ಮಲ್ಕಂಗಿರಿ (ಒಡಿಶಾ) :ಒಡಿಶಾದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಗುತ್ತಿಗೆದಾರನೊಬ್ಬನನ್ನು ಮನಬಂದಂತೆ ಕೊಚ್ಚಿ ಕೊಲೆಗೈದಿರುವ ಮಾವೋವಾದಿಗಳು, ಟ್ರ್ಯಾಕ್ಟರ್ ಮತ್ತು ಜೀಪು ಸೇರಿದಂತೆ ಒಟ್ಟು ಮೂರು ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಮೃತನನ್ನು ಸುಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ.
ಓದಿ:ಛತ್ತಿಸ್ಗಢದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರ ಹತ್ಯೆ, ಸ್ಫೋಟದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯ
ಒಡಿಶಾದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಸುಮಾರು 15 ರಿಂದ 20 ಮಾವೋವಾದಿಗಳು ಮೊದಲು ಸುಕುಮಾರ್ನನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾರೆ. ಆ ಬಳಿಕ ಎಸ್‌ಯುವಿ ಸೇರಿದಂತೆ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಸುಕುಮಾರ್‌ಗೆ ಸೇರಿದ ವಾಹನವೂ ಇದೆ.
ಗುರುವಾರ ಮಲ್ಕಂಗಿರಿ ಜಿಲ್ಲೆಯ ಮಥಿಲಿ ಪೊಲೀಸ್ ವ್ಯಾಪ್ತಿಯಲ್ಲಿರುವ ಗೋಲಿಯಾ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.