ಕರ್ನಾಟಕ

karnataka

ETV Bharat / bharat

COMPOSA ಬಲವರ್ಧನೆಗೆ ಮುಂದಾದರಾ ಮಾವೋವಾದಿಗಳು?: ಅಮೃತ್​​ಗೆ ಅಧಿಕಾರ ಹಸ್ತಾಂತರ! - ಕೊಂಪೊಸಾ ಸದಸ್ಯತ್ವ

ವಿದೇಶಿ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಬಾಂಧವ್ಯ ವೃದ್ಧಿಗೆ ಕ್ರಮ - ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಗೆ ಒತ್ತು - ಗುಪ್ತಚರ ಇಲಾಖೆಯಿಂದ ಮಾಹಿತಿ

ಕೊಂಪೊಸಾ ಬಲವರ್ಧನೆಗೆ ಮುಂದಾದ ಮಾವೋವಾದಿಗಳು; ಅಮೃತ್​​ಗೆ ಅಧಿಕಾರ ಹಸ್ತಾಂತರ
maoists-move-forward-to-reinforce-composa-handover-of-power-to-amrit

By

Published : Jan 2, 2023, 1:57 PM IST

ಹೈದರಾಬಾದ್​: ಮಾವೋವಾದಿ ಪಕ್ಷವೂ ವಿದೇಶಿ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಬಾಂಧವ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಸುದೀರ್ಘ ಅವಧಿ ಬಳಿಕ ಪಕ್ಷದಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಯನ್ನು ಮುನ್ನಲೆಗೆ ತರಲಾಗಿದ್ದು, ಅಮೃತ್​ ಅವರನ್ನು ಅದರ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಈ ಹೊಸ ಸಮಿತಿ ದಕ್ಷಿಣ ಏಷ್ಯಾದ ಮಾವೋವಾದಿ ಪಕ್ಷಗಳು ಮತ್ತು ಸಂಘಟನೆಗಳ ಜತೆ ಸಮನ್ವಯ ಸಾಧಿಸಲು ಈ ಸಮಿತಿ ಕೆಲಸ ಮಾಡಲಿದೆ.

ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾವೋವಾದಿ ಕ್ರಾಂತಿಕಾರಿ ಸಂಘಟನೆಗಳು ಕೊಂಪೊಸಾ ಸದಸ್ಯತ್ವವನ್ನು ಹೊಂದಿವೆ ಎಂಬುದು ಗಮನಾರ್ಹ. ಹಿಂದೆ ಜನರ ಯುದ್ಧ ಆಗಿದ್ದಾಗ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಫಿಲಿಪೈನ್ಸ್, ಜರ್ಮನಿ, ಫ್ರಾನ್ಸ್, ಟರ್ಕಿ, ಇಟಲಿ ಮತ್ತಿತರ ದೇಶಗಳಲ್ಲಿ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಸಂಬಂಧವಿತ್ತು. ಮಾವೋವಾದಿ ಪಕ್ಷವಾಗಿ ಪರಿವರ್ತನೆ ಆದ ನಂತರ 2005-2011 ರ ನಡುವೆ ಫಿಲಿಪೈನ್ಸ್ ಕಮ್ಯುನಿಸ್ಟ್ ಪಕ್ಷದ ತಜ್ಞರಿಂದ ಮಾವೋವಾದಿ ಪಕ್ಷದ ಕಾರ್ಯಕರ್ತರಿಗೆ ಸಶಸ್ತ್ರ ತರಬೇತಿ ನೀಡಲಾಯಿತು. 2009ರಲ್ಲಿ ದೆಹಲಿಯಲ್ಲಿ ಕೋಬಾದ್ ಗಾಂಧಿ ಬಂಧನ, 2010ರಲ್ಲಿ ಅದಿಲಾಬಾದ್ ಅರಣ್ಯದಲ್ಲಿ ಆಜಾದ್‌ನ ಎನ್‌ಕೌಂಟರ್‌, ಪಶ್ಚಿಮ ಬಂಗಾಳದ ಲಾಲ್‌ಗಢದಲ್ಲಿ ಕಿಶನ್‌ಜಿ ಎನ್‌ಕೌಂಟರ್‌ನಲ್ಲಿ ಪಕ್ಷಕ್ಕೆ ತೀವ್ರ ನಷ್ಟವಾಗಿತ್ತು. ನಾಯಕರ ಹೆಚ್ಚೆಚ್ಚು ಬಂಧನದಿಂದಾಗಿ ಅಂತಾರಾಷ್ಟ್ರೀಯ ವ್ಯವಹಾರಗಳ ವಿಷಯವು ಬಹುತೇಕ ಮರೆತೇ ಹೋಗಿತ್ತು. ಈಗ ಮತ್ತೆ ಪಕ್ಷದ ಚಟುವಟಿಕೆಗಳಲ್ಲಿ ಇದು ಪ್ರಮುಖ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ಫಿಲಿಫೈನ್ಸ್​ ಸಂಘಟನೆ ಜೊತೆ ಜೋಮ್​ ಸಭೆ:ಫಿಲಿಫೈನ್ಸ್​ನ ಕ್ರಾಂತಿಕಾರಿ ಸಂಘಟನೆಗಳ ಜೊತೆ ಸಂಬಂಧ ಬೆಳೆಸಲು ಮೋವೋವಾದಿಗಳು ಹೆಜ್ಜೆ ಇಟ್ಟಿರುವಂತೆ ತೋರುತ್ತಿದೆ. ಈ ಸಂಬಂಧ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯೊಂದು ಹೇಳಿದೆ. ಗುಪ್ತಚರ ಮಾಹಿತಿ ಅನುಸಾರ, ಜೂಮ್​ ಮೂಲಕ ಆನ್​ಲೈನ್​ ರಿವ್ಯೂ ಮತ್ತು ಸಮಾಲೋಚನೆಯನ್ನು ಇತರ ಸಂಘಟನೆಗಳ ಜೊತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು 16 ರಂದು ನಿಧನರಾದ ಫಿಲಿಪ್ಪೀನ್ಸ್‌ನ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜೋಸ್ ಮರಿಯಾ ಸಿಸನ್ ಅವರ ಸ್ಮರಣಾರ್ಥ ಜನವರಿ 16 ರಂದು ಪ್ರಸ್ತುತಿಗಳನ್ನು ನಡೆಸುವ ನಿರ್ಧಾರವು ಇದಕ್ಕೆ ಪುರಾವೆ ನೀಡಿದೆ ಎಂದು ನಂಬಲಾಗಿದೆ.

ಯಾರೀ ಅಮೃತ್​​:ಮಾವೋವಾದಿ ಪಕ್ಷದ ಹೊಸ ಬೆಳವಣಿಗೆ ಬಗ್ಗೆ ತೆಲಂಗಾಣ ಗುಪ್ತಚರ ಇಲಾಖೆ ಮಾಹಿತಿಯನ್ನು ಪಡೆದಿದೆ. ಅಮೃತ್​ ಅವರನ್ನು ನೇಮಕ ಮಾಡಿರುವುದನ್ನು ಇಲಾಖೆ ದೃಢಪಡಿಸಿದೆ. ಈತ ಯಾರು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಪಕ್ಷದ ಪಾಲಿಟ್​ಬ್ಯೂರೋ ಸದಸ್ಯ ಮಲ್ಲೊಜುಲ ವೇಣುಗೋಪಾಲ್​ ರಾವ್​ ಆಲಿಯಾಸ್​ ಸೋನು ದಾದಾ, ಸೇನಾ ವಿಷಯ ಮುಖ್ಯಸ್ಥ ತಿಪ್ಪಿರಿ ತಿರುಪತಿ ಆಲಿಯಾಸ್​ ಚೇತನ್​ ಅಥವಾ ಹಿರಿಯ ನಾಯಕ ಒಕೆ ಗಣೇಶ್​ ಈ ಮೂವರಲ್ಲಿ ಒಬ್ಬರು ಈ ಅಮೃತ್​ ಆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಿಖರ ಮಾಹಿತಿಯನ್ನು ಕಲೆ ಹಾಕಲು ಸತತವಾಗಿ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: 9 ಗಂಟೆಗಳ ಕಾಲ ಟ್ರಾಫಿಕ್​ ಜಾಮ್‌: 300 ವಕೀಲರ ವಿರುದ್ಧ ಪ್ರಕರಣ ದಾಖಲು

ABOUT THE AUTHOR

...view details