ನವದೆಹಲಿ:ಕಾರು ಉತ್ಪಾದನೆಯಲ್ಲಿ ದೇಶದ ಬೃಹತ್ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ಮಾರಾಟ ವಹಿವಾಟು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜೂನ್‌ನಲ್ಲಿ ಮಾರಾಟ ಪ್ರಮಾಣ 1,47,368ಕ್ಕೆ ಯೂನಿಟ್ಗಳಿಗೆ ತಲುಪಿದೆ.
ಮೇ ತಿಂಗಳಲ್ಲಿ 46,555 ಯುನಿಟ್‌ಗಳಿಗೆ ಹೋಲಿಸಿದರೆ, ಕೋವಿಡ್ ಸಂಬಂಧಿತ ನಿರ್ಬಂಧ ಸರಾಗಗೊಳಿಸುವಿಕೆಯು ಕಂಪನಿಗೆ ಹೆಚ್ಚಿನ ಘಟಕಗಳನ್ನು ಮಾರಾಟಗಾರರಿಗೆ ರವಾನಿಸಲು ಸಹಾಯವಾಗಿದೆ. ದೇಶೀಯ ರವಾನೆ ಏಪ್ರಿಲ್ ತಿಂಗಳಲ್ಲಿ 1,30,348 ಯುನಿಟ್ ಆಗಿದೆ. ಮೇ ತಿಂಗಳಲ್ಲಿ ಇದು 35,293 ಯುನಿಟ್‌ಗಳಾಗಿದ್ದು, ಆಲ್ಟೊ ಮತ್ತು ಎಸ್-ಪ್ರೆಸ್ಸೊಗಳನ್ನು ಒಳಗೊಂಡಿರುವ ಮಿನಿ ಕಾರುಗಳ ಮಾರಾಟ ಜೂನ್ ತಿಂಗಳಲ್ಲಿ 17,439 ಯುನಿಟ್‌ಗಳಿಗೆ ಏರಿಕೆಯಾಗಿದೆ. ಈ ವರ್ಷದ ಮೇನಲ್ಲಿ 4,760 ಯುನಿಟ್ ಮಾರಾಟವಾಗಿದೆ.