ಚಂದೌಲಿ (ಉತ್ತರ ಪ್ರದೇಶ):ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮದುವೆ ಕಾರ್ಯಕ್ರಮ ಸಾಂಗವಾಗಿ ನಡೆಯುತ್ತಿತ್ತು. ಆದ್ರೆ ವರ ಮಾಡಿಕೊಂಡ ಎಡವಿಟ್ಟಿನಿಂದ ವಧು ಮದುವೆಯನ್ನೇ ನಿರಾಕರಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು, ನೌಘರ್ ಪ್ರದೇಶದಲ್ಲಿ ಗುರುವಾರ ವಿವಾಹ ಕಾರ್ಯಕ್ರಮದಲ್ಲಿ ಕುಡಿದ ಅಮಲಿನಲ್ಲಿದ್ದ ವರನು, ವಧುವಿನ ಹಣೆಗೆ ಸಿಂಧೂರ ಹಚ್ಚಲು ಸಾಧ್ಯವಾಗಿಲ್ಲ. ಕುಡಿದ ನಶೆಯಲ್ಲಿ ವರ ಅವತಾರವನ್ನು ನೋಡಿದ ವಧು ಆಕ್ರೋಶಗೊಂಡು, ಮದುವೆಯಾಗಲು ನಿರಾಕರಿಸಿದ್ದಾಳೆ. ಇದಾದ ನಂತರ ಹುಡುಗಿಯ ಕಡೆಯ ಜನರು ವರನ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಸುದೀರ್ಘ ಮಾತಿನ ಚಕಮಕಿ ನಡೆಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ಸಮಾಧಾನಪಡಿಸಿದರು.
ಇದನ್ನೂ ಓದಿ:ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು
ಮದುವೆಯನ್ನು ನಿರಾಕರಿಸಿದ ವಧು:ಮದುವೆ ವಿಚಾರವು ಮಿರ್ಜಾಪುರ ಜಿಲ್ಲೆಯ ಅಹಿರೌರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಕ್‌ಪುರ ಗ್ರಾಮದಿಂದ ಚಕರಘಟ್ಟ ಪೊಲೀಸ್ ಠಾಣೆಯ ಮೆಟ್ಟಿಲು ಏರಿತು. ಮದುವೆ ಕಾರ್ಯಕ್ರಮದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ವೇಳೆ ವಧುವಿಗೆ ಸಿಂಧೂರ ದಾನ ಮಾಡುವ ಅವಕಾಶ ಬಂದಾಗ, ಕುಡಿದ ಅಮಲಿನಲ್ಲಿದ್ದ ವರನು, ವಧುವಿಗೆ ಸರಿಯಾಗಿ ಸಿಂಧೂರ ಹಚ್ಚಲು ಆಗಲಿಲ್ಲ. ನಶೆಯಲ್ಲಿದ್ದ ವರ ಹುಡುಗಿಯ ಹಣೆಗೆ ಸಿಂಧೂರ ಹಚ್ಚುವ ಬದಲು, ಆಕೆಯ ಮುಖಕ್ಕೆ ಸಿಂಧೂರ ಹಚ್ಚಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಮದುವೆಯನ್ನೇ ನಿರಾಕರಿಸಿದಳು.
ಇದನ್ನೂ ಓದಿ:ನಡು ರಸ್ತೆಯಲ್ಲಿ ಯುವಕನಿಗೆ ಅಮಾನುಷವಾಗಿ ಥಳಿಸಿದ ದುಷ್ಕರ್ಮಿಗಳು: ವೈರಲ್ ವಿಡಿಯೋ