ಕಾಂಗ್ರಾ(ಹಿಮಾಚಲ ಪ್ರದೇಶ): ಮೊಬೈಲ್ನಲ್ಲಿ ಪಬ್ಜಿ ಅಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಪ್ರೀತಿಯಲ್ಲಿ ಬಿದ್ದು, ಮನೆ ಬಿಟ್ಟು ಹೋಗಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.
ಪಬ್ಜಿ ಆಡುವಾಗ ಸಹ ಪಾರ್ಟನರ್ ಆಗಿದ್ದ 12ನೇ ತರಗತಿ ವಿದ್ಯಾರ್ಥಿ ಜತೆ ಲವ್ನಲ್ಲಿ ಬಿದ್ದಿದ್ದು, ಆತನ ಭೇಟಿ ಮಾಡುವ ಉದ್ದೇಶದಿಂದ ಕಾಂಗ್ರಾದಿಂದ ವಾರಣಾಸಿಗೆ ಆಗಮಿಸಿದ್ದಾಳೆ. ಈ ವೇಳೆ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು, ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತ... ರೇಸ್ನಿಂದ ಹೊರಬಿದ್ದ ಇಂಗ್ಲೆಂಡ್!
ಫೆಬ್ರವರಿ ಮೊದಲ ವಾರದಲ್ಲಿ ಪಬ್ಜಿ ಪಾರ್ಟನರ್(ಲವರ್) ಭೇಟಿಯಾಗುವ ಉದ್ದೇಶದಿಂದ ಮನೆ ಬಿಟ್ಟಿದ್ದಾಳೆ. ಈ ವೇಳೆ ಸಂಬಂಧಿಕರು ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗಿಲ್ಲ. ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ವಿವಾಹಿತ ಮಹಿಳೆ ವಾರಣಾಸಿಯಲ್ಲಿ ಕಾಣಸಿಗುತ್ತಿದ್ದಂತೆ ಆಕೆಯನ್ನು ವಶಕ್ಕೆ ಪಡೆದು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಹಿಳೆ ಪಬ್ಜಿ ಆಟ ಆಡುತ್ತಿದ್ದಳು. ಈ ವೇಳೆ ಪರಿಚಯವಾದ ಪಬ್ಜಿ ಪಾರ್ಟನರ್ನೊಂದಿಗೆ ಲವ್ನಲ್ಲಿ ಬಿದ್ದಿದ್ದಾಳೆ. ಆತನ ಭೇಟಿ ಮಾಡಲು ವಾರಣಾಸಿಗೆ ಬಂದಿದ್ದಾಳೆ. ಈ ವೇಳೆ ಆತ 12ನೇ ತರಗತಿ ವಿದ್ಯಾರ್ಥಿ ಎಂಬುದು ಗೊತ್ತಾಗುತ್ತಿದ್ದಂತೆ ಖುದ್ದಾಗಿ ಮಹಿಳೆ ಕುಟುಂಬಸ್ಥರಿಗೆ ಫೋನ್ ಮಾಡಿ ತನ್ನ ಕರೆದುಕೊಂಡು ಹೋಗುವಂತೆ ವಿನಂತಿ ಮಾಡಿದ್ದಾಳೆ ಎನ್ನಲಾಗಿದೆ.