ಕರ್ನಾಟಕ

karnataka

ETV Bharat / bharat

'ನಿನ್ನ ಮರೆತರೆ ಚಪ್ಪಲಿಯಿಂದ ಹೊಡಿ ಎಂದಿದ್ದನಂತೆ'...ಅದೇ ಕೆಲಸ ಮಾಡಿದ ಯುವತಿ! - ಯುವಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ

ನಡು ರಸ್ತೆಯಲ್ಲೇ ಯುವಕನೊಬ್ಬನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Married Girlfriend beat boyfriend
Married Girlfriend beat boyfriend

By

Published : Jun 29, 2021, 7:01 PM IST

ಶಿವಪುರಿ(ಮಧ್ಯಪ್ರದೇಶ):ಮಹಿಳೆಯೊಬ್ಬಳು ರಸ್ತೆ ಮಧ್ಯದಲ್ಲಿ ಚಪ್ಪಲಿಯಿಂದ ಯುವಕನಿಗೆ ಹೊಡೆದಿರುವ ಘಟನೆ ನಡೆದಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಮಧ್ಯಪ್ರದೇಶದ ಶಿವಪುರಿಯಲ್ಲಿ ಈ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಗುರುತಿಸಲು ಆಕೆಯ ಬಾಯ್​ಫ್ರೆಂಡ್​ ವಿಫಲಗೊಂಡಿದ್ದು, ಇದರ ಬೆನ್ನಲ್ಲೇ ಆತನಿಗೆ ನಡು ರಸ್ತೆಯಲ್ಲಿ ಮಾಜಿ ಲವರ್​ ಚಪ್ಪಲಿ ಏಟು ನೀಡಿದ್ದಾಳೆ.

ಯುವಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ

ಯಾವ ಕಾರಣಕ್ಕಾಗಿ ಚಪ್ಪಲಿ ಏಟು?

ಈ ಹಿಂದೆ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ವೇಳೆ ಯುವಕ ಪ್ರಮಾಣ ಮಾಡಿದ್ದನಂತೆ. 'ಒಂದು ವೇಳೆ ನಾನು ನಿನ್ನ ಮರೆತರೆ ಚಪ್ಪಲಿಯಿಂದ ಹೊಡಿ' ಎಂದು. ಇದೀಗ ದಿಢೀರ್ ಆಗಿ ಪ್ರತ್ಯಕ್ಷಗೊಂಡ ಮಾಜಿ ಲವರ್​ ಗುರುತಿಸುವಲ್ಲಿ ವಿಫಲಗೊಂಡಿರುವ ಕಾರಣ ಈ ಘಟನೆ ನಡೆದಿದೆ. ಸೋಮವಾರ ಸಂಜೆ ಶಿವಪುರಿ ಜಿಲ್ಲಾ ಆಸ್ಪತ್ರೆ ಗೇಟ್​ನಲ್ಲಿ ಇಬ್ಬರು ಮುಖಾಮುಖಿಯಾಗಿದ್ದು, ಆಕೆಯನ್ನ ಗುರುತಿಸುವಲ್ಲಿ ವಿಫಲಗೊಂಡಿದ್ದಾನೆ.

ಇದನ್ನೂ ಓದಿರಿ: ಮಾಡರ್ನಾ ಲಸಿಕೆಗೆ DCGI ಅನುಮೋದನೆ.. ಭಾರತಕ್ಕೆ ಅಮೆರಿಕದ ವ್ಯಾಕ್ಸಿನ್​ ಲಗ್ಗೆ!

ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಪ್ರತಿಕ್ರಿಯೆ ನೀಡಿರುವ ಮಹಿಳೆ, ಒಂದು ವೇಳೆ ನನ್ನ ಮರೆತರೆ ಚಪ್ಪಲಿಯಿಂದ ಹೊಡಿ ಎಂದು ಹೇಳಿದ್ದರು. ಹೀಗಾಗಿ ಈ ರೀತಿಯಾಗಿ ನಡೆದುಕೊಂಡಿದ್ದೇನೆ ಎಂದಿದ್ದಾಳೆ.

ABOUT THE AUTHOR

...view details