ಧನ್ಬಾದ್(ಜಾರ್ಖಂಡ್):ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ 6 ರ್ಯಾಕ್ಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿಯ ಮುತುವರ್ಜಿಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅವಘಡ ತಪ್ಪಿದೆ.
ಜಾರ್ಖಂಡ್ನ ಖನುದಿಹ್ ಕೋಲೈರಿಯಲ್ಲಿನ ಬಿಸಿಸಿಎಲ್ ಗಣಿಯಿಂದ ಗೂಡ್ಸ್ ರೈಲಿನಲ್ಲಿ ಕಲ್ಲಿದ್ದಲು ಸಾಗಿಸಲಾಗುತ್ತಿತ್ತು. ರೈಲು ಪಾರಸ್ನಾಥ್ ನಿಲ್ದಾಣಕ್ಕೆ ಬಂದಾಗ ದಟ್ಟ ಹೊಗೆ ಆವರಿಸಿಕೊಂಡಿದೆ. ಇದನ್ನು ಕಂಡ ಸ್ಟೇಷನ್ ಮಾಸ್ಟರ್ ತಕ್ಷಣವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಬಳಿಕ ಕಾರ್ಯಾಚರಣೆಗಿಳಿದ ರೈಲ್ವೆ ಸಿಬ್ಬಂದಿ ಅಗ್ನಿಶಾಮಕ ದಳದ ಸಹಾಯದಿಂದ ಜಲಫಿರಂಗಿ ಬಳಸಿ 6 ರ್ಯಾಕ್ಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದನ್ನು ತಡೆದಿದ್ದಾರೆ.
ಗೂಡ್ಸ್ ರೈಲಿನ ಮೂಲಕ ಸಾಗಿಸಲಾಗುತ್ತಿದ್ದ ಕಲ್ಲಿದ್ದಲಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಗಣಿಯಿಂದ ಕಲ್ಲಿದ್ದಲನ್ನು ರೈಲು ಬೋಗಿಗಳಿಗೆ ತುಂಬಿಸುವಾಗ ಬೆಂಕಿ ಸಹಿತವಾಗಿ ಕಲ್ಲಿದ್ದಲು ಬಂದಿದೆ. ರೈಲು ಚಲಿಸಿದಾಗ ಗಾಳಿಯ ಒತ್ತಡಕ್ಕೆ ಕಲ್ಲಿದ್ದಲಿಗೆ ಮತ್ತೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಓದಿ:ಏಪ್ರಿಲ್ 26 ರಿಂದ ಸಿಬಿಎಸ್ಸಿ 10-12 ನೇ ಕ್ಲಾಸ್ನ ಎರಡನೇ ಅವಧಿಯ ಪರೀಕ್ಷೆ