ಕರ್ನಾಟಕ

karnataka

ETV Bharat / bharat

ಇಂದು ಭೂಮಿ ಹತ್ತಿರ ಬರಲಿರುವ ಮಂಗಳ ಗ್ರಹ.. ಒಂದೇ ದಿಕ್ಕಿನಲ್ಲಿ ಸೂರ್ಯ ಭೂಮಿ ಮಂಗಳ - ಭೂಮಿಯ ಚಂದ್ರನಷ್ಟು ಸುಂದರವಲ್ಲ

ವಿಜ್ಞಾನ ಪ್ರಸಾರಕಿ ಸಾರಿಕಾ ಘಾರು ಪ್ರಕಾರ, ಈ ಖಗೋಳ ವಿದ್ಯಮಾನದ ಈ ಸಮಯದಲ್ಲಿ ಸೂರ್ಯನಿಗೆ ವಿರೋಧವಾಗಿ ಉದಯಿಸಿ ಮಂಗಳವು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಸಂಜೆ 6 ರ ಸುಮಾರಿಗೆ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದಾಗ ಕೆಂಪು ಗ್ರಹ ಮಂಗಳವು ಪೂರ್ವದಲ್ಲಿ ಉದಯಿಸುತ್ತದೆ. ಅದರೊಂದಿಗೆ ಪೂರ್ಣ ಚಂದ್ರ ಸಹ ಇಂದು ಇರುತ್ತದೆ.

Science broadcaster Sarika Gharu
ವಿಜ್ಞಾನ ಪ್ರಸಾರಕಿ ಸಾರಿಕಾ ಘಾರು ಮಾಹಿತಿ

By

Published : Dec 8, 2022, 1:21 PM IST

Updated : Dec 8, 2022, 6:06 PM IST

ನರ್ಮದಾಪುರಂ(ಮಧ್ಯಪ್ರದೇಶ):ಎರಡು ಉಪಗ್ರಹಗಳಿರುವ ಮಂಗಳ ಗ್ರಹವು 2 ವರ್ಷದ ಬಳಿಕ ಇಂದು ಭೂಮಿಯ ಹತ್ತಿರ ಬರಲಿದೆ. ಮಂಗಳ ಭೂಮಿ ಸೂರ್ಯ ಈ ಮೂರು ಒಂದೇ ಚರಣದಲ್ಲಿ ಡಿ.8ರಂದು ಕಾಣಲಿವೆ. ಭೂಮಿಯ ಮಂಗಳ ಗ್ರಹ ಹಾಗೂ ಸೂರ್ಯನ ನಡುವಿನ ಅಂತರ ಸುಮಾರು 80 ಮಿಲಿಯನ್ ಕಿಮೀ ಇರಲಿದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಮಂಗಳ ಗ್ರಹಕ್ಕೆ ಫೋಬೋಸ್ ಡೀಮೋಸ್ ಉಪಗ್ರಹಗಳಿವೆ. ಆದರೆ ಭೂಮಿಯು ಚಂದ್ರನಷ್ಟು ಸುಂದರವಲ್ಲ. ಮಂಗಳ ಗ್ರಹದಲ್ಲಿ ಇಂಗಾಲದ ಡೈಆಕ್ಸೈಡ್ ಹೆಚ್ಚಾಗಿದ್ದು, ಸಣ್ಣ ಪ್ರಮಾಣದಲ್ಲಿ ಆರ್ಗಾನ್ ಮತ್ತು ಸಾರಜನಕದಿಂದ ಅವೃತವಾಗಿದೆ. ಸೂರ್ಯನಿಗೆ ಮಂಗಳ ಗ್ರಹ ನಾಲ್ಕನೇಯದಾಗಿದ್ದು ಇದು ಧೂಳಿನಿಂದ ಆವೃತವಾಗಿರುವ ಶೀತ ಮರಭೂಮಿಯಾಗಿದೆ.

ವಿಜ್ಞಾನ ಪ್ರಸಾರಕಿ ಸಾರಿಕಾ ಘಾರು

ಕೆಂಪು ಗ್ರಹ ಮಂಗಳ:ವಿಜ್ಞಾನ ಪ್ರಸಾರಕಿ ಸಾರಿಕಾ ಘಾರು ಪ್ರಕಾರ, ಈ ಖಗೋಳ ವಿದ್ಯಮಾನದ ಈ ಸಮಯದಲ್ಲಿ ಸೂರ್ಯನಿಗೆ ವಿರೋಧಾಭಾಸವಾಗಿ ಉದಯಿಸಿ, ಮಂಗಳವು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಸಂಜೆ 6 ರ ಸುಮಾರಿಗೆ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದಾಗ ಕೆಂಪು ಗ್ರಹ ಮಂಗಳವು ಪೂರ್ವದಲ್ಲಿ ಉದಯಿಸುತ್ತದೆ. ಅದರೊಂದಿಗೆ ಪೂರ್ಣ ಚಂದ್ರವು ಇಂದು(ಡಿಸೆಂಬರ್ 8) ಇರುತ್ತದೆ.

ಪಶ್ಚಿಮ ದಿಕ್ಕಿನಲ್ಲಿ ಅಸ್ತಮ: ರಾತ್ರಿಯಿಡೀ ಆಕಾಶದಲ್ಲಿ ಉಳಿಯುವ ಮಂಗಳ ಗ್ರಹವು ಬೆಳಗ್ಗೆ 6 ಗಂಟೆಗೆ ಪಶ್ಚಿಮ ದಿಕ್ಕಿನಲ್ಲಿ ಅಸ್ತಮ ಹೊಂದುತ್ತದೆ. ಅದನ್ನು ಬರಿಗಣ್ಣಿನಿಂದಲೂ ನೋಡಬಹುದಾಗಿದೆ. ಚಂದ್ರನ ಒಂದು ವರ್ಷವು ಭೂಮಿಯ 687 ದಿನಗಳಿಗೆ ಸಮನಾಗಿರುತ್ತದೆ ಮತ್ತು ಒಂದು ದಿನವು 24 ಗಂಟೆ 37 ನಿಮಿಷಗಳಾಗಿರುತ್ತದೆ. ಅಕ್ಟೋಬರ್ 13, 2020 ರಿಂದ ಎರಡು ವರ್ಷಗಳ ಬಳಿಕ ಮಂಗಳವು ಹತ್ತಿರ ಬರುವುದನ್ನು ನೋಡಲು ಮರೆಯದಿರಿ. ಏಕೆಂದರೆ ಇದರ ನಂತರ ಈ ಖಗೋಳ ವಿದ್ಯಮಾನವೂ ಜನವರಿ 16, 2025 ರಂದು ಸಂಭವಿಸಲಿದೆ.

ಇದನ್ನೂಓದಿ:ಬದಲಿ ನಾವಿಗೇಷನ್​​ ಉಪಗ್ರಹ ಉಡಾವಣೆಗೆ ಭಾರತ ಸಜ್ಜು

Last Updated : Dec 8, 2022, 6:06 PM IST

ABOUT THE AUTHOR

...view details