ಮಲ್ಕಾನ್‌ಗಿರಿ: ಪೊಲೀಸ್ ಮಾಹಿತಿದಾರ ಎನ್ನುವ ಶಂಕೆಯ ಮೇರೆಗೆ ಮಾವೋವಾದಿಗಳು ವ್ಯಕ್ತಿಯೊಬ್ಬನನ್ನು ಕೊಂದು ದೇಹವನ್ನು ಸುಟ್ಟು ಹಾಕಿರುವ ಘಟನೆ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಮಹುಪದರ್ ಪ್ರದೇಶದಲ್ಲಿ ಜರುಗಿದೆ.
ಆನಂದ್ ಎಂಬುವನನ್ನು ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಜನವರಿ 13 ರಂದು ಮಾವೋವಾದಿಗಳು ಆತನ ಮನೆಯಿಂದ ಅವನನ್ನು ಕರೆದುಕೊಂಡು ಹೋಗಿದ್ದರು. ಇದಾದ ನಂತರ ಮಲ್ಕಾನ್‌ಗಿರಿ ಜಿಲ್ಲೆಯ ಕೆರಿಮಿಟಿ ಗ್ರಾಮದ ಪ್ರಜಾ ನ್ಯಾಯಾಲಯದಲ್ಲಿ (ಜನತಾ ನ್ಯಾಯಾಲಯ) ಮರಣದಂಡನೆ ಶಿಕ್ಷೆ ವಿಧಿಸಿ ಆತನನ್ನು ಕೊಂದಿದ್ದಾರೆ.