ಹೈದರಾಬಾದ್(ತೆಲಂಗಾಣ):ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸಂಸ್ಥೆಯು ತನ್ನ ಚಂದಾದಾರರಿಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಮುಂದುವರೆಸಿಕೊಂಡು ಹೋಗಲು ಬದ್ಧವಾಗಿದೆ ಎಂದು ಮಾರ್ಗದರ್ಶಿ ಚಿಟ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ತಿಳಿಸಿದರು.
ಹೈದರಾಬಾದ್‌ನ ಉಪ್ಪಲ್ ಪೀರ್ಜಾಡಿಗುಡಾದಲ್ಲಿ ಇಂದು ಮಾರ್ಗದರ್ಶಿ ಚಿಟ್ ಫಂಡ್ಸ್ನ 111ನೇ ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು. ನೂತನ ಶಾಖೆಗೆ ಚಾಲನೆ ನೀಡಿದ ಶೈಲಜಾ ಕಿರಣ್, ಜ್ಯೋತಿ ಬೆಳಗಿಸಿ, ವೇದ ವಿದ್ವಾಂಸರ ಮಂತ್ರಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ 'ಈನಾಡು' ವ್ಯವಸ್ಥಾಪಕ ನಿರ್ದೇಶಕರಾದ ಕಿರಣ್ ಮತ್ತು 'ಈಟಿವಿ ಭಾರತ' ವ್ಯವಸ್ಥಾಪಕ ನಿರ್ದೇಶಕಿ ಬೃಹತಿ ಉಪಸ್ಥಿತರಿದ್ದರು.
ಮಾರ್ಗದರ್ಶಿಯ ಹೊಸ ಶಾಖೆ ಉದ್ಘಾಟಿಸಿ ಮಾತನಾಡಿದ ಎಂಡಿ ಶೈಲಜಾ ಕಿರಣ್, ಯುವಕರು ತಮ್ಮ ಭವಿಷ್ಯ ಬಗ್ಗೆ ದೂರದೃಷ್ಟಿಯಿಂದ ಮಾರ್ಗದರ್ಶಿಯಂತಹ ಸಂಘಟಿತ ಸಂಸ್ಥೆಗಳಲ್ಲಿ ಉಳಿತಾಯ ಮಾಡಿದರೆ, ತಮ್ಮೆಲ್ಲ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಜೀವನದಲ್ಲಿ ಉಳಿತಾಯದ ಹವ್ಯಾಸ ರೂಢಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಿದೆ ಎಂದು ಸಲಹೆ ನೀಡಿದರು. ಮಾರ್ಗದರ್ಶಿ ಸಂಸ್ಥೆಯು ಇನ್ನೂ ನೂರಾರು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಯುತ್ತಾ, ಜನಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತದೆ ಎಂದು ಅವರು ಹೇಳಿದರು.