ನವದೆಹಲಿ:ಭಾರತೀಯ ವನಿತೆಯರ ಹಾಕಿ ತಂಡ ಪದಕ ಗೆಲ್ಲಲು ವಿಫಲವಾದರೂ ಕೂಡಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಬೆನ್ನಲ್ಲೇ ಜೋರ್ಡ್ ಮರಿಜ್ನೆ ಹಾಕಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ವನಿತೆಯರ ತಂಡ ಗ್ರೇಟ್ ಬ್ರಿಟನ್ನೊಂದಿಗೆ ಹೋರಾಡಿ ಕಂಚು ಪಡೆಯುವಲ್ಲಿ ವಿಫಲವಾಗಿದ್ದು, ಈ ಪಂದ್ಯವೇ ಭಾರತೀಯ ಮಹಿಳಾ ಹಾಕಿ ತಂಡದೊಂದಿಗೆ ನನಗೆ ಕೊನೆಯ ಪಂದ್ಯ ಎಂದು ಜೋರ್ಡ್ ಮರಿಜ್ನೆ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಪ್ಲಾನ್ ಅನ್ನು ಹೊಂದಿಲ್ಲ. ಗ್ರೇಟ್ ಬ್ರಿಟನ್ನೊಂದಿಗಿನ ಪಂದ್ಯವೇ ನನಗೆ ಕೊನೆಯ ಪಂದ್ಯವಾಗಿದೆ. ಮುಂದಿನ ಹೊಣೆ ಮಹಿಳೆಯರ ಹಾಕಿ ತಂಡದ ಮತ್ತೋರ್ವ ತರಬೇತುದಾರರಾದ ಜನ್ನೇಕಾ ಶಾಪ್ಮನ್ಗೆ ಬಿಟ್ಟಿದ್ದು ಎಂದು ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.