ಕರ್ನಾಟಕ

karnataka

ETV Bharat / bharat

Gadchiroli Encounter: ಈ ಎನ್‌ಕೌಂಟರ್ ನಕಲಿ.. ನ್ಯಾಯಾಂಗ ತನಿಖೆಯಾಗಲಿ - ನಕ್ಸಲರ ಆಗ್ರಹ - east godavari district maoist division committee

ಗಡ್ಚಿರೋಲಿಯಲ್ಲಿ ನಡೆದ ಎನ್​ಕೌಂಟರ್ ಸಂಪೂರ್ಣ ನಕಲಿ ಎಂದು ಆರೋಪಿಸಿರುವ ಮಾವೋವಾದಿಗಳು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ..

Gadchiroli Encounter
Gadchiroli Encounter

By

Published : Nov 14, 2021, 7:37 PM IST

ಹೈದರಾಬಾದ್(ತೆಲಂಗಾಣ) : ನಿನ್ನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ (Gadchiroli Encounter) 26 ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದು(26 naxals killed), ಈ ಸಂಬಂಧ ನ್ಯಾಯಾಂಗ ತನಿಖೆ (judicial enquiry) ಯಾಗಬೇಕೆಂದು ಮಾವೋವಾದಿಗಳು (Maoists) ಆಗ್ರಹಿಸಿದ್ದಾರೆ.

ತೆಲಂಗಾಣದ ಭದ್ರಾದ್ರಿ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲಾ ಮಾವೋವಾದಿ ವಿಭಾಗ ಸಮಿತಿ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಈ ಎನ್‌ಕೌಂಟರ್ ಸಂಪೂರ್ಣ ನಕಲಿ (fake encounter) ಎಂದು ಆರೋಪಿಸಿದ್ದಾರೆ.

ಮಾವೋವಾದಿಗಳು ಹೊರಡಿಸಿದ ಪತ್ರ

ಇದನ್ನೂ ಓದಿ: ಗಡ್ಚಿರೋಲಿ: ಮೋಸ್ಟ್ ವಾಂಟೆಡ್ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಸಂಚು ನಡೆಸುತ್ತಿವೆ. ಇದಕ್ಕಾಗಿ ಎನ್‌ಕೌಂಟರ್ ಹೆಸರಿನಲ್ಲಿ ನಮ್ಮವರನ್ನು ಕೊಂದಿದ್ದಾರೆ. ಇದಕ್ಕೆ ಸರ್ಕಾರ ತಕ್ಕ ಶಿಕ್ಷೆ ಅನುಭವಿಸಲಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಪತ್ರದ ಬಳಿಕ ಭದ್ರಾಚಲಂ ಏಜೆನ್ಸಿ ಪೊಲೀಸರು ಕಟ್ಟೆಚ್ಚರವಹಿಸಿದ್ದು, ಮೃತ ನಕ್ಸಲರಲ್ಲಿ ತೆಲುಗು ರಾಜ್ಯಗಳಿಗೆ ಸೇರಿದವರಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗಢ್​ಚಿರೋಲಿ ಎನ್​ಕೌಂಟರ್: ಸಿ-60 ಕಮಾಂಡೋಗಳಿಗೆ ಅದ್ಧೂರಿ ಸ್ವಾಗತ

ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿ ಅರಣ್ಯ ಪ್ರದೇಶದಲ್ಲಿ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ನಕ್ಸಲ್ ನಿಗ್ರಹ ಪೊಲೀಸ್ ದಳವು ಮೋಸ್ಟ್ ವಾಂಟೆಡ್​ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ಮಂದಿ ನಕ್ಸಲರನ್ನು ಹತೈಗೈದಿದ್ದರು.

ABOUT THE AUTHOR

...view details