ಕರ್ನಾಟಕ

karnataka

ETV Bharat / bharat

ಫುಟ್ಬಾಲ್​​ ದಂತಕತೆ ಮರಡೋನಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ : ವರದಿ - ಫುಟ್​​ಬಾಲ್​ ದಂತಕತೆ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ

ಫುಟ್ಬಾಲ್​ ತಾರೆ ಡಿಯಾಗೋ ಮರಡೋನಾ ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ 60 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಸದ್ಯ ಆಯೋಗವೊಂದು ಅವರ ಸಾವಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪ ಮಾಡಿದೆ.

maradona
maradona

By

Published : May 1, 2021, 4:56 PM IST

ಬ್ಯೂನಸ್ ಐರಿಸ್:ಫುಟ್ಬಾಲ್​​ ದಂತಕತೆ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರ ಮರಣದ ಕೆಲವು ತಿಂಗಳ ನಂತರ, ತಜ್ಞರ ಆಯೋಗವೊಂದು ಅವರ ವೈದ್ಯರು ಮತ್ತು ನರ್ಸ್​ಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.

"ಲಾ ನ್ಯಾಸಿಯಾನ್" ಪತ್ರಿಕೆ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿವೈದ್ಯಕೀಯ ಆಯೋಗದ ವರದಿಯನ್ನು ಉಲ್ಲೇಖಿಸಿ, "ಡಿಯಾಗೋ ಮರಡೋನಾ ಅವರ ಕೊನೆಯ ದಿನಗಳಲ್ಲಿ ವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ತಂಡದ ನಡವಳಿಕೆ ಅಸಮರ್ಪಕ ಅಚಾತುರ್ಯದಿಂದ ಕೂಡಿತ್ತು. ರೋಗಿಯನ್ನು ಅವನ ಹಣೆಬರಹಕ್ಕೆ ಬಿಡಲಾಯಿತು." ಎಂದು ಆರೋಪಿಸಿದೆ.

ಮರಡೋನಾ ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ 60 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಅವರು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಸ್ಟಾರ್‌ ಫುಟ್ಬಾಲ್ ಆಟಗಾರನಿಗೆ ಉತ್ತಮ ವೈದ್ಯಕೀಯ ಆರೈಕೆ ದೊರೆತಿದ್ದರೆ ಅವರು ಸಾಯುತ್ತಿರಲಿಲ್ಲ, ಕನಿಷ್ಠ ಅವರಿಗೆ ಬದುಕುಳಿಯುವ ಉತ್ತಮ ಅವಕಾಶವಿತ್ತು ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಎಂದು ವರದಿ ತಿಳಿಸಿದೆ.

ತನ್ನ ಜೀವನದ ಕೊನೆಯ ಎರಡು ವಾರಗಳಲ್ಲಿ ಬ್ಯೂನಸ್‌ನ ಮರಡೋನಾ ಅವರ ಮನೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಆಗಿರಬಹುದಾದ ಸಂಭವನೀಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಪಿಎ ವರದಿ ಮಾಡಿದೆ.

ನಿರ್ಲಕ್ಷ್ಯದ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಅವರ ವೈದ್ಯಕೀಯ ತಂಡದ ಸುಮಾರು ಏಳು ಜನರನ್ನು ತನಿಖೆ ನಡೆಸುತ್ತಿದೆ. ತಜ್ಞರ ವರದಿ ಪ್ರಕಾರ ಮರಡೋನಾ ಆರೈಕೆ ವೇಳೆ ಸಾಕಷ್ಟು ನ್ಯೂನತೆಗಳು ಕಂಡು ಬಂದಿವೆ. ಮರಡೋನಾರನ್ನು ವೈದ್ಯಕೀಯ ಮತ್ತು ಚಿಕಿತ್ಸಕ ಸಿಬ್ಬಂದಿ ಸರಿಯಾಗಿ ನೋಡಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

ABOUT THE AUTHOR

...view details