೋಡೌನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿರುವ ಕಾರಣ ಹೊತ್ತಿ ಉರಿದಿದ್ದು, ಯಾವುದೇ ರೀತಿಯ ಅನಾಹುತ ನಡೆಯಬಾರದು ಎಂಬ ಉದ್ದೇಶದಿಂದ ಪಕ್ಕದ ಮನೆಗಳಲ್ಲಿ ವಾಸವಾಗಿದ್ದ ಜನರನ್ನ ಸ್ಥಳಾಂತರ ಮಾಡಲಾಗಿದೆ.
ಅಕ್ರಮ ಪೈಪ್ ಗೋಡೌನ್ನಲ್ಲಿ ಬೆಂಕಿ ಕಾನೂನು ಬಾಹಿರವಾಗಿ ಈ ಗೋಡೌನ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನ ದೌಡಾಯಿಸಿ, ಬೆಂಕಿ ನಂದಿಸಿವೆ. ಯಾವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ ಪೈಪ್ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಇದನ್ನೂ ಓದಿರಿ:T-20 ವಿಶ್ವಕಪ್: ಭಾರತ ರಾಹುಲ್ನನ್ನು ಬ್ಯಾಟಿಂಗ್ನ ಪ್ರಮುಖ ಅಸ್ತ್ರವನ್ನಾಗಿಸಲಿ: ಕೊಹ್ಲಿಗೆ ಬ್ರೇಟ್ ಲೀ ಸಲಹೆ
ಈ ಗೋದಾಮು ಅಕ್ರಮವಾಗಿ ನಿರ್ಮಾಣಗೊಂಡಿರುವ ಕಾರಣ ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಬಂಧನ ಮಾಡಲಾಗುವುದು ಎಂದು ಪುರಸಭೆ ಆಯುಕ್ತರು ತಿಳಿಸಿದ್ದಾರೆ.