ಕರ್ನಾಟಕ

karnataka

ETV Bharat / bharat

ಗಂಡನಿಗೆ ಮತ್ತೊಂದು ಮದುವೆ: ಕೃಷ್ಣಾ ನದಿಗೆ ಹಾರಿದ ಗೃಹಿಣಿ! - ವಿಜಯವಾಡದಲ್ಲಿ ಕೃಷ್ಣ ನದಿಗೆ ಹಾರಿದ ವಿವಾಹಿತೆ,

ಗಂಡನಿಗೆ ಮತ್ತೊಂದು ಮದುವೆಯಾಗಿದೆ ಎಂದು ತಿಳಿದ ಗೃಹಿಣಿಯೊಬ್ಬಳ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

Married woman jump Krishna river, Married woman jump Krishna river in Vijayawada, Vijayawada crime news, ಕೃಷ್ಣಾ ನದಿಗೆ ಹಾರಿದ ವಿವಾಹಿತೆ, ವಿಜಯವಾಡದಲ್ಲಿ ಕೃಷ್ಣ ನದಿಗೆ ಹಾರಿದ ವಿವಾಹಿತೆ, ವಿಜಯವಾಡ ಅಪರಾಧ ಸುದ್ದಿ,
ಸಂಗ್ರಹ ಚಿತ್ರ

By

Published : Feb 17, 2021, 2:11 PM IST

ವಿಜಯವಾಡ:ಗಂಡ ಎರಡನೇ ಮದುವೆ ಆಗಿದ್ದಾನೆಂಬ ಮಾಹಿತಿ ತಿಳಿದು ಪತ್ನಿ ನದಿಗೆ ಹಾರಿರುವ ಘಟನೆ ಕನಕದುರ್ಗಮ್ಮ ಬ್ರಿಡ್ಜ್​ ಬಳಿ ನಡೆದಿದೆ.

ಯನಮಲಕುದುರಿನ ಮಾರ್ಕಂಡೇಯ ನಗರದ ನಿವಾಸಿ ಪದ್ಮ (28) ತನ್ನ ಪತಿಗೆ ಇನ್ನೊಂದು ಮದುವೆಯಾಗಿದೆ ಎಂದು ಮಾಹಿತಿ ಪಡೆದಿದ್ದಾಳೆ. ಇದನ್ನು ಜೀರ್ಣಿಸಿಕೊಳ್ಳದ ಪದ್ಮಾ ನೇರ ಕನಕದುರ್ಗಮ್ಮ ಸೇತುವೆ ಬಳಿ ಬಂದು ಕೃಷ್ಣಾ ನದಿಗೆ ಹಾರಿದ್ದಾಳೆ.

ಇದನ್ನು ಗಮನಿಸಿ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೋತ್ತಿಗಾಗಲೇ ಅಲ್ಲೇ ಇದ್ದ ಯುವಕರು ನದಿಗೆ ಹಾರಿ ಆಕೆಯನ್ನು ನೀರಿನಿಂದ ಹೊರ ತಂದಿದ್ದಾರೆ. ಬಳಿಕ ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಪೊಲೀಸರು ಮತ್ತು ಯುವಕರು ಸೇರಿ ಅರ್ಧ ಕಿ.ಮೀವರೆಗೆ ಹೊತ್ತೊಯ್ದು ಆಟೋದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯ್ತು.

ಪ್ರಜ್ಞೆ ಬಂದ ನಂತರ ಆತ್ಮಹತ್ಯೆ ಯತ್ನದ ಕುರಿತು ಪದ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನ ಗಂಡ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ನನಗೆ ತಿಳಿಯಿತು. ಹೀಗಾಗಿ ನಾನು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಪದ್ಮಾ ಮಾಹಿತಿ ನೀಡಿದ್ದಾರೆ. ಪದ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ಆಕೆಯ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ಮುಟ್ಟಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಪ್ರಗತಿಯಲ್ಲಿದೆ.

ABOUT THE AUTHOR

...view details