ಪುಣೆ(ಮಹಾರಾಷ್ಟ್ರ)ಶುಭ್ ಸಜಾವತ್ ಮಂಟಪಕ್ಕಾಗಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್‌ಗೆ ಬೆಂಕಿ ತಗುಲಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇದೇ ವೇಳೆ ಭಾರಿ ಅಗ್ನಿ ಅನಾಹುತದಿಂದಾಗಿ ಅಪಾರ ಹಾನಿ ಸಂಭವಿಸಿದೆ. ಈ ಘಟನೆ ಶುಕ್ರವಾರ ರಾತ್ರಿ 11.43ಕ್ಕೆ ವಾಘೋಲಿಯ ಮಹಾರಾಷ್ಟ್ರದ ಪುಣೆಯ ಉಬಲೆ ನಗರದಲ್ಲಿ ಸಂಭವಿಸಿದೆ.
ಶುಭ್ ಸಜಾವತ್ ಮಂಟಪ ಇದು ವಿವಿಧ ಕಾರ್ಯಕ್ರಮಗಳಿಗೆ ಪ್ಯಾಂಡಲ್‌ಗಳನ್ನು ಸ್ಥಾಪಿಸಲು ಅಲಂಕಾರ ಮಾಡುವ ವಸ್ತುಗಳನ್ನು ಒದಗಿಸುತ್ತದೆ.ರಾತ್ರಿ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಶುಭ್ ಸಜಾವತ್ ಮಂಟಪದಲ್ಲಿ ವಸ್ತು ಸಂಗ್ರಹಿಸಿಟ್ಟಿದ್ದ ಗೋಡೌನ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿತು. ಮಾಹಿತಿ ತಲುಪಿದ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಪುಣೆ ಅಗ್ನಿಶಾಮಕ ದಳದ 5 ಮತ್ತು ಪಿಎಂಆರ್‌ಡಿಎ ಅಗ್ನಿಶಾಮಕ ದಳದ 4 ಒಟ್ಟು 9 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಶತಾಯಗತಾಯ ಪ್ರಯತ್ನ ಮಾಡಿದವು.
ಆಗ್ನಿ ಶಾಮಕ ದಳ ಎಷ್ಟೇ ಪ್ರಯತ್ನ ಪಟ್ಟರೂ ಉರಿಯುವ ಬೆಂಕಿ ಜ್ವಾಲೆಯಿಂದ ಮೂವರು ಕಾರ್ಮಿಕರು ಸಂರಕ್ಷಿಸಲು ಸಾಧ್ಯವಾಗಲಿಲ್ಲ. ಕಾರ್ಮಿಕರ ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು, ಬೆಂಕಿಗೆ ಏನು ಕಾರಣ ಎಂಬುದಕ್ಕೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ. ಪುಣೆ ನಗರ ಪೊಲೀಸರು ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಗೋದಾಮು ಬೆಂಕಿಗಾಹುತಿ ಆದ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.