ಕರ್ನಾಟಕ

karnataka

ETV Bharat / bharat

ಜಿಎಸ್‌ಟಿ ಕಡಿತ : ಮಾರುತಿ ಇಕೊ ಆ್ಯಂಬುಲೆನ್ಸ್ ಬೆಲೆಯಲ್ಲಿ ಇಳಿಕೆ - ಜಿಎಸ್‌ಟಿ ಕಡಿತ

ಮಾರುತಿ ಸುಜುಕಿ ಇಂಡಿಯಾ ಈಕೋ ಆ್ಯಂಬುಲೆನ್ಸ್ ಮೇಲಿನ ಜಿಎಎಸ್​ಸಿ ದರವನ್ನು ಇಳಿಸಿದೆ. ಜೂನ್ 14ರಿಂದ ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರುವಂತೆ ಗ್ರಾಹಕರಿಗೆ ಮಾರಾಟಗಾರರಿಂದ ಇನ್ವಾಯ್ಸ್ ಮಾಡಿದ ವಾಹನಗಳಿಗೆ ಈ ನಿಯಮ ಅನ್ವಯವಾಲಿದೆ..

maruti-cuts-eeco-ambulance-price-by-rs-88k-as-govt-reduces-gst
maruti-cuts-eeco-ambulance-price-by-rs-88k-as-govt-reduces-gst

By

Published : Jun 18, 2021, 8:44 PM IST

ನವದೆಹಲಿ: ಜಿಎಸ್‌ಟಿ ದರ ಕಡಿತಕ್ಕೆ ಅನುಗುಣವಾಗಿ ತನ್ನ ವ್ಯಾನ್ ಇಕೊ ಆ್ಯಂಬುಲೆನ್ಸ್ ಆವೃತ್ತಿಯ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತಿಳಿಸಿದೆ. ಶೇ. 28ರಷ್ಟಿದ್ದ ಈಕೋ ಆ್ಯಂಬುಲೆನ್ಸ್ ಮೇಲಿನ ಜಿಎಸ್​ಟಿ ದರವು ಶೇ.12ಕ್ಕೆ ಇಳಿದಿದೆ.

ಅದರಂತೆ, ಇಕೊ ಆ್ಯಂಬುಲೆನ್ಸ್‌ನ ಎಕ್ಸ್‌ಶೋರೂಂ ಬೆಲೆಯಲ್ಲಿ ಕಡಿತವಾಗಲಿದೆ. ದೆಹಲಿಯಲ್ಲಿ ಅನ್ವಯವಾಗುವ ಪರಿಷ್ಕೃತ ಬೆಲೆ 6,16,875 ರೂ. ಎಂದು ಎಂಎಸ್‌ಐ ತಿಳಿಸಿದೆ. ಈ ಬದಲಾವಣೆಯು ಜೂನ್ 14ರಿಂದ ಕಂಪನಿಯು ವಿತರಕರಿಗೆ ಇನ್ವಾಯ್ಸ್ ಮಾಡಿದ ವಾಹನಗಳಿಗೆ ಹಾಗೂ ಗ್ರಾಹಕರಿಗೆ ಮಾರಾಟಗಾರರಿಂದ ಇನ್ವಾಯ್ಸ್ ಮಾಡಿದ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಅದು ಹೇಳಿದೆ.

ABOUT THE AUTHOR

...view details