ಕರ್ನಾಟಕ

karnataka

ETV Bharat / bharat

ಮೆಕ್ಯಾನಿಕ್​ ಕೈಚಳಕದಲ್ಲಿ 'ಲಂಬೋರ್ಗಿನಿ'ಯಾದ ಮಾರುತಿ ಸ್ವಿಫ್ಟ್​​.. ಅಸ್ಸೋಂ ಸಿಎಂಗೆ ಗಿಫ್ಟ್​ - Assams motor mechanic change car

ಮಾರುತಿ ಸ್ವಿಫ್ಟ್​ ಕಾರನ್ನು ಐಷಾರಾಮಿ ಲಂಬೋರ್ಗಿನಿ ಕಾರಾಗಿ ಬದಲಿಸಿದ ಅಸ್ಸೋಂನ ಮೆಕ್ಯಾನಿಕ್​, ಅದನ್ನು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

maruti-swift-into-a-model-of-lamborghini
ಮೆಕ್ಯಾನಿಕ್​ ಕೈಚಳಕದಲ್ಲಿ ಲಂಬೋರ್ಗಿನಿಯಾದ ಮಾರುತಿ ಸ್ವಿಫ್ಟ್​​

By

Published : Dec 3, 2022, 10:57 AM IST

ಕರೀಂಗಂಜ್ (ಅಸ್ಸೋಂ):ಮಾರುತಿ ಸ್ವಿಫ್ಟ್​ ಕಾರನ್ನು ಐಷಾರಾಮಿ ಲಂಬೋರ್ಗಿನಿ ಮಾದರಿಯಲ್ಲಿ ಬದಲಿಸಿ, ಅದನ್ನು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರಿಗೆ ವ್ಯಕ್ತಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ. ಮೆಕ್ಯಾನಿಕ್ ಕೈಚಳಕದಲ್ಲಿ ಮೂಡಿದ ಈ ವಿಶೇಷ ಕಾರು ಕಂಡು ಅಸ್ಸೋಂ ಸಿಎಂ ಖುಷ್​ ಆಗಿದ್ದಾರೆ.

ಕರೀಂಗಂಜ್ ಜಿಲ್ಲೆಯ ಮೋಟಾರ್ ಮೆಕ್ಯಾನಿಕ್ ಆಗಿರುವ ನೂರುಲ್ ಹಕ್ ಲಂಬೋರ್ಗಿನಿಯ ನಿರ್ಮಾತೃ. ದುಬಾರಿ ಮತ್ತು ಐಷಾರಾಮಿಯಾದ ಲಂಬೋರ್ಗಿನಿ ಕಾರನ್ನು ಓಡಿಸಬೇಕೆಂಬ ಅವರ ಆಸೆಯು ಹಳೆಯ ಮಾರುತಿ ಸ್ವಿಫ್ಟ್ ಕಾರನ್ನು ಬದಲಿಸುವ ಐಡಿಯಾ ಕೊಟ್ಟಿದೆ.

ಮೆಕ್ಯಾನಿಕ್​ ಕೈಚಳಕದಲ್ಲಿ ಲಂಬೋರ್ಗಿನಿಯಾದ ಮಾರುತಿ ಸ್ವಿಫ್ಟ್

ಬದಲಿಗಾಗಿ 10 ಲಕ್ಷ ರೂಪಾಯಿ ಖರ್ಚು:ಈ ಹಿಂದೆ ಸ್ಪೋಟ್ಸ್​ ಕಾರನ್ನು ರೂಪಿಸಿದ ಅನುಭವವಿತ್ತು. ಲಂಬೋರ್ಗಿನಿ ಕಾರಿನ ತದ್ರೂಪವನ್ನೇ ರೂಪಿಸುವ ಇಚ್ಛೆಯೊಂದಿಗೆ ಯೋಜಿಸಿ 10 ಲಕ್ಷ ರೂಪಾಯಿ ಖರ್ಚು ಮಾಡಿ, ವಿವಿಧ ಬಿಡಿಭಾಗಗಳನ್ನು ಖರೀದಿಸಿ 4 ತಿಂಗಳಲ್ಲಿ ಐಷಾರಾಮಿ ಕಾರಿನಂತೆಯೇ ನಿರ್ಮಾಣ ಮಾಡಿದೆ ಎಂದು ನೂರುಲ್​ ಹೇಳಿದರು.

ಮೆಕ್ಯಾನಿಕ್​ ಕೈಚಳಕದಲ್ಲಿ ಲಂಬೋರ್ಗಿನಿಯಾದ ಮಾರುತಿ ಸ್ವಿಫ್ಟ್

18 ವರ್ಷಗಳಿಂದ ಮೆಕ್ಯಾನಿಕ್​ ಆಗಿ ಕೆಲಸ ಮಾಡುತ್ತಿರುವ ನೂರುಲ್​ ಹಳೆಯ ಕಾರುಗಳಿಗೆ ಮರುಜೀವ ನೀಡಿ, ಅವುಗಳು ಹೊಸ ರೂಪ ಪಡೆಯುವಂತೆ ಮಾಡುತ್ತಾರೆ. ಈಗ ರೂಪಿಸಿರುವ ಲಂಬೋರ್ಗಿನಿ ಕಾರನ್ನು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮೆಕ್ಯಾನಿಕ್​ ನೂರುಲ್​ ಫೆರಾರಿ ಮಾದರಿಯಲ್ಲಿ ಮತ್ತೊಂದು ಕಾರನ್ನು ರೂಪಿಸಲು ಯೋಜಿಸಿದ್ದೇನೆ. ಸರ್ಕಾರ ಈ ಕೆಲಸಕ್ಕೆ ನೆರವು ನೀಡಿದರೆ, ಮತ್ತಷ್ಟು ಕಾರುಗಳನ್ನು ಬದಲಿಸಿ ಹೊಸ ರೂಪ ನೀಡುವೆ ಎಂದು ಹೇಳಿದರು.

ಸಿಎಂ ಹಿಮಂತ್​ ಖುಷ್​:ಲಂಬೋರ್ಗಿನಿಯಾಗಿ ಮಾರ್ಪಾಡಾದ ಹಳೆಯ ಮಾರುತಿ ಸ್ವಿಫ್ಟ್ ಅನ್ನು ಕಂಡು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಅವರು ಅಚ್ಚರಿಯ ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೆಕ್ಯಾನಿಕ್​ ನೂರುಲ್​ರಿಂದ ಗುವಾಹಟಿಯಲ್ಲಿ ಕಾರು ಪಡೆದು ಅದರಲ್ಲಿ ಕುಳಿತು ಆನಂದಿಸಿದರು. ಕಾರಿನ ಮಾದರಿ ಥ್ರಿಲ್​ ನೀಡಿತು. ಥೇಟ್​ ಲಂಬೋರ್ಗಿನಿಯಂತೆಯೇ ಇದು ಕಾಣುತ್ತದೆ ಎಂದು ಕಾರಿನ ಚಿತ್ರಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಓದಿ:ಲಾರಿ-ಕಂಟೈನರ್​ ಮಧ್ಯೆ ಭೀಕರ ರಸ್ತೆ ಅಪಘಾತ.. ಚಾಲಕರು ಸೇರಿ ನಾಲ್ವರು ಸಜೀವ ದಹನ

ABOUT THE AUTHOR

...view details