ಕರ್ನಾಟಕ

karnataka

ETV Bharat / bharat

ಭತ್ತದ ವ್ಯಾಪಾರಿಯಿಂದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ - ವಿವಾಹಿತ ಮಹಿಳೆ ಮೇಲೆ ರೇಪ್​

ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ವಿವಾಹಿತ ಮಹಿಳೆಯೋರ್ವಳು ಅತ್ಯಾಚಾರಕ್ಕೊಳಗಾಗಿದ್ದಾಳೆ.

UP Rape case
UP Rape case

By

Published : Mar 5, 2021, 7:35 PM IST

ಭಾದೋಹಿ(ಉತ್ತರ ಪ್ರದೇಶ):ವಿವಾಹಿತ ಮಹಿಳೆಯೋರ್ವಳ ಮೇಲೆ ಭತ್ತದ ವ್ಯಾಪಾರಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತೆ ಹಾಗೂ ಆಕೆಯ ಗಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪತಿ ತಾನು ಮಾರಾಟ ಮಾಡಿದ್ದ ಭತ್ತದ ಹಣ ಪಡೆದುಕೊಳ್ಳಲು ಹೋಗಿದ್ದಾಗ 30 ವರ್ಷದ ಮಹಿಳೆ ಮೇಲೆ ವ್ಯಾಪಾರಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಆಕೆ ದೂರು ನೀಡಿದ್ದಾಳೆ. ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ, ಪೊಲೀಸರು ಆಕೆಯ ದೂರು ಹರಿದು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದಾದ ಬಳಿಕ ಭಾದೋಹಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯಾಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಈ ವೇಳೆ ಅತ್ಯಾಚಾರ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು(ದೌರ್ಜನ್ಯ ಕಾಯ್ದೆ) ಕಾಯ್ದೆ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 2016ರ ಬಿಹಾರ ಕಳ್ಳಭಟ್ಟಿ ದುರಂತ: 9 ಅಪರಾಧಿಗಳಿಗೆ ಮರಣದಂಡನೆ

ಪೊಲೀಸ್​ ಅಧೀಕ್ಷಕ ರಾಮ್ ಬದನ್​ ಸಿಂಗ್ ತಿಳಿಸಿರುವ ಪ್ರಕಾರ, ಸಂತ್ರಸ್ತೆಯ ಪತಿ ಕಳೆದ 15 ದಿನಗಳ ಹಿಂದೆ ಭತ್ತ ಮಾರಾಟ ಮಾಡಿದ್ದು,ಸಂತ್ರಸ್ತೆ ಹಣ ಪಡೆದುಕೊಳ್ಳಲು ಭತ್ತದ ವ್ಯಾಪಾರಿ ಮನೆಗೆ ಹೋಗಿದ್ದಾಗ ದುಷ್ಕೃತ್ಯವೆಸಗಿದ್ದಾನೆ ಎಂದಿದ್ದಾರೆ. ಜತೆಗೆ ಯಾರಿಗಾದರೂ ಮಾಹಿತಿ ನೀಡಿದ್ರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ABOUT THE AUTHOR

...view details