ಅಮೃತಸರ(ಪಂಜಾಬ್):ಪಂಜಾಬ್ನಲ್ಲಿ ಡ್ರಗ್ಸ್ ಹಾವಳಿ ಜೋರಾಗಿದೆ. ಡ್ರಗ್ಸ್ ಮಾಫಿಯಾ ಹೆಣ್ಣುಮಕ್ಕಳನ್ನೂ ಆವರಿಸಿಕೊಂಡಿದ್ದು, ನವವಿವಾಹಿತೆಯೊಬ್ಬಳು ಕಂಠಪೂರ್ತಿ ಕುಡಿದು ನಡೆಯಲಾಗದೇ ರಸ್ತೆ ಮಧ್ಯೆಯೇ ಹೋಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಮೃತಸರದ ಮಕ್ಬುಲ್‌ಪುರದಲ್ಲಿ ಅಮಲೇರಿದ ಮಹಿಳೆಯ ವಿಡಿಯೋ ಬೆಳಕಿಗೆ ಬಂದಿದೆ. ನವವಿವಾಹಿತೆಯಂತೆ ಕಾಣುವ ಈಕೆ ಕೈತುಂಬಾ ಬಳೆಗಳು, ಕೆಂಪು ಬಟ್ಟೆಯನ್ನು ಧರಿಸಿದ್ದಾರೆ. ಪಾನಮತ್ತಳಾಗಿರುವ ಈಕೆ ಒಂದು ಹೆಜ್ಜೆಯೂ ಮುಂದೆ ಹಾಕಲಾಗದ ಸ್ಥಿತಿಯಲ್ಲಿ ನಿಂತಲ್ಲೇ ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು.