ಸಿದ್ಧಾರ್ಥನಗರ(ಉತ್ತರ ಪ್ರದೇಶ): ಗೆಳೆಯನನ್ನು ಭೇಟಿಯಾಗಲು ಹೋಗಿದ್ದ ವಿವಾಹಿತ ಮಹಿಳೆಯೋರ್ವಳನ್ನು ಕಾಂಪೌಂಡ್ಗೆ ಕಟ್ಟಿ ಹಾಕಿರುವ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ತಾಲಿಬಾನ್ ರೀತಿಯಲ್ಲಿ ಶಿಕ್ಷೆ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಉತ್ತರ ಪ್ರದೇಶದ ಶೋಹರತ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಧ್ವಪುರದ ಮಹಿಳೆ ಶಿಕ್ಷೆಗೊಳಗಾಗಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಗೆಳೆಯನನ್ನು ಭೇಟಿ ಮಾಡುವ ಉದ್ದೇಶದಿಂದ ವಿವಾಹಿತ ಮಹಿಳೆ ಮನೆ ಬಿಟ್ಟು ತೆರಳಿದ್ದಳು. ಈ ವೇಳೆ ಆಕೆಯನ್ನು ಹಿಡಿದಿರುವ ಗ್ರಾಮಸ್ಥರು ದೇವಸ್ಥಾನದ ಕಾಂಪೌಂಡ್ಗೆ ಕಟ್ಟಿಹಾಕಿ, ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಎಸ್ಪಿ ಅಮಿತ್ ಕುಮಾರ್ ಮಾತನಾಡಿದ್ದು, ಕಳೆದ ಏಳು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪ್ರಕರಣದ ತನಿಖೆ ನಡೆಸಲು ಈಗಾಗಲೇ ತನಿಖಾ ಸಮಿತಿ ರಚನೆ ಮಾಡಲಾಗಿದೆ ಎಂದಿದ್ದಾರೆ.