ಕರ್ನಾಟಕ

karnataka

ETV Bharat / bharat

ಪ್ರೀತಿಸಿದವನ ಮದುವೆಯಾಗಲು ಅನುಮತಿ ನಿರಾಕರಣೆ: ವಿವಾಹಿತ ಮಹಿಳೆ ಆತ್ಮಹತ್ಯೆ

ವಿವಾಹಿತ ಮಹಿಳೆಯೋರ್ವಳು ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಳ್ಳಲು ಅನುಮತಿ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ.

Married woman dies
Married woman dies

By

Published : Aug 26, 2022, 4:31 PM IST

ಪಲಮು(ಜಾರ್ಖಂಡ್​):ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಲು ಅನುಮತಿ ನಿರಾಕರಣೆ ಮಾಡಿದ್ದಕ್ಕಾಗಿ ವಿವಾಹಿತ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಂಡ್​ನ ಪಲಮು ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಗರ್ಹ್ವಾದ ರಾಮಕಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮೃತರನ್ನು ಕಿರಣ್​ ದೇವಿ ಎಂದು ಗುರುತಿಸಲಾಗಿದ್ದು, ಇವರು ರಾಮಕಂಡ ನಿವಾಸಿ ಎಂದು ತಿಳಿದು ಬಂದಿದೆ.

ಎಸ್​​ಡಿಪಿಒ ಸುದರ್ಶನ್​ ನೀಡಿರುವ ಮಾಹಿತಿ ಪ್ರಕಾರ, ಕಿರಣ್​ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ಆದರೆ, ಅದಕ್ಕೂ ಮೊದಲಿನಿಂದಲೂ ಬೇರೆ ವ್ಯಕ್ತಿ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆಗಸ್ಟ್​​​​ 16ರಂದು ರಾತ್ರಿ ಕಿರಣ್​​ ಪ್ರಿಯಕರ ಮಹೇಶ್​​​ ಭೇಟಿಯಾಗಲು ಹೋದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು. ಈ ವೇಳೆ ಮಹೇಶ್ ಸ್ಥಳದಿಂದ​ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಇದನ್ನೂ ಓದಿ:ಪಕ್ಕದ ಜಮೀನು ಮಾಲೀಕರಿಂದ ಪೊಲೀಸ್​ ಕೇಸ್​.. ಸರ್ಕಾರಿ ನೌಕರಿ ಸಿಗಲ್ಲವೆಂದು ವಿವಾಹಿತೆ ಆತ್ಮಹತ್ಯೆ

ಕಿರಣ್​ ಮನೆಯಲ್ಲಿ ಬಿಟ್ಟು ಹೋಗಿದ್ದ ಬೈಕ್​ ತೆಗೆದುಕೊಳ್ಳಲು ಮರುದಿನ ಬೆಳಗ್ಗೆ ಬಂದಾಗ ಗ್ರಾಮಸ್ಥರು ಇಬ್ಬರನ್ನು ಕಟ್ಟಿ ಹಾಕಿ ಥಳಿಸಿದ್ದರು. ಇದಾದ ಬಳಿಕ ಕಿರಣ್​​​​ ಪತಿ ಆಕೆಯನ್ನು ಪತ್ನಿಯನ್ನಾಗಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಆಗಸ್ಟ್​ 19ರಂದು ಮನೆ ಬಿಟ್ಟು ಹೋಗುವಂತೆ ಒತ್ತಾಯಿಸಿದ್ದನು. ಇದಾದ ಬಳಿಕ ನೇರವಾಗಿ ಲವರ್ ಮಹೇಶ್​ ಮನೆಗೆ ಹೋಗಿದ್ದಾಳೆ. ಕಿರಣ್​ ಅನ್ಯಜಾತಿಯವಳಾಗಿದ್ದರಿಂದ ಮಹೇಶ್​ ಕುಟುಂಬಸ್ಥರು ಆಕೆಯನ್ನು ಒಪ್ಪಿಕೊಂಡಿಲ್ಲ. ಹೀಗಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details