ನಮಕ್ಕಲ್ (ತಮಿಳುನಾಡು): ಮದುವೆ ಎಂಬುವುದು ನೂರಾರು ಜನುಮದ ಅನುಬಂಧ ಎಂದೇ ನಂಬಲಾಗುತ್ತದೆ. ಆದರೆ, ತಮಿಳುನಾಡಿನ ಓರ್ವ ಮಹಿಳೆಯು ಸರಣಿ ಮದುವೆಗಳನ್ನಾಗಿ ಗಂಡಂದಿರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಏಳನೇ ಮದುವೆಯಾಗುತ್ತಿದ್ದಾಗಲೇ ಆರನೇ ಗಂಡ ಮೋಸಗಾತಿಯನ್ನು ಹಿಡಿದಿದ್ದಾರೆ.
ಹೌದು, ನಮಕ್ಕಲ್ ಜಿಲ್ಲೆಯ ಪರಮತಿವೆಲ್ಲೂರು ಸಮೀಪದ ಕಳ್ಳಿಪಾಳ್ಯಂನ ನಿವಾಸಿಯಾದ ಧನಪಾಲ್ ಎಂಬುವವರು ಇದೇ ತಿಂಗಳ ಆರಂಭದಲ್ಲಿ ಮಧುರೈ ಜಿಲ್ಲೆಯ ಸಂಧ್ಯಾ (26 ವರ್ಷ) ಎಂಬುವವರನ್ನು ಮದುವೆಯಾಗಿದ್ದರು. ಸಂಧ್ಯಾ ಕಡೆಯಿಂದ ಕೆಲವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕೆಲವೇ ದಿನಗಳಲ್ಲಿ ಸಂಧ್ಯಾ ಧನಪಾಲ್ ಮನೆಯಿಂದ ಕಾಣೆಯಾಗಿದ್ದರು. ಆಕೆಯ ಮೊಬೈಲ್ ಸಂಖ್ಯೆ ಮತ್ತು ಆಕೆಯ ಕೆಲವು ಸಂಬಂಧಿರನ್ನು ಸಂಪರ್ಕಿಸಲು ಧನಪಾಲ್ ಯತ್ನಿಸಿದ್ದರು. ಆದರೆ, ಎಲ್ಲ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು.
ಆಭರಣ, ಬೆಲೆಬಾಳುವ ವಸ್ತುಗಳೂ ನಾಪತ್ತೆ:ಧನಪಾಲ್ ಮನೆಯಿಂದ ಸಂಧ್ಯಾ ಮಾತ್ರ ಕಾಣೆಯಾಗಿರಲಿಲ್ಲ. ಧನಪಾಲ್ ಮನೆಯಲ್ಲಿದ್ದ ಆಭರಣಗಳು ಮತ್ತು ಬೆಲೆಬಾಳುವ ಉತ್ಪನ್ನಗಳು ಕೂಡ ಸಂಧ್ಯಾರೊಂದಿಗೆ ನಾಪತ್ತೆಯಾಗಿದ್ದವು. ಮತ್ತೊಂದು ಅಚ್ಚರಿ ಎಂದರೆ ಧನಪಾಲ್ ಮದುವೆಗೆ ವಧುವಿನ ಹುಡುಕಾಟಕ್ಕಾಗಿ ಬ್ರೋಕರ್ ಬಾಲಮುರುಗನ್ ಎಂಬುವವರಿಗೆ 1.5 ಲಕ್ಷ ರೂ. ಹಣವನ್ನು ನೀಡಿದ್ದರು!.
ಮತ್ತೊಬ್ಬ ಬ್ರೋಕರ್ ಬಳಿ ಸಂಧ್ಯಾ ಫೋಟೋ!: ಮನೆಯಿಂದ ಸಂಧ್ಯಾ ಹಾಗೂ ಮನೆಯಲ್ಲಿನ ಆಭರಣಗಳು, ಬೆಲೆಬಾಳುವ ವಸ್ತುಗಳು ನಾಪತ್ತೆ ಬಗ್ಗೆ ಧನಪಾಲ್ ಪರಮತಿ ವೆಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಎರಡು ದಿನಗಲ್ಲಿ ಪರಮತಿ ವೆಲ್ಲೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ವಧುವಿನ ಹುಡುಕಾಟದಲ್ಲಿದ್ದಾಗ ಮತ್ತೊಬ್ಬ ಬ್ರೋಕರ್ ಧನಲಕ್ಷ್ಮಿ ಎಂಬುವವರಿಗೆ ಸಂಧ್ಯಾರ ಫೋಟೋ ಸಿಕ್ಕಿದೆ.