ಕರ್ನಾಟಕ

karnataka

ETV Bharat / bharat

ಪೊಲೀಸ್​ ಮಾಹಿತಿದಾರನೆಂಬ ಶಂಕೆ.. ಗ್ರಾಮ ರಕ್ಷಕನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು! - ಒಡಿಶಾದ ಸುದ್ದಿ

ಒಡಿಶಾದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಮಾಹಿತಿದಾರನೆಂದು ಶಂಕಿಸಿ, ಗ್ರಾಮರಕ್ಷಕನನ್ನು ನಕ್ಸಲರು ಕೊಂದಿದ್ದಾರೆ.

Maoists killed the village guard on suspicion of informer
ಪೊಲೀಸ್​ ಮಾಹಿತಿದಾರನೆಂದು ಶಂಕಿಸಿ, ಗ್ರಾಮರಕ್ಷಕನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು!

By

Published : Sep 1, 2021, 3:03 PM IST

ರಾಯಗಡ(ಒಡಿಶಾ): ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ, ಗ್ರಾಮ ರಕ್ಷಕನನ್ನು ನಕ್ಸಲರು ಕೊಂದಿರುವ ಘಟನೆ ರಾಯಗಡ ಜಿಲ್ಲೆಯ ಅಂಬದಲಾ ಪೊಲೀಸ್ ಠಾಣೆ ವ್ಯಾಪ್ತಿಯ ಟಿಕರ್ಪದಾ ಗ್ರಾಮದಲ್ಲಿ ನಡೆದಿದೆ.

ಸಂತೋಷ್ ದಂಡಸೇನಾ ಕೊಲೆಯಾದ ಗ್ರಾಮರಕ್ಷಕನಾಗಿದ್ದು, ವ್ಯಕ್ತಿಯ ಶವದ ಬಳಿ ನಕ್ಸಲರು ಕೈಬರಹದ ಪತ್ರವೊಂದನ್ನು ಬಿಟ್ಟು ಹೋಗಿದ್ದಾರೆ. ಈ ಪತ್ರದಲ್ಲಿ ಸಂತೋಷ್ ದಂಡಸೇನಾ ಪೊಲೀಸ್ ಮಾಹಿತಿದಾರನಾಗಿದ್ದನು. ಇದೇ ಕಾರಣದಿಂದ ಆತನನ್ನು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಸ್ಥಳದಲ್ಲಿ ಸಿಕ್ಕ ಪತ್ರ

ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದು, ತನ್ನ ಮನೆಯಿಂದ ಗ್ರಾಮ ರಕ್ಷಕನನ್ನು ಬಲವಂತವಾಗಿ ಹೊರಗೆ ಎಳೆದು ತಂದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 10 ಗಂಟೆಗೆ ನಕ್ಸಲರು ಸಂತೋಷ್ ಮನೆಗೆ ಆಗಮಿಸಿದ್ದು, ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿ ಕೊಲೆ ಮಾಡಲಾಗಿದೆ.

ಇತರರು ಕ್ಷಮೆ ಕೇಳದಿದ್ದರೆ ಅವರಿಗೂ ಕೂಡಾ ಇದೇ ರೀತಿಯ ಶಿಕ್ಷೆಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆ ನಂತರ ಮತ್ತಷ್ಟು ವಿಚಾರಗಳು ಬಹಿರಂಗವಾಗಲಿವೆ.

ಇದನ್ನೂ ಓದಿ:ನಕಲಿ ಲಸಿಕಾ ಪ್ರಕರಣದೊಂದಿಗೆ ಲಿಂಕ್​ ; ಕೋಲ್ಕತ್ತಾದ 10ಕಡೆ ಇಡಿ ದಾಳಿ

ABOUT THE AUTHOR

...view details